Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paralympics 2024: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್ -ಪ್ರೀತಿ ಭಾರತದ ಧ್ವಜಧಾರಿಗಳು

2024ರ ಪ್ಯಾರಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಅಂತಿಮ ಘಟ್ಟ ತಲುಪಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಇಲ್ಲಿವರೆಗೆ ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಐತಿಹಾಸಿ ದಾಖಲೆ ಸೃಷ್ಟಿಸಿದ್ದಾರೆ.

ಈಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಸಮಾರೋಪ ಸಮಾರಂಭದಲ್ಲಿ ಭಾರತದ ಆರ್ಚರ್ ಹರ್ವಿಂದರ್ ಸಿಂಗ್ ಮತ್ತು ಓಟಗಾರ್ತಿ ಪ್ರೀತಿ ಪಾಲ್ ಭಾರತದ ಧ್ವಜಧಾರಿಗಳಾಗಿ ಆಯ್ಕೆಯಾಗಿದ್ದಾರೆ. ಪ್ಯಾರಾಲಿಂಪಿಕ್ಸ್‌ ಆರ್ಚರಿಯಲ್ಲಿ ದೇಶಕ್ಕೆ ಹರ್ವಿಂದರ್ ಸಿಂಗ್ ಮೊದಲ ಚಿನ್ನದ ಪದಕವನ್ನು ಗೆದ್ದು ಕೊಟ್ಟಿದ್ದಾರೆ. ಅವರು 2021ರ ಟೋಕಿಯೊ ಕ್ರೀಡಾಕೂಡದಲ್ಲಿ ಕಂಚಿನ ಪದಕವನ್ನು ಗೆದ್ದರು.

Paris Paralympics Closing Ceremony 2024 Harvinder Singh- Preeti Pal selected as India flag bearers

ಇದೇ ವೇಳೆ ಮಾತನಾಡಿರುವ ಹರ್ವಿಂದರ್ ಸಿಂಗ್, "ಭಾರತಕ್ಕೆ ಬಂಗಾರದ ಚಿನ್ನದ ಪದಕ ಗೆದ್ದಿರುವ ನನ್ನ ಕನಸು ನನಸಾಗಿದೆ. ಇದೀಗ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಿರುವುದು ದೊಡ್ಡ ಗೌರವ. ನನ್ನ ಮೇಲೆ ನಂಬಿಕೆ ಇಟ್ಟ ಪ್ರತಿಯೊಬ್ಬರ ಗೆಲುವು ಇದಾಗಿದೆ. ಇದು ಕನಸುಗಳನ್ನು ಈಡೇರಿಸಲು ಎಲ್ಲರಿಗೂ ಸ್ಫೂರ್ತಿಯಾಗುವ ವಿಶ್ವಾಸದಲ್ಲಿದ್ದೇನೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಮಹಿಳೆಯರ ಟಿ35 100 ಹಾಗೂ 200 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿರುವ ಪ್ರೀತಿ ಪಾಲ್ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಛಲವೊಂದು ಇದ್ದರೆ ಏನಾದರೂ ಸಾಧಿಸಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆ ಆಗಿದ್ದಾರೆ.

ಪ್ರೀತಿ ಪಾಲ್ ಕೂಡ ಪ್ಯಾರಾಲಿಂಪಿಕ್ಸ್‌ನ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. "ಧ್ವಜಧಾರಿಯಾಗಿ ಭಾರತವನ್ನು ಪ್ರತಿನಿಧಿಸುವುದು ದೊಡ್ಡ ಗೌರವವಾಗಿದೆ. ಈ ಕ್ಷಣ ನನಗಷ್ಟೇ ಅಲ್ಲ, ಇದು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಲು ಶಕ್ತಿಮೀರಿ ಪ್ರಯತ್ನಿಸಿರುವ ಪ್ರತಿಯೊಬ್ಬ ಅಥ್ಲೀಟ್ ಗಳ ಕ್ಷಣವಾಗಿದೆ. ಸಮಾರೋಪ ಸಮಾರಂಭದಲ್ಲಿ ನಮ್ಮ ಅದ್ಭುತ ತಂಡವನ್ನು ಮುನ್ನಡೆಸಲು ನಾನು ರೋಮಾಂಚನಗೊಂಡಿದ್ದೇನೆ ಅಥ್ಲೀಟ್ ಪ್ರೀತಿ ತಿಳಿಸಿದ್ದಾರೆ.

ಇಲ್ಲಿಯವರೆಗೆ ಭಾರತವು 6 ಚಿನ್ನ, 9 ಬೆಳ್ಳಿ ಮತ್ತು 11 ಕಂಚು ಸೇರಿದಂತೆ ಒಟ್ಟು 26 ಪದಕಗಳನ್ನು ಗೆದ್ದಿದೆ. ಇದು ಇಲ್ಲಿವರೆಗಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಅಥ್ಲೀಟ್‌ಗಳ ಅತ್ಯುತ್ತಮ ಪ್ರದರ್ಶನವಾಗಿದೆ.

Story first published: Friday, September 6, 2024, 23:28 [IST]
Other articles published on Sep 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+