Paris Olympics 2024: ಐಒಸಿ ಸದಸ್ಯೆಯಾಗಿ ನೀತಾ ಅಂಬಾನಿ ಮರು ಆಯ್ಕೆ
ಜುಲೈ 25 ಗುರುವಾರ, ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೂ ಮುನ್ನ ಮಹತ್ವದ ಘೋಷಣೆಯೊಂದು ಹೊರ ಬಿದ್ದಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಸದಸ್ಯೆಯಾಗಿ ನೀತಾ ಅಂಬಾನಿ ಮರು ಆಯ್ಕೆಯಾಗಿದ್ದಾರೆ.
ಪ್ರಸ್ತುತ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 142ನೇ ಐಒಸಿ ಅಧಿವೇಶನದಲ್ಲಿ ಭಾರತದಿಂದ ಐಒಸಿ ಸದಸ್ಯೆಯಾಗಿ ನೀತಾ ಅಂಬಾನಿ ಅವಿರೋಧವಾಗಿ ಆಯ್ಕೆಯಾದರು. ಅಂತರಾಷ್ಟ್ರೀಯ ಒಲಂಪಿಕ್ ಸಮಿತಿಯ ಸದಸ್ಯೆಯಾಗಿ ಆಯ್ಕೆಯಾಗಿರುವುದು ನೀತಾ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ.

ನೀತಾ ಅಂಬಾನಿ 2016ರ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಐಒಸಿ ಸದಸ್ಯರಾದರು. ಐಒಸಿಯನ್ನು ತಲುಪಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನೀತಾ ಅಂಬಾನಿ ಅವರು ಸಂಘಕ್ಕಾಗಿ ಉತ್ತಮ ಕಾರ್ಯ ಮಾಡಿಕೊಂಡು ಬಂದಿದ್ದಾರೆ.
ನೀತು ಅಂಬಾನಿ ಅವರು ಭಾರತದ ಕ್ರೀಡಾ ಮಹತ್ವಾಕಾಂಕ್ಷೆಗಳನ್ನು ಮತ್ತು ಒಲಿಂಪಿಕ್ ದೃಷ್ಟಿಕೋನವನ್ನು ಎತ್ತಿಹಿಡಿಯಲು ಸಮರ್ಥರಾಗಿದ್ದಾರೆ. ಇದರ ಪರಿಣಾಮ 2023ರ ಅಕ್ಟೋಬರ್‌ನಲ್ಲಿ ಭಾರತವು 40 ವರ್ಷಗಳಲ್ಲಿ ಮೊದಲ ಬಾರಿಗೆ ಮುಂಬೈನಲ್ಲಿ ಐಒಸಿ ಅಧಿವೇಶನವನ್ನು ಆಯೋಜಿಸಿತ್ತು.
ಇತ್ತೀಚಿನ ಭಾರತದ ಕ್ರೀಡಾ ಬೆಳವಣಿಗೆಯಲ್ಲಿ ನೀತಾ ಅಂಬಾನಿ ನೇತೃತ್ವದ ರಿಲಯನ್ಸ್ ಫೌಂಡೇಶನ್ ಪ್ರಮುಖ ಪಾತ್ರ ವಹಿಸಿದೆ. ಕ್ರೀಡೆ, ಶಿಕ್ಷಣ, ಆರೋಗ್ಯ, ಕಲೆ ಮತ್ತು ಸಂಸ್ಕೃತಿಯಂತಹ ವಿವಿಧ ಕ್ಷೇತ್ರಗಳಿಗೆ ರಿಲಯನ್ಸ್ ಫೌಂಡೇಶನ್ ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ.
ಇದು ದೇಶಾದ್ಯಂತ ಜನರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ತಳಮಟ್ಟದ ವರ್ಗಗಳಿಗೆ ವಿಶೇಷ ಒತ್ತು ನೀಡುವ ಚಟುವಟಿಕೆಗಳಾಗಿದ್ದು, ಇದರ ಪ್ರಯೋಜನಗಳು ಎಲ್ಲಾ ಹಂತಗಳಲ್ಲಿ 22.9 ಮಿಲಿಯನ್ ಮಕ್ಕಳು ಮತ್ತು ಯುವಕರನ್ನು ತಲುಪಿದೆ.
ಇದೇ ವೇಳೆ ಐಒಸಿ ಅಧ್ಯಕ್ಷ ಥಾಮಸ್ ಬ್ಯಾಕ್ ಅವರು ನೀತಾ ಅಂಬಾನಿ ಮತ್ತು ಸಮಿತಿಯ ಇತರ ಚುನಾಯಿತ ಸದಸ್ಯರನ್ನು ಅಭಿನಂದಿಸಿದರು. 2024ರ ಒಲಿಂಪಿಕ್ ಕ್ರೀಡಾಕೂಟವು ನಾಳೆ (ಜುಲೈ 26)ಯಿಂದ ಆಗಸ್ಟ್ 11 ರವರೆಗೆ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications