Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಫೈನಲ್‌ಗೂ ಮುನ್ನ ವಿನೇಶ್‌ ಅನರ್ಹ: ಪ್ರಶಸ್ತಿ ಸುತ್ತಿನಲ್ಲಿ ಫೈಟ್‌ ನಡೆಸುವವರು ಯಾರು?

ಆಗಸ್ಟ್‌ 7 ಬುಧವಾರ, ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ 2024 ರಿಂದ ಅನರ್ಹಗೊಳಿಸಲಾಗಿದೆ. ಈ ಬೆಳವಣಿಯಿಂದ ಮಹಿಳೆಯರ ಫ್ರಿಸ್ಟೈಲ್‌ 50 ಕೆಜಿ ವಿಭಾಗದ ಫೈನಲ್‌ ಪಂದ್ಯ ಮಹತ್ವದ ತಿರುವು ಪಡೆದುಕೊಂಡಿದೆ.

ಸೆಮಿಫೈನಲ್‌ನಲ್ಲಿ ವಿನೇಶ್‌ ಎದುರು ಸೋಲು ಕಂಡಿದ ಕ್ಯೂಬಾದ ಗುಜ್ಮನ್ ಲೋಪೆಜ್ ಅವರು ಫೈನಲ್‌ ಆಡಲಿದ್ದಾರೆ. ಅಮೆರಿಕಾದ ಸಾರಾ ಆನ್ ಹಿಲ್ಡೆಬ್ರಾಂಡ್ ವಿರುದ್ಧ ಗುಜ್ಮನ್ ಲೋಪೆಜ್ ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

Paris Olympics 2024 Vinesh Phogat has been disqualified so what will happen in the final match

ವರದಿಯ ಪ್ರಕಾರ, ಮಂಗಳವಾರದ ಪಂದ್ಯಗಳಿಗೆ ತೂಕದ ಅಗತ್ಯವನ್ನು ವಿನೇಶ್ ಫೋಗಟ್ ಯಶಸ್ವಿಯಾಗಿ ಪೂರೈಸಿದ್ದಾರೆ. ಅಂತರಾಷ್ಟ್ರೀಯ ಕುಸ್ತಿ ನಿಯಮಗಳ ಆರ್ಟಿಕಲ್‌ 11ರ ಪ್ರಕಾರ, ಕುಸ್ತಿಪಟುಗಳು ಸ್ಪರ್ಧೆಯ ಎರಡೂ ದಿನಗಳಲ್ಲಿ ತಮ್ಮ ತೂಕವನ್ನು ಗೊತ್ತುಪಡಿಸಿದ ವಿಭಾಗದೊಳಗೆ ಕಾಪಾಡಿಕೊಳ್ಳಬೇಕು.

ಅಂದರೆ, ಆರಂಭದಲ್ಲಿ ಕ್ರೀಡಾಪಟುಗಳು ಹೊಂದಿರುವ ನಿಗದಿತ ತೂಕವೇ ಫೈನಲ್‌ ಪಂದ್ಯಕ್ಕೂ ಮುನ್ನ ಒಳಪಡಿಸುವಾಗ ಪರೀಕ್ಷೆಯಲ್ಲೂ ಇರಬೇಕು. ಒಂದು ವೇಳೆ ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕ ಹೊಂದಿದ್ದರೆ ಅಂತಹ ಕ್ರೀಡಾಪಟುಗಳನ್ನು ಅನರ್ಹಗೊಳಿಸಲಾಗುತ್ತದೆ.

ಮಂಗಳವಾರ ರಾತ್ರಿಯೇ ತೂಕ ಹೆಚ್ಚಾಗಿರುವುದು ಬಗ್ಗೆ ವಿನೇಶ್ ಅವರ ಅರಿವೆಗೆ ಬಂದಿದೆ. ಹೀಗಾಗಿ ರಾತ್ರಿ ಇಡಿ ವ್ಯಾಯಾಮ ಮಾಡಿ ತೂಕ ಇಳಿಕೆ ಮಾಡಲು ಮುಂದಾಗಿದ್ದರು. ಆದರೆ ನಿಗದಿತ ತೂಕಕ್ಕಿಂತ 100 ಗ್ರಾಮ್‌ ಹೆಚ್ಚು ತೂಕ ಹೆಚ್ಚಾಗಿರುವುದರಿಂದ ವಿನೇಶ್‌ ಅವರನ್ನು ಅನರ್ಹ ಗೊಳಿಸಲಾಗಿದೆ.

Story first published: Wednesday, August 7, 2024, 16:05 [IST]
Other articles published on Aug 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+