Paralympics 2024: ಭಾರತೀಯ ಪ್ಯಾರಾ ಅಥ್ಲೀಟ್‌ಗಳಿಗೆ ಗೋಲ್ಡನ್ ಬಾಯ್ ಸಾಥ್
ಬಹುನಿರೀಕ್ಷಿತ 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಿನ್ನೆಯಿಂದ (ಬುಧವಾರ) ಆರಂಭವಾಗಿದೆ. ಭಾರತೀಯ ಕ್ರೀಡಾಪಟಗಳು ಇಂದಿನಿಂದ ತಮ್ಮ ಅಭಿಯಾನವನ್ನು ಆರಂಭಿಸಲಿದ್ದಾರೆ. ಅದಕ್ಕೂ ಮುನ್ನ ಭಾರತದ ಗೋಲ್ಡನ್ ಬಾಯ್ ಖ್ಯಾತಿಯ ನೀರಜ್ ಚೋಪ್ರಾ ದೇಶದ ಪ್ಯಾರಾಲಿಂಪಿಕ್ ತಂಡವನ್ನು ಅಭಿನಂದಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಅವರು ತಮ್ಮ ದೇಶದ ಎಲ್ಲಾ ಪ್ಯಾರಾಲಿಂಪಿಕ್ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದ್ದಾರೆ. ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರು ಬುಧವಾರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಭಾರತೀಯ ಪ್ಯಾರಾ ಅಥ್ಲೀಟ್‌ಗಳನ್ನು ಅಭಿನಂದಿಸಿದ್ದಾರೆ.

"ಪ್ಯಾರಿಸ್‌ನಲ್ಲಿ ಪ್ರಾರಂಭವಾಗುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಅತ್ಯುತ್ತಮ ಭಾರತೀಯ ಕ್ರೀಡಾಪಟುಗಳಿಗೆ ನನ್ನ ಶುಭಾಶಯಗಳು. ನಮಗೆ ನೀವು ಸ್ಫೂರ್ತಿ ನೀಡುತ್ತಿರಿ" ಎಂದು ನೀರಜ್ ಬರೆದುಕೊಂಡಿದ್ದಾರೆ.
ಎಲ್ಲಿಯವರಗೆ?
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಆಗಸ್ಟ್ 28 ರಿಂದ ಸೆಪ್ಟೆಂಬರ್ 9 ರವರೆಗೆ ನಡೆಯಲಿದೆ. ಭಾರತವು ಒಟ್ಟು 22 ಕ್ರೀಡೆಗಳ ಪೈಕಿ 12 ರಲ್ಲಿ ಭಾಗವಹಿಸಲಿದೆ. ಭಾರತದ 84 ಪ್ಯಾರಾ ಅಥ್ಲೀಟ್‌ಗಳು ಪದಕ ಗೆಲ್ಲುವ ಪ್ರಬಲ ಸ್ಫರ್ಧಿಗಳಾಗಿದ್ದಾರೆ.
ನೇರಪ್ರಸಾರ ಎಲ್ಲಿ, ಯಾವಾಗ?
ಭಾರತದಲ್ಲಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಯಾವುದೇ ಟಿವಿ ಚಾನೆಲ್‌ನಲ್ಲಿ ನೇರಪ್ರಸಾರವಾಗುವುದಿಲ್ಲ. ಆದರೆ ಕ್ರೀಡಾಕೂಟಕ್ಕಡ ಸಂಬಂಧಿಸಿದ ಮುಖ್ಯಾಂಶಗಳು Sports18 TV ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ. ಮೊಬೈಲ್‌ನಲ್ಲಿ ಅಪ್ಲಿಕೇಶನ್ JioCinema ನಲ್ಲಿ ಲೈವ್ ಸ್ಟೀಮಿಂಗ್ ಲಭ್ಯವಿರಲಿದೆ.
ದಕ್ಕದ ಬಂಗಾರ
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅವರಿಂದ ಭಾರತ ಬಂಗಾರದ ಪದಕದ ನಿರೀಕ್ಷೆಯಲ್ಲಿತ್ತು. ಆದರೆ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 89.45 ಮೀಟರ್‌ಗಳನ್ನು ಎಸೆದು ಬೆಳ್ಳಿ ಪದಕವನ್ನು ಗೆದ್ದಿದ್ದರು. ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ನದೀಮ್ 92.97 ಮೀಟರ್ ಎಸೆದು ಒಲಿಂಪಿಕ್ ದಾಖಲೆಯೊಂದಿಗೆ ಐತಿಹಾಸಿಕ ದಾಖಲೆ ಮಾಡಿದ್ದರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications