For Quick Alerts
ALLOW NOTIFICATIONS  
For Daily Alerts

ವಿನೇಶ್ ಫೋಗಟ್ ಬೆಳ್ಳಿ ಪದಕದ ಆಸೆ ಜೀವಂತ?; ತೀರ್ಪು ಯಾವಾಗ?

ಆಗಸ್ಟ್ 10 ಶನಿವಾರ, ಭಾರತ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರ ಅರ್ಜಿಯ ಬಗ್ಗೆ ಇನ್ನೂ ನಿರ್ಧಾರ ಬರಬೇಕಿದೆ. ವಿನೇಶ್ ಅವರ ಮೇಲ್ಮನವಿಯ ಬಗ್ಗೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಇನ್ನೂ ತೀರ್ಪು ನೀಡಿಲ್ಲ.

ಅನರ್ಹತೆಯ ನಿರ್ಧಾರದ ವಿರುದ್ಧ ವಿನೇಶ್ ಫೋಗಟ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸ್ಪೋರ್ಟ್ಸ್ ಆರ್ಬಿಟ್ರೇಷನ್ ಕೋರ್ಟ್ (ಸಿಎಎಸ್) ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ನೀಡಬೇಕು ಎಂದು ವಿನೇಶ್ ಕ್ರೀಡಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Paris Olympics 2024 Vinesh Phogat disqualification case verdict when

ಇದನ್ನು ಗಮನದಲ್ಲಿಟ್ಟುಕೊಂಡು ವಿನೇಶ್ ಫೋಗಟ್ ಅವರ ಅರ್ಜಿಯ ಬಗ್ಗೆ ಒಲಿಂಪಿಕ್ಸ್ ಮುಗಿಯುವ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಹೇಳಿದೆ. ತೀರ್ಪು ಪ್ರಕಟವಾಗದ ಕಾರಣ ವಿನೇಶ್ ಅವರ ಬೆಳ್ಳಿ ಪದಕದ ಆಸೆ ಇನ್ನೂ ಜೀವಂತವಾಗಿದೆ. ಈ ನಡುವೆ ವಿನೇಶ್ ಫೋಗಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ.

ಅರ್ಜಿ ಕುರಿತು

ಸಿಎಎಸ್ ಹೇಳಿಕೆ ಪ್ರಕಾರ, 'ಭಾರತದ ಕುಸ್ತಿಪಟು ವಿನೇಶ್ ಫೋಗಟ್ (ಅರ್ಜಿದಾರ) ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯೂಡಬ್ಲ್ಯು) ಆಗಸ್ಟ್ 7, 2024 ರಂದು ತೆಗೆದುಕೊಂಡ ನಿರ್ಧಾರದ ವಿರುದ್ಧ ಅಡ್ ಹಾಕ್ ವಿಭಾಗದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ಫೈನಲ್ ಪಂದ್ಯದ ಮೊದಲು ತನ್ನ ಎರಡನೇ ತೂಕ ಪರೀಕ್ಷೆಯಲ್ಲಿ ವಿಫಲವಾದ ನಂತರ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿದೆ.

ಅರ್ಜಿದಾರರು ಆರಂಭದಲ್ಲಿ ತಾತ್ಕಾಲಿಕ ವಿಭಾಗಕ್ಕೆ ಈ ನಿರ್ಧಾರವನ್ನು ಬದಿಗಿಟ್ಟು ಅಂತಿಮ ಪಂದ್ಯದ ಮೊದಲು ಮತ್ತೊಂದು ತೂಕದ ಪ್ರಕ್ರಿಯೆಯೊಂದಿಗೆ ಫೈನಲ್‌ ಆಡಲು ಅರ್ಹರೆಂದು ಘೋಷಿಸಲು ವಿನಂತಿಸಿದ್ದರು. ತಕ್ಷಣದ ಮಧ್ಯಂತರ ಕ್ರಮಗಳಿಗಾಗಿ ಮನವಿ ಮಾಡಿದರೂ, ಸಿಎಎಸ್ ಒಂದು ಗಂಟೆಯೊಳಗೆ ಈ ಸಂಬಂಧ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

ಇದಾದ ನಂತರ, ಅರ್ಜಿದಾರರು ನಿರ್ಧಾರವನ್ನು ಬದಿಗಿರಿಸಿ ಜಂಟಿಯಾಗಿ ಬೆಳ್ಳಿ ಪದಕ ನೀಡಬೇಕೆಂದು ಪ್ರಾರ್ಥಿಸಿದ್ದಾರೆ. ಈ ವಿಚಾರವನ್ನು ಡಾ. ಅನ್ನಾಬೆಲ್ ಬೆನೆಟ್ ಅವರಿಗೆ ಕಳುಹಿಸಲಾಗಿದೆ.

ವಿನೇಶ್ ಫೋಗಟ್‌

ಏಷ್ಯಾನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ವಿಜೇತೆ ಫೋಗಟ್ ಒಲಿಂಪಿಕ್ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯರು ವಿನೇಶ್ ಅವರಿಂದ ಬಂಗಾರದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತ ಬೆಳ್ಳಿಗೆ ತೃಪ್ತಿಪಡುವ ಸಾಧ್ಯತೆ ಇದೆ.

Story first published: Saturday, August 10, 2024, 7:17 [IST]
Other articles published on Aug 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+