Vinesh Phogat Retires: ಬಂಗಾರದ ಕನಸು ಭಗ್ನ; ಕುಸ್ತಿಗೆ ವಿನೇಶ್ ಫೋಗಟ್ ಗುಡ್ ಬೈ!
ಆಗಸ್ಟ್ 8 ಗುರುವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ಮಹಿಳೆಯರ ಫ್ರೀ ಸ್ಟೈಲ್ ವಿಭಾಗದಲ್ಲಿ ವಿನೇಶ್ ಫೋಗಟ್ ಫೈನಲ್ ತಲುಪಿದ ನಂತರವೂ ನಿರಾಸೆ ಅನುಭವಿಸಿದರು. ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕ ಹೊಂದರಿಂದ ವಿನೇಶ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದರು, ಇದರ ಬೆನ್ನಲ್ಲೇ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿರುವ ವಿನೇಶ್ ಕುಸ್ತಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ 50 ಕೆಜಿ ಮಹಿಳೆಯರ ಫ್ರೀ ಸ್ಟೈಲ್ ವಿಭಾಗದಲ್ಲಿ ವಿನೇಶ್ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದ್ದರು. ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಪಟು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಇದೀಗ ವಿನೇಶ್ ಕುಸ್ತಿ ಮ್ಯಾಟ್‌ನಿಂದ ದೂರ ಸರಿದಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ.

ವಿನೇಶ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಿವೃತ್ತಿ ಘೋಷಿಸಿರುವ ಬಗ್ಗೆ ತಿಳಿಸಿದ್ದಾರೆ. ಭಾವನಾತ್ಮಕ ಪೋಸ್ಟ್ ಮಾಡುವ ತನ್ನ ವಿನೇಶ್ ದುಃಖವನ್ನು ವ್ಯಕ್ತಪಡಿಸಿದ್ದಾರೆ. 'ಅಮ್ಮಾ, ನನ್ನಿಂದ ಕುಸ್ತಿ ಗೆದ್ದಿದೆ, ನಾನು ಸೋತಿದ್ದೇನೆ. ಕ್ಷಮಿಸಿ, ನಿಮ್ಮ ಕನಸು, ನನ್ನ ಧೈರ್ಯ ಎಲ್ಲವೂ ಮುರಿದುಹೋಗಿದೆ. ಇದಕ್ಕಿಂತ ಹೆಚ್ಚಿನ ಶಕ್ತಿ ನನಗಿಲ್ಲ. 2001 ರಿಂದ 2024 ರವರೆಗಿನ ಕುಸ್ತಿ ವೃತ್ತಿ ಜೀವನಕ್ಕೆ ವಿದಾಯ, ನಾನು ಯಾವಾಗಲೂ ನಿಮ್ಮೆಲ್ಲರಿಗೂ ಋಣಿಯಾಗಿರುತ್ತೇನೆ, ಕ್ಷಮಿಸಿ.' ಎಂದು ಬರೆದುಕೊಂಡಿದ್ದಾರೆ.
ಅನರ್ಹಗೊಂಡಿದ್ದೇಗೆ?
ಭಾರತಕ್ಕೆ ವಿನೇಶ್ ಬಂಗಾರದ ಪದಕ ಗೆಲ್ಲುವ ಅಂಚಿನಲ್ಲಿದ್ದರು. ಆದರೆ ಬುಧವಾರ ಬೆಳಿಗ್ಗೆ ಒಲಿಂಪಿಕ್ಸ್ ಅಸೋಸಿಯೇಷನ್ ಮಾನದಂಡದಡಿ ಕುಸ್ತಿ ಪಟುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ವಿನೇಶ್ ಸಹ ಪರೀಕ್ಷೆಗೆ ಒಳಪಟ್ಟಿದ್ದರು. ಈ ವೇಳೆ ವಿನೇಶ್ ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕ ಹೊಂದಿರುವುದು ಕಂಡು ಬಂದಿತ್ತು.
ಹೀಗಾಗಿ ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿತ್ತು. ಅನರ್ಹಗೊಂಡ ನಂತರ, ವಿನೇಶ್ ಒಲಿಂಪಿಕ್ಸ್ ಆಸೋಸಿಯೇಷನ್ ತೀರ್ಪನ್ನು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದರು.
ಪ್ರಧಾನಿ ಮೋದಿ ಬೆಂಬಲ
ವಿನೇಶ್ ಅನರ್ಹತೆಗೊಳಿಸಿದ ನಂತರ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಆನೇಕ ರಾಜಕೀಯ ಗಣ್ಯರು ವಿನೇಶ್ ಅವರಿಗೆ ಬೆಂಬಲ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ವಿನೇಶ್ ಅವರನ್ನು ದೇಶದ ಹೆಮ್ಮೆ ಎಂದು ಕರೆದಿದ್ದಾರೆ. ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್ ಎಂದು ಹೇಳಿದ್ದಾರೆ.
ನಂತರ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ, ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಬೇಕಾದ ಎಲ್ಲಾ ಮಾರ್ಗಗಳನ್ನು ಅನುಸರಿಸಿ ಎಂದು ಸೂಚನೆ ನೀಡಿದ್ದಾರೆ. ಇದಾದ ಬಳಿಕ ಈ ಸಂಬಂಧ ವಿಶ್ವ ಕುಸ್ತಿ ಫೆಡರೇಷನ್ ಮುಂದೆ ಮನವಿ ಮಾಡಿದ್ದೇವೆ ಎಂದು ಪಿಟಿ ಉಷಾ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications