For Quick Alerts
ALLOW NOTIFICATIONS  
For Daily Alerts

ನೋವಿನ ಮಧ್ಯ 30 ಸೆಕೆಂಡ್‌ ಆಡಿದ ನಿಶಾ: ಸೋತರೂ ಮನ ಗೆದ್ದ ಭಾರತೀಯ ಕುಸ್ತಿ ಪಟು

ಆಗಸ್ಟ್ 6 ಮಂಗಳವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಮಹಿಳಾ ಕುಸ್ತಿಪಟು ನಿಶಾ ದಹಿಯಾ ಅವರು ಅದ್ಭುತ ಪ್ರದರ್ಶನ ನೀಡಿದರು. ಆದರೆ ಸೋಮವಾರ ನಡೆಯದ ಮಹಿಳೆಯರ 68 ಕೆಜಿ ಫ್ರೀ-ಸ್ಟೈಲ್ ಕುಸ್ತಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಕೊರಿಯಾದ ಪಾಕ್ ಸೋಲ್ ಗಮ್ ವಿರುದ್ಧ ಪದಕದ ನಿರೀಕ್ಷೆಯಲ್ಲಿದ್ದ ನಿಶಾ ದಹಿಯಾ ಸೋಲಿನ ಕಹಿ ಅನುಭವಿಸಿದ್ದಾರೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಕೊರಿಯಾದ ಪಾಕ್ ಸೋಲ್ ಗಮ್ ಅವರನ್ನು ನಿಶಾ ದಹಿಯಾ ಎದುರಿಸಿದ್ದರು. ಈ ಪಂದ್ಯದಲ್ಲಿ ಆರಂಭದಿಂದಲ್ಲೇ ಕೊರಿಯಾ ಎದುರಾಳಿ ವಿರುದ್ಧ ನಿಶಾ ಪ್ರಾಬಲ್ಯ ಸಾಧಿಸಿದ್ದರು. ಅಂಕಗಳನ್ನು ಬಿಟ್ಟು ಕೊಡದೆ ತನ್ನ ಸಾಮರ್ಥ್ಯ ತೋರಿದ್ದರು.

Paris Olympics 2024 Nisha Dahiya Played for 30 seconds in middle of pain Overcoming Injury and Defeat

ಈ ಪಂದ್ಯದಲ್ಲಿ ನಿಶಾ 8-2ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಪದಕ ಗೆಲ್ಲುವ ಉತ್ಸಾಹದಲ್ಲಿದ್ದರು. ಆದರೆ ಕೊನೆ 30 ಸೆಕೆಂಡ್‌ಗಳು ನಿಶಾ ಕನಸಿಗೆ ತಣ್ಣೀರು ಎರಿಚಿತು. ಇನ್ನೇನು ನಿಶಾ ಗೆದ್ದರೂ ಎನ್ನುವಷ್ಟರಲ್ಲೇ ಅವರ ಬಲ ಭುಜಕ್ಕೆ ಬಲವಾದ ಗಾಯ ಮಾಡಿಕೊಂಡರು.

ಈ ವೇಳೆ ನಿಶಾ ಸ್ಪರ್ಧೆ ಮಾಡುವುದು ಅನುಮಾನ ಎಂದು ಎಲ್ಲರೂ ಭಾವಿಸಿದ್ದರು. ಆದೆರೆ ಭಾರತೀಯ ಕುಸ್ತಿಪಟು ಗಾಯಕೊಂಡಾಗ ವೈದ್ಯರು ಚಿಕಿತ್ಸೆ ನೀಡಿದರು. ಇದಾದ ಬಳಿಕ ಚಿಕಿತ್ಸೆ ಪಡೆದ ನಿಶಾ ಸ್ಪರ್ಧೆಯನ್ನು ಮುಂದುವರೆಸಿದರು.

ಭುಜದ ನೋವಿನ ಹೊರತಾಗಿಯೂ, ನಿಶಾ ದೇಶದ ಗೆಲುವಿಗಾಗಿ ಪರಿಶ್ರಮಪಟ್ಟರು. ಆದರೆ ಸಂಪೂರ್ಣವಾಗಿ ಪಂದ್ಯದಲ್ಲಿ ಹಿಡಿತ ಸಾಧಿಸಿಲು ಸಾಧ್ಯವಾಗಲಿಲ್ಲ. ನೋವಿನಲ್ಲಿ ಸೆಣಸಾಡಲು ಸಾಧ್ಯವಾಗದೆ ಪರದಾಟ ನಡೆಸುತ್ತಿದ್ದ ನಿಶಾ ಅವರ ದುರ್ಬಲವನ್ನು ಲಾಭವಾಗಿ ಪಡೆದ ಪಾಕ್ ಸೋಲ್ ಗಮ್ ಉಳಿದ ಕೊನೆಯ 30 ಸೆಕೆಂಡ್‌ಗಳಲ್ಲಿ 8 ಅಂಕಗಳನ್ನು ಪಡೆದರು.

ಇದರೊಂದಿಗೆ ನಿಶಾ ಅವರನ್ನು 8-10 ಅಂಕಗಳ ಅಂತರದಿಂದ ಹೀನಾಯವಾಗಿ ಸೋಲಿಸಿದ್ದರು. ಹೀಗಾಗಿ ಭಾರತ ಕೊನೆ ಕ್ಷಣದಲ್ಲಿ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತ್ತು.

ಎಲ್ಲರ ಮನ ಗೆದ್ದ ನಿಶಾ

ನೋವಿನ ನಡುವೆಯೂ ಹೋರಾಟವನ್ನು ಮುಂದುವರಿಸಿದ ಭಾರತೀಯ ಕುಸ್ತಿಪಟುವಿನ ಪ್ರಯತ್ನ ಮತ್ತು ಧೈರ್ಯಕ್ಕೆ ಎಲ್ಲಾ ಕ್ರೀಡಾ ಪ್ರೇಮಿಗಳು ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ನಿಶಾ ದಹಿಯಾ ಎಂತಹ ಹೋರಾಟಗಾರ್ತಿ. ಈ ರೀತಿ ಒಲಿಂಪಿಕ್ಸ್‌ನಿಂದ ಹೊರಗುಳಿದಿರುವುದು ಹೃದಯವಿದ್ರಾವಕವಾಗಿದೆ. ನೋವಿನಲ್ಲೂ ಕೊನೆವರೆಗೂ ಪಂದ್ಯವನ್ನು ಬಿಡದ ನೀನು ಚಾಂಪಿಯನ್ ನಿಶಾ ಎಂದು ನೆಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬಿಕ್ಕಿ ಬಿಕ್ಕಿ ಅತ್ತ ನಿಶಾ

ಕೊನೆಯ 30 ಸೆಕೆಂಡ್‌ಗಳಲ್ಲಿ ನಿಶಾ ದಹಿಯಾ ನೋವಿನಿಂದ ಅಳುತ್ತಿದ್ದರು. ಇದಲ್ಲದೇ, ಪಂದ್ಯದಲ್ಲಿ ಸೋತಾಗಲೂ ಆಕೆ ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟರು. ಏಕೆಂದರೆ ಭಾರತಕ್ಕೆ ಕಂಚಿನ ಪದಕ ಗೆಲ್ಲುವ ಅವಕಾಶ ತಪ್ಪಿದೆ ಎಂಬುದು ನಿಶಾಗೆ ಗೊತ್ತಿತ್ತು.

ಈ ವೇಳೆ ನಿಶಾ ಅವರಿಗೆ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದಕ್ಕೂ ಮುನ್ನ ಅವರು ಅರ್ಹತಾ ಸುತ್ತಿನಲ್ಲಿ ಉಕ್ರೇನ್‌ನ ಟೆಟಿಯಾನಾ ಸೋವಾ ವಿರುದ್ಧ 6-4 ಅಂತರದಲ್ಲಿ ಜಯಗಳಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದರು.

Story first published: Tuesday, August 6, 2024, 17:57 [IST]
Other articles published on Aug 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+