Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಪದಕವಿಲ್ಲದೆ ಒಲಿಂಪಿಕ್ ಗೇಮ್ಸ್ ವಿಲೇಜ್ ತೊರೆದ ವಿನೇಶ್ ಫೋಗಟ್

ಆಗಸ್ಟ್ 12 ಸೋಮವಾರ, ಪ್ಯಾರಿಸ್‌ನಲ್ಲಿ ಪದಕದ ನಿರೀಕ್ಷೆಯಲ್ಲಿ ಸಿಲುಕಿರುವ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರ ತೀರ್ಪು ನಾಳೆ (ಮಂಗಳವಾರ) ಹೊರ ಬೀಳಲಿದೆ. ವಿಚಾರಣೆಯ ನಂತರ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ತನ್ನ ತೀರ್ಪು ಅನ್ನು ಕಾಯ್ದಿರಿಸಿದೆ.

ಇಂದು ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯದ ಬಳಿಕ ವಿನೇಶ್ ಫೋಗಟ್ ಪದಕ ಗೆಲ್ಲದೆ ಒಲಿಂಪಿಕ್ ಗೇಮ್ಸ್ ವಿಲೇಜ್ ತೊರೆದಿದ್ದಾರೆ. ಆದರೆ ವಿನೇಶ್ ಇನ್ನೂ ಪ್ಯಾರಿಸ್‌ನಲ್ಲಿದ್ದಾರೆ. ಇನ್ನೊಂದೆಡೆ ಭಾರತ ಕಳುಹಿಸಿದ ಎಲ್ಲಾ 117 ಭಾರತೀಯ ಆಟಗಾರರು ಹಿಂತಿರುಗಿದ್ದಾರೆ.

Paris Olympics 2024 Vinesh Phogat leaves Olympic Games Village

ಪ್ಯಾರಿಸ್ ಕ್ರೀಡಾಕೂಟ ತೆರೆ ಕಾಣುತ್ತಿದ್ದಂತೆ, ಒಲಿಂಪಿಕ್ ಗೇಮ್ಸ್ ವಿಲೇಜ್ ಅನ್ನು ತೆಗೆದು ಹಾಕಲಾಗಿದೆ. ಹೀಗಾಗಿ ನಿಗದಿತ ತೂಕಕ್ಕಿಂತ ಹೆಚ್ಚು ತೂಕ ಹೊಂದಿದ್ದ ಕಾರಣ ಒಲಿಂಪಿಕ್ಸ್‌ನಿಂದ ಆನರ್ಹಗೊಂಡಿರುವ ವಿನೇಶ್ ಫೋಗಟ್, ನ್ಯಾಯಕ್ಕಾಗಿ ಆಶಿಸುತ್ತಾ ಬೆಳ್ಳಿ ಪದಕದ ಭರವಸೆಯಲ್ಲಿ ಗೇಮ್ಸ್ ವಿಲೇಜ್‌ನಿಂದ ಹೊರ ನಡೆದಿದ್ದಾರೆ.

ಈ ಫೋಟೋಗಳು ಸಾಮಾಜಿಲ ಜಾಲತಾಣದಲ್ಲಿ ವೈರಲ್ ಆಗಿವೆ. ಪದಕ ಗೆಲ್ಲದೆ ಒಲಿಂಪಿಕ್ ವಿಲೇಜ್ ತೊರೆದ ನೋವು ವಿನೇಶ್ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ವಿನೇಶ್ ಸೋಲಿಸಿದ ಕುಸ್ತಿಪಟು ಬೆಳ್ಳಿ ಪದಕದೊಂದಿಗೆ ತವರಿಗೆ ಮರಳಿದ್ದಾರೆ. ಆದರೆ ತನ್ನ ಮೂರು ಪಂದ್ಯಗಳಲ್ಲಿ ಎದುರಾಳಿಯನ್ನು ಸೋಲಿಸಿದ ವಿನೇಶ್ ಇನ್ನೂ ಪದಕ ಪಡೆಯದೆ ಪ್ಯಾರಿಸ್‌ನಲ್ಲಿ ಉಳಿದುಕೊಂಡಿದ್ದಾರೆ.

ಇತಿಹಾಸ ನಿರ್ಮಿಸಿದ ಕುಸ್ತಿಪಟು

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ 50 ಕೆಜಿ ಮಹಿಳೆಯರ ಫ್ರೀ ಸ್ಟೈಲ್ ವಿಭಾಗದಲ್ಲಿ ವಿನೇಶ್ ಫೋಗಟ್ ಅವರು ಫೈನಲ್ ತಲುಪಿ ಇತಿಹಾಸ ನಿರ್ಮಿಸಿದ್ದರು. ಒಲಿಂಪಿಕ್ಸ್‌ ಕುಸ್ತಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಪಟು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.

ಆದರೆ ವಿನೇಶ್ ಫೋಗಟ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ನಿವೃತ್ತಿ ಘೋಷಿಸಿದ್ದರು. ವಿನೇಶ್ ಫೋಗಟ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಪೋಸ್ಟ್ ಮಾಡುವ ಮೂಲಕ ಕುಸ್ತಿಗೆ ಗುಡ್‌ ಬೈ ಹೇಳಿದ್ದರು.

Story first published: Monday, August 12, 2024, 22:27 [IST]
Other articles published on Aug 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+