Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ತೀರ್ಪುಗಾರರಾಗಿ ಆಯ್ಕೆಯಾದ ಮೊದಲ ಭಾರತೀಯ
ಜುಲೈ 11 ಬುಧವಾರ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ (ಎನ್‌ಆರ್‌ಎಐ) ಜಂಟಿ ಪ್ರಧಾನ ಕಾರ್ಯದರ್ಶಿ ಪವನ್ ಸಿಂಗ್ ಅವರಿಗೆ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಅವರ ಸಾಧನೆಗೆ ಮತ್ತೊಂದು ಗರಿ ಸೇರಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನ ಶೂಟಿಂಗ್ ಗೇಮ್ಸ್‌ನಲ್ಲಿ ಪವನ್ ಸಿಂಗ್ ಅವರನ್ನು ತೀರ್ಪುಗಾರರನ್ನಾಗಿ ನೇಮಕ ಮಾಡಲಾಗಿದೆ. ಒಲಿಂಪಿಕ್ಸ್‌ನಲ್ಲಿ ಪವನ್ ಸಿಂಗ್ ಅಂಪೈರ್ ಆಗಿ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿ.

ಈ ಸಾಧನೆ ಮಾಡಿದ ಮೊದಲ ಭಾರತೀಯ ಅಂಪೈರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನ ಶೂಟಿಂಗ್ ಸ್ಪರ್ಧೆಯಲ್ಲಿ ಅಂಪೈರ್ ಮಾಡಿದ ಏಕೈಕ ಭಾರತೀಯ ಪವನ್ ಸಿಂಗ್.
ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಾರ್ಯನಿರ್ವಹಣೆ ಮಾಡುವ ನಾಲ್ಕು ಆರ್‌ಟಿಎಸ್ (ಫಲಿತಾಂಶಗಳು, ಸಮಯಗಳು, ಅಂಕಗಳು) ತೀರ್ಪುಗಾರರಲ್ಲಿ ಪವನ್ ಸಿಂಗ್ ಅವರನ್ನು ಮತ್ತೊಮ್ಮೆ ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) ಆಯ್ಕೆ ಮಾಡಿದೆ.
ಪವನ್ ಸಿಂಗ್ ಹೇಳಿದ್ದೇನು?
ಅಂಪೈರ್ ಆಗಿ ಸತತ ಒಲಂಪಿಕ್ಸ್‌ನಲ್ಲಿ ನನ್ನ ದೇಶವನ್ನು ಪ್ರತಿನಿಧಿಸಲು ನನಗೆ ಹೆಮ್ಮೆ ಇದೆ. ನನ್ನ ಕೆಲಸದಲ್ಲಿ ಬೆಂಬಲ ಮತ್ತು ನಂಬಿಕೆ ಇಟ್ಟ ಎನ್‌ಆರ್‌ಎಐ ಮತ್ತು ಐಎಸ್‌ಎಸ್‌ಎಫ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪವನ್ ಹೇಳಿದ್ದಾರೆ.
ಪ್ಯಾರಿಸ್ ಗೇಮ್ಸ್ ನನಗೆ ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ತುಂಬಾ ವಿಶೇಷವಾಗಿದೆ. ಇದು ನನ್ನ ಎರಡನೇ ಒಲಿಂಪಿಕ್ಸ್ ಆಗಿದ್ದು, ಭಾರತ ತನ್ನ ಅತಿದೊಡ್ಡ ಶೂಟಿಂಗ್ ತಂಡವನ್ನು ಕಳುಹಿಸಲಿದೆ. ಪ್ಯಾರಿಸ್‌ನಲ್ಲಿ 21 ಶೂಟರ್‌ಗಳು 27 ಪದಕಗಳಿಗಾಗಿ ಪೈಪೋಟಿ ನಡೆಸಲಿದ್ದು, ಚೀನಾದ ನಂತರ ಎರಡನೇ ಸ್ಥಾನದಲ್ಲಿದೆ ಎಂದು ಪವನ್ ತಿಳಿಸಿದ್ದಾರೆ.
ಗನ್ ಫಾರ್ ಗ್ಲೋರಿ ಅಕಾಡೆಮಿ
ಪವನ್ ಮತ್ತು ಗಗನ್ ಅವರು ಗನ್ ಫಾರ್ ಗ್ಲೋರಿ ಶೂಟಿಂಗ್ ಅಕಾಡೆಮಿಯ ಸಹ-ಸಂಸ್ಥಾಪಕರಾಗಿದ್ದಾರೆ. ಗನ್ ಫಾರ್ ಗ್ಲೋರಿ ಅಕಾಡೆಮಿಯ ಇಬ್ಬರು ಶೂಟರ್‌ಗಳಾದ ಎಲವೆನಿಲ್ ವಲರಿವನ್ ಮತ್ತು ರಮಿತಾ ಕೂಡ ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತ ಅಥ್ಲೀಟ್ಸ್ ತಂಡದ ಭಾಗವಾಗಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಜಿಎಫ್‌ಜಿ ಪ್ರಾರಂಭವಾದಾಗಿನಿಂದ ಒಟ್ಟು 330 ಅಂತರಾಷ್ಟ್ರೀಯ ಪದಕಗಳನ್ನು ಗೆದ್ದಿದೆ. ಇತ್ತೀಚಿನ ಒಲಿಂಪಿಕ್ ಆಯ್ಕೆ ಟ್ರಯಲ್ಸ್‌ನಲ್ಲಿ ಅಕಾಡೆಮಿಯ 6 ಶೂಟರ್‌ಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದರು.
ಎಲವೆನಿಲ್ ಮತ್ತು ರಮಿತಾ ಟ್ರಯಲ್ಸ್ ಗೆಲ್ಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ್ದರು. ಈ ಟ್ರಯಲ್ಸ್‌ನಲ್ಲಿ ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದರು. ರಮಿತಾ ಕೊನೆಯ ಅರ್ಹತೆಯಲ್ಲಿ 636.4 ಅಂಕಗಳನ್ನು ಗಳಿಸಿದರೆ, ಎಲವೆನಿಲ್ ಫೈನಲ್‌ನಲ್ಲಿ 254.3 ಗಳಿಸಿದ್ದರು. ಇದು ಅನಧಿಕೃತ ವಿಶ್ವ ದಾಖಲೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications