Paris Olympics 2024: ಆಗಸ್ಟ್ 4 ರಂದು ಭಾರತದ ಅಥ್ಲೀಟ್ಸ್ ಭಾಗವಹಿಸಲಿರುವ ಸ್ಪರ್ಧೆಗಳ ಬಗ್ಗೆ ತಿಳಿಯಿರಿ
ಆಗಸ್ಟ್ 3 ಶನಿವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಭಾರತ 48ನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ ಭಾರತ ಒಂದೇ ಒಂದು ಚಿನ್ನದ ಪದಕವನ್ನು ಗೆದ್ದಿಲ್ಲ.
ಭಾರತ ಕೇವಲ ಮೂರು ಕಂಚಿನ ಪದಕ ಗೆದ್ದಿದೆ. ಮನು ಭಾಕರ್ ಅವರಿಂದ ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಭಾರತ ನಿರಾಸೆ ಅನುಭವಿಸಿದೆ. ಆಗಸ್ಟ್ 4 ರಂದು ಭಾರತಕ್ಕೆ ಎರಡು ಪದಕ ಗೆಲ್ಲುವ ಅವಕಾಶಗಳಿವೆ.

ಮಹಿಳೆಯರ ಶೂಟಿಂಗ್ ಸ್ಕೀಟ್ ಫೈನಲ್‌ನಲ್ಲಿ ಭಾರತದ ಮಹೇಶ್ವರಿ ಚೌಹಾಣ್ ಸ್ಪರ್ಧಿಸಲಿದ್ದಾರೆ. ಮಹೇಶ್ವರಿ ಚೌಹಾಣ್ ಉತ್ತಮ ಪ್ರದರ್ಶನ ನೀಡಿದರೆ ಭಾರತಕ್ಕೆ ಪದಕ ಗೆಲ್ಲುವ ಅವಕಾಶವಿದೆ.
ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸೆಮಿಫೈನಲ್ ನಡೆಯಲಿದ್ದು, ಇದರಲ್ಲಿ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಸ್ಪರ್ಧಿಸಲಿದ್ದಾರೆ. ಸೆಮಿಫೈನಲ್‌ನಲ್ಲಿ ಗೆದ್ದರೆ ಸೇನ್ ಫೈನಲ್‌ಗೆ ಎಂಟ್ರಿ ಕೊಡುವ ಮೂಲಕ ಪದಕ ಖಚಿತಪಡಿಸಲಿದ್ದಾರೆ. ಒಂದು ವೇಳೆ ಸೇನ್ ಸೆಮಿಸ್‌ನಲ್ಲಿ ಸೋತರೆ ಕಂಚಿಗೆ ಪೈಪೋಟಿ ನಡೆಸಲಿದ್ದಾರೆ.
ಆಗಸ್ಟ್ 4 ರಂದು ಭಾರತ ಅಥ್ಲೀಟ್‌ಗಳ ಸ್ಪರ್ಧೆ
ಶೂಟಿಂಗ್: 25 ಮೀ ರಾಪಿಡ್ ಫೈರ್ ಪಿಸ್ತೂಲ್ ಪುರುಷರ ಅರ್ಹತೆ- ವಿಜಯವೀರ್ ಸಿಧು,
ಅನೀಶ್ ಪನ್ವಾಲಾ- ಮಧ್ಯಾಹ್ನ 12:30 ಗಂಟೆಗೆ
ಮಹಿಳೆಯರ ಸ್ಕೀಟ್ ಅರ್ಹತೆ ದಿನ 2- ಮಹೇಶ್ವರಿ ಚೌಹಾಣ್- ಮಧ್ಯಾಹ್ನ 1:00 ಗಂಟೆಗೆ
ಮಹಿಳಾ ಸ್ಕೀಟ್- ಮಹೇಶ್ವರಿ ಚೌಹಾಣ್ (ಅರ್ಹತೆ ಪಡೆದರೆ) - ಸಂಜೆ 7:00 ಗಂಟೆಗೆ
ಹಾಕಿ: ಪುರುಷರ ಕ್ವಾರ್ಟರ್‌ಫೈನಲ್- ಭಾರತ vs ಗ್ರೇಟ್ ಬ್ರಿಟನ್- ಮಧ್ಯಾಹ್ನ 1:30 ಗಂಟೆಗೆ
ಅಥ್ಲೆಟಿಕ್ಸ್: ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್ ಸುತ್ತು 1- ಪಾರುಲ್ ಚೌಧರಿ- ಮಧ್ಯಾಹ್ನ 1:35 ಗಂಟೆಗೆ
ಲಾಂಗ್ ಜಂಪ್ : ಪುರುಷರ ಅರ್ಹತಾ ಸುತ್ತು- ಜೆಸ್ಸಿ ಆಲ್ಡ್ರಿನ್- ಮಧ್ಯಾಹ್ನ 2:30 ಗಂಟೆಗೆ
ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ ಸೆಮಿಫೈನಲ್- ಭಾರತದ ಲಕ್ಷ್ಯ ಸೇನ್ vs ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ - ಮಧ್ಯಾಹ್ನ 3:30 ಗಂಟೆಗೆ
ಸೇಲಿಂಗ್: ಪುರುಷರ ಡಿಂಘಿ ಸೀರಿಸ್ (ರೇಸ್ 7/8)- ವಿಷ್ಣು ಸರವಣನ್- ಮಧ್ಯಾಹ್ನ 3:35 ಗಂಟೆಗೆ
ಮಹಿಳೆಯರ ಡಿಂಘಿ ಸೀರಿಸ್ (ರೇಸ್ 7/8)- ನೇತ್ರಾ ಕುಮನನ್- ಮಧ್ಯಾಹ್ನ 6:05 ಗಂಟೆಗೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications