Neeraj Chopra: ಬಂಗಾರ ಕಳೆದುಕೊಂಡರು 4 ದೊಡ್ಡ ದಾಖಲೆಗಳನ್ನು ಸೃಷ್ಟಿಸಿದ ಗೋಲ್ಡನ್ ಬಾಯ್!
ಆಗಸ್ಟ್ 9 ಶುಕ್ರವಾರ, ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡರೂ ಇತಿಹಾಸವನ್ನು ಸೃಷ್ಟಿಸಿದ್ದಾರೆ. ನೀರಜ್ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಗುರುವಾರ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ, ನಿನ್ನೆ ನೀರಜ್ ದಿನವಾಗಿರಲಿಲ್ಲ. ಚಿನ್ನ ಅವರ ಕೈಯಿಂದ ಜಾರಿತು. ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ಎಸೆದು ಒಲಿಂಪಿಕ್ ದಾಖಲೆ ಮುರಿದು ಚಿನ್ನದ ಪದಕ ಗೆದ್ದರು.ಇತ್ತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟ 26 ವರ್ಷದ ನೀರಜ್ ಚೋಪ್ರಾ ಅವರು ಇಲ್ಲಿಯವರೆಗೆ ಯಾವುದೇ ಭಾರತೀಯ ಅಥ್ಲೀಟ್ ಮಾಡದ ಸಾಧನೆ ಮಾಡಿದರು.

ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಎರಡು ಪದಕ
ನೀರಜ್ ಅವರು 89.45 ಮೀಟರ್‌ಗಳ ಎಸೆತದೊಂದಿಗೆ ಬೆಳ್ಳಿ ಪದಕವನ್ನು ಗೆದ್ದರು. ಈ ಮೂಲಕ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಸತತ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯರಾದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಈಗ ಪ್ಯಾರಿಸ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಸತತ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆದ್ದ 3ನೇ ಭಾರತೀಯ
ಪ್ಯಾರಿಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ನೀರಜ್ ಚೋಪ್ರಾ ಸತತ 2 ಒಲಿಂಪಿಕ್ಸ್‌ನಲ್ಲಿ (2021, 2024) ವೈಯಕ್ತಿಕ ಪದಕ ಗೆದ್ದ ಮೂರನೇ ಭಾರತದ ಆಟಗಾರ ಎಂಬ ವಿಶೇಷ ದಾಖಲೆ ಬರೆದರು. ನೀರಜ್‌ಗಿಂತ ಮೊದಲು ಸ್ಟಾರ್ ಕುಸ್ತಿಪಟು ಸುಶೀಲ್ ಕುಮಾರ್ (2008 ಮತ್ತು 2012) ಮತ್ತು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (2016 ಮತ್ತು 2021) ಈ ಸಾಧನೆ ಮಾಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಅತಿಹೆಚ್ಚು ವೈಯಕ್ತಿಕ ಪದಕ
ನೀರಜ್ ಚೋಪ್ರಾ ಅವರು ತಮ್ಮ ಹೆಸರಿನಲ್ಲಿ ಮತ್ತೊಂದು ದೊಡ್ಡ ರೆಕಾರ್ಡ್ ಮಾಡಿದರು. ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಕ್ರೀಡೆಗಳಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ 5ನೇ ಭಾರತೀಯ ಅಥ್ಲೀಟ್ ಎಂಬ ಹೊಸ ಮೈಲಿಗಲ್ಲು ತಲುಪಿದರು. ವೈಯಕ್ತಿಕ ಕ್ರೀಡೆಗಳಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಆಟಗಾರರ ಹೆಸರುಗಳು ಇಲ್ಲಿದೆ. ನಾರ್ಮನ್ ಪ್ರಿಚರ್ಡ್ (2 ಬೆಳ್ಳಿ), ಸುಶೀಲ್ ಕುಮಾರ್ (1 ಬೆಳ್ಳಿ, 1 ಕಂಚು), ಪಿ ವಿ ಸಿಂಧು (1 ಬೆಳ್ಳಿ, 1 ಕಂಚು), ಮನು ಭಾಕರ್ (2 ಕಂಚು), ನೀರಜ್ ಚೋಪ್ರಾ (1 ಚಿನ್ನ, 1 ಬೆಳ್ಳಿ).
ಯಶಸ್ವಿ ಅಥ್ಲೀಟ್
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ವೈಯಕ್ತಿಕ ಕ್ರೀಡೆಯಲ್ಲಿ ಅತ್ಯಂತ ಯಶಸ್ವಿ ಭಾರತ ಅಥ್ಲೀಟ್ ಆದರು. ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ 1 ಚಿನ್ನ, 1 ಬೆಳ್ಳಿ ಗೆದ್ದು, ಆಗ್ರ ಸ್ಥಾನದಲ್ಲಿದ್ದಾರೆ. ಇನ್ನೊಂದೆಡೆ ಪಿವಿ ಸಿಂಧು (1 ಬೆಳ್ಳಿ, 1 ಕಂಚು), ಸುಶೀಲ್ ಕುಮಾರ್ (1 ಬೆಳ್ಳಿ, 1 ಕಂಚು) ಮತ್ತು ಮನು ಭಾಕರ್ (2 ಕಂಚು) ಅವರು ಕೂಡ ತಲಾ 2 ಒಲಿಂಪಿಕ್ಸ್ ಪದಕಗಳನ್ನು ಗೆಲ್ಲುವ ಮೂಲಕ ಯಶಸ್ವಿ ಭಾರತದ ಆಟಗಾರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications