Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ವಿಶೇಷ ಸಂವಾದ; ಪದಕ ಗೆದ್ದು ಬರಲ
ಜುಲೈ 5 ಶುಕ್ರವಾರ, ಮುಂಬರುವ 2024ರ ಒಲಿಂಪಿಕ್ಸ್‌ಗಾಗಿ ಭಾರತದ ಅಥ್ಲೀಟ್‌ಗಳು ಪ್ಯಾರಿಸ್‌ಗೆ ತೆರಳಲು ಸಜ್ಜಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ 28 ಸದಸ್ಯರ ಭಾರತ ಅಥ್ಲೆಟಿಕ್ಸ್ ತಂಡವನ್ನು ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮುನ್ನಡೆಸಲಿದ್ದಾರೆ.
ನೀರಜ್ ಚೋಪ್ರಾ ನೇತೃತ್ವ ವಹಿಸಲಿರುವ 28 ಸದಸ್ಯರ ತಂಡದಲ್ಲಿ ಒಟ್ಟು 17 ಪುರುಷ ಮತ್ತು 11 ಮಹಿಳಾ ಅಥ್ಲೀಟ್‌ಗಳಿದ್ದಾರೆ. ಈ ಎಲ್ಲಾ ಅಥ್ಲೀಟ್‌ಗಳು ಪ್ಯಾರಿಸ್‌ಗೆ ಪ್ರಯಾಣ ಬೆಳೆಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನವದೆಹಲಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರಳುತ್ತಿರುವ ಅಥ್ಲೀಟ್‌ಗಳನ್ನು ಭೇಟಿ ಮಾಡಿದ್ದಾರೆ. ಪ್ರಧಾನ ಮೋದಿ ಅವರು ಅಥ್ಲೀಟ್‌ಗಳೊಂದಿಗೆ ವಿಶೇಷ ಸಂವಾದದ ನಡೆಸಿದ್ದು, ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಪತಾಕೆಯನ್ನು ಹಾರಿಸುವಂತೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಕುರಿತು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. "ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ನಮ್ಮ ತಂಡದೊಂದಿಗೆ ಸ್ಮರಣೀಯ ಸಂವಾದ. ನಾವೆಲ್ಲರೂ ಮಾಡೋಣ" ಎಂಬ ಶೀರ್ಷಿಕೆಯೊಂದಿಗೆ ಶುಕ್ರವಾರ ಬೆಳಿಗ್ಗೆ ವೀಡಿಯೊವನ್ನು ಪ್ರಧಾನಿ ತಮ್ಮ ಎಕ್ಸ್‌ನಲ್ಲಿ (ಟ್ವೀಟರ್) ಹಂಚಿಕೊಂಡಿದ್ದಾರೆ.
"ಒಲಿಂಪಿಕ್ಸ್‌ಗಾಗಿ ಪ್ಯಾರಿಸ್‌ಗೆ ತೆರಳುತ್ತಿರುವ ನಮ್ಮ ತಂಡದೊಂದಿಗೆ ಸಂವಾದ ನಡೆಸಿದ್ದೇನೆ. ನಮ್ಮ ಕ್ರೀಡಾಪಟುಗಳು ತಮ್ಮ ಅತ್ಯುತ್ತಮ ಕೊಡುಗೆ ನೀಡಿ ಭಾರತವನ್ನು ಹೆಮ್ಮೆ ಪಡಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರ ಜೀವನ ಪಯಣ ಮತ್ತು ಯಶಸ್ಸು 140 ಕೋಟಿ ಭಾರತೀಯರಿಗೆ ಭರವಸೆಯನ್ನು ನೀಡುತ್ತದೆ" ಎಂದು ಮೋದಿ ಬರೆದಿದ್ದಾರೆ.
ಭಾರತ ಹೆಚ್ಚಿನ ಚಿನ್ನದ ಪದಕಗಳನ್ನು ಗೆಲ್ಲುವ ಗುರಿಯೊಂದಿಗೆ ಸುಮಾರು 120 ಅಥ್ಲೀಟ್‌ಗಳ ದೊಡ್ಡ ತುಕಡಿಯನ್ನು ಪ್ಯಾರಿಸ್‌ಗೆ ಕಳುಹಿಸಲಿದೆ. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ದಾಖಲೆಯ 7 ಚಿನ್ನ ಪದಕಗಳನ್ನು ಗೆದ್ದಿತ್ತು.
ವರ್ಚುಲ್ ಮೂಲಕ ಒಲಿಂಪಿಕ್ ಚಾಂಪಿಯನ್‌ಗಳೊಂದಿಗೆ ಸಂವಾದ
ಹಲವಾರು ಕ್ರೀಡಾಪಟುಗಳನ್ನು ವೈಯಕ್ತಿಕವಾಗಿ ಭೇಟಿ ಮಾಡುವುದರ ಜೊತೆಗೆ, ಮೋದಿ ಅವರು ಒಲಿಂಪಿಕ್ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಪಿವಿ ಸಿಂಧು ಮತ್ತು ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಅವರೊಂದಿಗೆ ವರ್ಚುಲ್ ಮೂಲಕ ಸಂವಾದ ನಡೆಸಿದ್ದಾರೆ.
ಆಗಸ್ಟ್ 15 ರಂದು ಕೆಂಪು ಕೋಟೆಗೆ ಆಹ್ವಾನ
ಅಥ್ಲೀಟ್‌ಗಳೊಂದಿಗೆ ಸಂವಾದ ನಡೆಸಿದ ಮೋದಿ, "ಈ ಬಾರಿಯೂ ನಾವು ಆಟಗಾರರ ಅನುಕೂಲಕ್ಕಾಗಿ ಹೊಸದನ್ನು ಮಾಡಲು ಪ್ರಯತ್ನಿಸಿದ್ದೇವೆ. ನಾವು ಭಾರತೀಯ ಸಮುದಾಯವನ್ನು ಸ್ವಲ್ಪಮಟ್ಟಿಗೆ ಸಕ್ರಿಯಗೊಳಿಸಲು ಪ್ರಯತ್ನಿಸಿದ್ದೇವೆ.
ಇದರಿಂದಾಗಿ ಭಾರತೀಯ ಸಮುದಾಯ ನಮ್ಮ ಆಟಗಾರರೊಂದಿಗೆ ಹೆಚ್ಚು ಸಂಪರ್ಕ ಸಾಧಿಸುತ್ತಾರೆ. ನನ್ನ ಕಡೆಯಿಂದ ನಾನು ನಿಮಗೆ ಶುಭ ಹಾರೈಸುತ್ತೇನೆ ಮತ್ತು ನಾನು ನಿಮಗಾಗಿ ಕಾಯುತ್ತೇನೆ.
ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ಕಾರ್ಯಕ್ರಮ ನಡೆಯುವಾಗ ನೀವು ಸಹ ಅಲ್ಲಿ ಹಾಜರಿರಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಅಥ್ಲೀಟ್‌ಗಳಿಗೆ ಮೋದಿ ಆಹ್ವಾನ ನೀಡಿದ್ದಾರೆ.
ಭಾರತದಲ್ಲಿ 2036ರ ಒಲಿಂಪಿಕ್
ಭಾರತವು 2036ರ ಒಲಿಂಪಿಕ್ ಕ್ರೀಡಾಕೂಟವನ್ನು ಸ್ವದೇಶದಲ್ಲಿ ಆಯೋಜಿಸಲು ಚಿಂತನೆ ನಡೆಸಿದೆ ಎಂದು ಮೋದಿ ತಿಳಿಸಿದ್ದಾರೆ. ಇದರಿಂದಾಗಿ 12 ವರ್ಷಗಳ ನಂತರ ಕ್ರೀಡಾಕೂಟವನ್ನು ಆಯೋಜಿಸುವ ಪ್ರಯತ್ನದಲ್ಲಿ ಭಾರತಕ್ಕೆ ಸಹಾಯವಾಗುತ್ತದೆ.
"ನಾವು 2036 ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಗುರಿ ಹೊಂದಿದ್ದೇವೆ. ಅದಕ್ಕೆ ಮೂಲಸೌಕರ್ಯಗಳನ್ನು ಸಿದ್ಧಪಡಿಸುವ ಕೆಲಸ ಪ್ರಗತಿಯಲ್ಲಿದೆ" ಎಂದು ಮೋದಿ ಸಂವಾದಲ್ಲಿ ಮಾಹಿತಿ ನೀಡಿದ್ದಾರೆ.
ಜುಲೈ 26 ರಿಂದ ಪ್ಯಾರಿಸ್ ಒಲಿಂಪಿಕ್ಸ್ ಆರಂಭ
ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಜುಲೈ 26 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ. ಒಟ್ಟು 329 ಈವೆಂಟ್‌ಗಳು ನಡೆಯಲಿದೆ. 184 ದೇಶಗಳಿಂದ ಸುಮಾರು 10,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications