Neeraj Chopra: ಭಾರತದ ನೀರಜ್ ಚೋಪ್ರಾಗೆ ಬೆಳ್ಳಿ, ಪಾಕ್‌ನ ಅರ್ಷದ್‌ಗೆ ಬಂಗಾರ
ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ಭಾರತದ ನೀರಜ್ ಚೋಪ್ರಾ ಅವರು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಸಾಧನೆ ಮಾಡಿದ್ದಾರೆ. ಭರ್ಜರಿ ಪ್ರದರ್ಶನ ನೀಡಿದ ನೀರಜ್, ಪಾಕಿಸ್ತಾನದ ಅರ್ಶದ್ ನದೀಮ್ ಗೆ ಜಿದ್ದಾಜಿದ್ದಿನ ಫೈಟ್ ನೀಡಿದರು. ಅರ್ಷದ್ ನದೀಮ್ 32 ವರ್ಷದ ಬಳಿಕ ಪದಕ ಗೆದ್ದ ಪಾಕಿಸ್ತಾನದ ಅಥ್ಲೀಟ್ ಎನಿಸಿಕೊಂಡಿದ್ದಾರೆ.
ಭಾರತ ಜಾವೆಲಿನ್ ಥ್ರೊನಲ್ಲಿ ಪದಕದ ಕನಸು ಕಾಣುತ್ತಿತ್ತು. ನೀರಜ್ ಚೋಪ್ರಾ ತಮ್ಮ ಬಂಗಾರವನ್ನು ಉಳಿಸಿಕೊಳ್ಳಲು ಮೈದಾನ ಪ್ರವೇಶಿಸಿದ್ದರು. ಆದರೆ ಬಂಗಾರದ ಕನಸು ಕೈಗೂಡಲಿಲ್ಲ. ಆದರೆ ರಜತದ ಪದಕ ನೀರಜ್ ಕೊರಳು ಸೇರಿದೆ. ಈ ಮೂಲಕ ಎರಡು ಒಲಿಂಪಿಕ್ಸ್ ಪದಕ ಸಾಧನೆ ಮಾಡಿದ ಅಥ್ಲೀಟ್‌ಗಳ ಪಟ್ಟಿಗೆ ಇವರು ಸೇರಿದ್ದಾರೆ.

ಸ್ಟಾರ್ ನೀರಜ್ ಚೋಪ್ರಾ ಅವರು ಮೊದಲ ಪ್ರಯತ್ನ ಫಾಲ್ ಆಗಿತ್ತು. ಪಾಕಿಸ್ತಾನದ ಅರ್ಶದ್ ನದೀಮ್ ತಮ್ಮ ಎರಡನೇ ಪ್ರಯತ್ನದಲ್ಲಿ 92.97 ಮೀಟರ್ ದೂರ ಜಾವೆಲಿನ್ ಎಸೆದು ತಮ್ಮದೇ ದಾಖಲೆಯನ್ನು ಅಳಸಿ ಹಾಕಿದ್ದಾರೆ. ನೀರಜ್ ಚೋಪ್ರಾ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 89.45 ಮೀಟರ್ ದೂರ ಎಸೆದು ಮಿಂಚಿದ್ದಾರೆ. ಫೈನಲ್‌ಗೆ ಅರ್ಹತೆ ಪಡೆದ 12 ಅಥ್ಲೀಟ್‌ಗಳು ತಲಾ ಮೂರು ಬಾರಿ ಪ್ರಯತ್ನ ನಡೆಸಿದರು. ಈ ವೇಳೆ ಉತ್ತಮ ದೂರ ಎಸೆದ ಎಂಟು ಅಥ್ಲೀಟ್‌ಗಳಿಗೆ ಅಂತಿಮ ಅವಕಾಶ. ಈ ಎಂಟು ಅಥ್ಲೀಟ್‌ಗಳಿಗೆ ಇನ್ನು ಮೂರು ಚಾನ್ಸ್ ನೀಡಲಾಯಿತು.
ತಮ್ಮ ಫೈನಲ್ ಪ್ರಯತ್ನದಲ್ಲಿ ನೀರಜ್ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಕೊಂಚ ಎಡವಿದರು. ಅಲ್ಲದೆ 90 ಮೀಟರ್ ಮಾರ್ಕ್ ದಾಟುವಲ್ಲಿ ವಿಫಲರಾದರು. ತಮ್ಮ ಎರಡನೇ ಪ್ರಯತ್ನದಲ್ಲಿ ಅರ್ಷದ್ ನದೀಮ್ 92.97 ಮೀಟರ್ ದೂರ ಜಾವೆಲಿನ್ ಎಸೆದು ಮೊದಲ ಸ್ಥಾನವನ್ನು ಪಕ್ಕಾ ಮಾಡಿಕೊಂಡಿದ್ದರು. ನೀರಜ್ ಬಂಗಾರ ಗಳಿಸದೇ ಇದ್ದರೂ, ಬೆಳ್ಳಿಯ ನಗೆ ಬೀರಿದ್ದಾರೆ.

140 ಕೋಟಿ ಭಾರತೀಯ ದೇಶ ವಾಸಿಗಳು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್‌ರಿಂದ ಸತತ ಎರಡನೇ ಚಿನ್ನದ ಪದಕದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ನೀರಜ್ ಅವರಿಗೆ 90 ಮೀಟರ್ ದೂರವನ್ನು ಕ್ರಮಿಸಲು ಸಾಧ್ಯವೇ ಆಗಲಿಲ್ಲ. ಮೂರನೇ ಸ್ಥಾನವನ್ನು ಗ್ರೆನಡಾದ ಆಂಡರ್ಸನ್ ಪೀಟರ್ಸ್ ಕಂಚಿನ ಪದಕ ಗೆದ್ದರು. ಪೀಟರ್ಸ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88.54 ಮೀಟರ್ ಎಸೆದರು.
ಪದಕದ ಬರ ನೀಗಿಸಿದ ಅರ್ಷದ್
32 ವರ್ಷಗಳ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಪಾಕಿಸ್ತಾನ ಅಥ್ಲೀಟ್‌ಗಳ ಆಸೆಯನ್ನು ಅರ್ಷದ್ ನದೀಮ್ ನನಸು ಮಾಡಿದ್ದಾರೆ. ಪಾಕ್ 1948 ರಿಂದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದು, ಪದಕದ ಖಾತೆಯನ್ನು 1956ರಲ್ಲಿ ಓಪನ್ ಮಾಡಿತ್ತು. ಅಲ್ಲದೆ ನೆರೆಯ ರಾಷ್ಟ್ರ ಕೊನೆಯದಾಗಿ 1992ರಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿತ್ತು. ಈಗ ಅರ್ಷದ್ ನದೀಮ್ ಬಂಗಾರ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications