Paris Olympics 2024: ಭಾರತದ ಕುಸ್ತಿ ಪಟು ಅಮನ್‌ಗೆ ಸೆಮಿಫೈನಲ್‌ನಲ್ಲಿ ಸೋಲು
ಭಾರತದ ಸ್ಟಾರ್ ಕುಸ್ತಿ ಪಟು ಅಮನ್ ಸೆಹ್ರಾವತ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಫ್ರೀಸ್ಟೈಲ್ 57 ಕೆಜಿ ಪುರುಷರ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಹಾಕಿ ತಂಡ ಕಂಚಿನ ಪದಕದ ಸಾಧನೆಯ ಬಳಿಕ ಎಲ್ಲರ ಚಿತ್ತ ಭಾರತದ ಕುಸ್ತಿ ಪಟು ಅಮನ್ ಸೆಹ್ರಾವತ್ ಅವರ ಮೇಲೆ ಇತ್ತು. ಪುರುಷರ ಕುಸ್ತಿಯ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಅಮನ್ ಸೆಮಿಫೈನಲ್ ಪ್ರವೇಶಿಸಿದ್ದರು. ಉಪಾಂತ್ಯ ಪಂದ್ಯದಲ್ಲಿ ಅಮನ್ ಕೇವಲ 74 ಸೆಕೆಂಡ್‌ಗಳಲ್ಲಿ ಸೋಲು ಅನುಭವಿಸಿದರು.

ಗುರುವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಮನ್, ಜಪಾನಿನ ಕುಸ್ತಿಪಟು ರೇ ಹಿಗುಚಿ ವಿರುದ್ಧ ಸೋಲು ಕಂಡರು. ಇದಕ್ಕೂ ಮುನ್ನ ಅಮನ್ ಕ್ವಾರ್ಟರ್ ಫೈನಲ್‌ನಲ್ಲಿ ಅಲ್ಬೇನಿಯಾದ ಝೆಲಿಂಖಾನ್ ಅಬಕರೋವ್ ಅವರನ್ನು 12-0 ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಅಮನ್ ಗೆ ಕಂಚಿನ ಪದಕ ಗೆಲ್ಲುವ ಅವಕಾಶ ಇನ್ನೂ ಇದೆ. ಕಂಚಿನ ಪಂದ್ಯ ಶುಕ್ರವಾರ ರಾತ್ರಿ 11 ಗಂಟೆಗೆ ನಡೆಯಲಿದೆ.
Story first published: Thursday, August 8, 2024, 22:01 [IST]
Other articles published on Aug 8, 2024
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications