Paris Olympics 2024: ಭಾರತದ ಬಂಗಾರ ಗೆಲ್ಲುವ ಆಸೆಗೆ ಪೆಟ್ಟು!
ಆಗಸ್ಟ್ 7 ಬುಧವಾರ, ಭಾರತದ ಬಂಗಾರ ಗೆಲ್ಲುವ ಪದಕದ ಆಸೆಗೆ ಪೆಟ್ಟು ಬಿದ್ದಿದೆ. 50 ಕೆಜಿ ಮಹಿಳೆಯರ ಫ್ರೀ ಸ್ಟೈಲ್ ವಿಭಾಗದಲ್ಲಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದ ವಿನೇಶ್ ಫೋಗಟ್‌ಗೆ ಹಿನ್ನಡೆಯಾಗಿದೆ.
ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕ ಹೊಂದರಿಂದ ವಿನೇಶ್ ಫೈನಲ್‌ನಲ್ಲಿ ಕಣಕ್ಕಿಳಿಯುತ್ತಿಲ್ಲ. ಮಹಿಳೆಯರ ಫ್ರಿ- ಸ್ಟೈಲ್ 50 ಕೆಜಿ ವಿಭಾಗದ ಫೈನಲ್ ಪಂದ್ಯ ಗುರುವಾರ ತಡರಾತ್ರಿ ನಡೆಯಬೇಕಿತ್ತು.

ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿರುವ ಬಗ್ಗೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಮಾಹಿತಿ ನೀಡಿದೆ. ರಾತ್ರಿಯಿಡೀ ತಂಡವು ಎಷ್ಟೇ ಪ್ರಯತ್ನಿಸಿದರೂ, ಇಂದು ಬೆಳಗ್ಗೆ ವಿನೇಶ್ ಅವರ ತೂಕವು 50 ಕೆಜಿಗಿಂತ ಹೆಚ್ಚಾಗಿದೆ. ಈ ವೇಳೆ ವಿನೇಶ್ ಖಾಸಗಿತನವನ್ನು ಗೌರವಿಸಿ ಅವರ ಜೊತೆ ನಿಲ್ಲುತ್ತದೆ ಎಂದು ಐಒಎ ಹೇಳಿದೆ.
ಇದೀಗ ಫೈನಲ್‌ಗೆ ಅನರ್ಹಗೊಂಡಿರುವ ವಿನೇಶ್ ಅವರು ಯಾವುದೇ ಪದಕದ ಸ್ಪರ್ಧೆಯಲ್ಲೂ ಭಾಗವಹಿಸುವಂತಿಲ್ಲ. ಫೈನಲ್ ಪಂದ್ಯದ ಮುನ್ನಾದಿನದಂದು ವಿನೇಶ್ ಫೋಗಟ್ 2 ಕೆಜಿ ಅಧಿಕ ತೂಕವನ್ನು ಹೊಂದಿದ್ದರು. ವರದಿಗಳ ಪ್ರಕಾರ, ನಿನ್ನೆ ರಾತ್ರಿಯಿಡೀ ತೂಕ ಕಡಿಮೆ ಮಾಡಿಕೊಳ್ಳಲು ವಿನೇಶ್ ನಿದ್ದೆ ಮಾಡಲಿಲ್ಲ. ಜಾಗಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್ ಮಾಡುತ್ತಲೇ ಇದ್ದರಂತೆ.
ಮಂಗಳವಾರ ನಡೆದ ಮಹಿಳೆಯರ 50 ಕೆಜಿ ಫ್ರಿ-ಸ್ಟೈಲ್ ವಿಭಾಗದ ಸೆಮಿಫೈನಲ್‌ನಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಎದುರು ಅತ್ಯತ್ತಮ ಪ್ರದರ್ಶನ ತೋರಿ ಗೆಲುವು ದಾಖಲಿಸಿದ್ದರು. ಈ ಪಂದ್ಯದ ಕೊನೆಯ ಮೂರು ನಿಮಿಷಗಳಲ್ಲಿ ಗುಜ್ಮನ್ ಲೋಪೆಜ್ ಮೇಲೆ ಡಬಲ್ ಲೆಗ್ ಅಟ್ಯಾಕ್ ಮಾಡಿ ಸುಲಭವಾಗಿ ವಿನೇಶ್ 4 ಅಂಕಗಳನ್ನು ಪಡೆಯುವ 5-0 ರಲ್ಲಿ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದ್ದರು.
ಈ ಗೆಲುವಿಗೂ ಮುನ್ನ ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್ ಕುಸ್ತಿಪಟು ಲಿವಾಚ್ ಉಕ್ಸಾನಾ ಅವರನ್ನು 7-5 ಅಂತರದಿಂದ ಬಗ್ಗು ಬಡಿದಿದ್ದರು. ಅಲ್ಲದೆ, 3 ಬಾರಿಯ ವಿಶ್ವ ಚಾಂಪಿಯನ್ ಹಾಗೂ ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಜಪಾನಿನ ಯುಯಿ ಸುಸಾಕಿ ವಿರುದ್ಧ 3-2 ಅಂತರದಿಂದ ವಿನೇಶ್ ಐತಿಹಾಸಿಕ ಗೆಲುವು ಕಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications