Paris Olympics: ಚಿನ್ನದ ಸನಿಹಕ್ಕೆ ನೀರಜ್ ಚೋಪ್ರಾ: ಅರ್ಹತಾ ಸುತ್ತಿನಲ್ಲಿ 89.34 ಮೀಟರ್ ಜಾವೆಲಿನ್ ಎಸೆದ ಸ್ಟಾರ್
ಭಾರತದ ನೀರಜ್ ಚೋಪ್ರಾ ಅವರು ಪ್ಯಾರಿಸ್ ಒಲಿಂಪಿಕ್ಸ್ ಜಾವಿಲಿನ್ ಥ್ರೋ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಇವರು ತಮ್ಮ ಮೊದಲ ಪ್ರಯತ್ನದಲ್ಲೇ ಇವರು ಫೈನಲ್‌ಗೆ ಬೇಕಿದ್ದ ಅರ್ಹತೆಯ ಗೆರೆಯನ್ನು ದಾಟಿ ಮುನ್ನಡೆದರು.
ಮಂಗಳವಾರ ನಡೆದ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಅಮೋಘ ಪ್ರದರ್ಶನ ನೀಡಿದರು. ಇವರು ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀಟರ್ ದೂರ ಜಾವೆಲಿನ್ ಎಸೆದು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದರು. ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ನೀರಜ್ ಚೋಪ್ರಾ ಮತ್ತೊಮ್ಮೆ ಇಂತಹದ್ದೇ ಸಾಧನೆ ಮಾಡಲು ಎದುರು ನೋಡುತ್ತಿದ್ದಾರೆ.

ಮೊದಲ ಪ್ರಯತ್ನದಲ್ಲೇ ಯಶಸ್ಸು
ಬಿ ಗುಂಪಿನಲ್ಲಿ ನೀರಜ್ ಚೋಪ್ರಾ ಮೊದಲ ಜಾವೆಲಿನ್ ಅಥ್ಲಿಟ್ ಆಗಿ ಕಾಣಿಸಿಕೊಂಡರು. ಇವರು ತಮ್ಮ ಮೊದಲ ಪ್ರಯತ್ನದಲ್ಲೇ ಕ್ವಾಲಿಫೈ ಮಾರ್ಕ್ ಪಾರು ಮಾಡಿದರು. ಇವರ ಭರ್ಜರಿ ಪ್ರಯತ್ನದ ಫಲವಾಗಿ ನೀರಜ್ ಗುರುವಾರ ನಡೆಯಲಿರುವ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ನೀರಜ್ ಎಸೆದ ಜಾವೆಲಿನ್ ಈ ಆವೃತ್ತಿಯ ಬೆಸ್ಟ್ ಪ್ರದರ್ಶನವಾಗಿದೆ.
ಇನ್ನು ಇದೇ ಗುಂಪಿನಲ್ಲಿ ಆಂಡರ್ಸನ್ ಪಿಟರ್ಸ್ 88.63 ಮೀಟರ್ ದೂರ ಎಸೆದು ಫೈನಲ್‌ಗೆ ಅರ್ಹತೆ ಪಡೆದರು. ಇನ್ನು ಪಾಕಿಸ್ತಾನದ ಅರ್ಷದ್ ನದೀಮ್ 86.59 ಮೀಟರ್ ದೂರ ಜಾವೆಲಿನ್ ಎಸೆದು ಫೈನಲ್‌ಗೆ ನೇರವಾಗಿ ಅರ್ಹತೆ ಪಡೆದರು.

ಭಾರತದ ಇನ್ನೊರ್ವ ಜಾವೆಲಿನ್ ಅಥ್ಲಿಟ್ ಕಿಶೋರ್ ಜೆನಾ ಅವರು ನಿರಾಸೆ ಅನುಭವಿಸಬೇಕಾಯಿತು. ಓಡಿಶಾದ ಕಿಶೋರ್ ಫೈನಲ್‌ಗೆ ಕ್ವಾಲಿಫೈ ಆಗಲು ಹಾಕಿದ್ದ 84 ಮೀಟರ್ ಮಾರ್ಕ್ ಕ್ರಾಸ್ ಮಾಡುವಲ್ಲಿ ವಿಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications