ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯಾದ ಕ್ರಿಕೆಟರ್ ಗೆ ಮಾರಕವಾದ ಬೌನ್ಸರ್

By Mahesh

ಸಿಡ್ನಿ, ನ.25: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಫಿಲ್ ಹ್ಯೂಸ್ ಅವರು ಮಾರಣಾಂತಿಕ ದಾಳಿ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಬೌನ್ಸರ್ ಆಡಲು ಹೋದ ಹ್ಯೂಸ್ ಅವರ ತಲೆಗೆ ಭಾರಿ ಪೆಟ್ಟು ಬಿದ್ದಿದ್ದು ಕ್ರೀಸ್ ನಲ್ಲೇ ಕುಸಿದಿದ್ದಾರೆ.

ಷೆಫೀಲ್ಡ್ ಶೀಲ್ಡ್ ಪಂದ್ಯವೊಂದರಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನ್ಯೂ ಸೌಥ್ ವೇಲ್ಸ್ ಹಾಗೂ ದಕ್ಷಿಣ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕು ದಿನಗಳ ಪಂದ್ಯದಲ್ಲಿ ಈ ದುರ್ಘಟನೆ ನಡೆದಿದೆ.

Phil Hughes in critical condition after knocked out by bouncer at SCG

ಆಸ್ಟ್ರೇಲಿಯನ್ ಮಾಧ್ಯಮಗಳ ವರದಿ ಪ್ರಕಾರ ಫಿಲ್ ಹ್ಯೂಸ್ ದೇಹಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ನ್ಯೂ ಸೌಥ್ ವೇಲ್ಸ್ ಪರ ಆಡುತ್ತಿದ್ದ ಹ್ಯೂಸ್ ಅವರು 63 ರನ್ ಗಳಿಸಿ ಆಡುತ್ತಿದ್ದಾಗ ಸೀನ್ ಅಬಾಟ್ ಅವರು ಬೌನ್ಸರ್ ಎಸೆದಿದ್ದಾರೆ. ಬೌನ್ಸರ್ ಹುಕ್ ಮಾಡಲು ಯತ್ನಿಸಿದಾಗ ತಲೆಗೆ ಚೆಂಡು ಬಡಿದಿದೆ. ತಕ್ಷಣವೇ ಪಂದ್ಯವನ್ನು ನಿಲ್ಲಿಸಿ ಮೈದಾನಕ್ಕೆ ಹೆಲಿಕಾಪ್ಟರ್ ಕರೆಸಿಕೊಳ್ಳಲಾಗಿದೆ.

25 ವರ್ಷ ವಯಸ್ಸಿನ ಪ್ರತಿಭಾವಂತ ಎಡಗೈ ಬ್ಯಾಟ್ಸ್ ಮನ್ ಹ್ಯೂಸ್ ಅವರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಅದರೆ, ಹ್ಯೂಸ್ ದೇಹಸ್ಥಿತಿ ಗಂಭೀರವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಡೇವಿಡ್ ವಾರ್ನರ್ ಅವರು ಹ್ಯೂಸ್ ಅವರ ಜೊತೆಗೆ ತೆರಳಿದ್ದಾರೆ. ಟೀಂ ಡಾಕ್ಟರ್ ಡಾ. ಜಾನ್ ಆರ್ಕಾಡ್ ಅವರು ಬಾಯಿಗೆ ಬಾಯಿಗೆ ಇಟ್ಟು ಕೃತಕ ಉಸಿರಾಟ ನೀಡುವ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಏರ್ ಆಂಬ್ಯುಲೆನ್ಸ್ ಕರೆಸಿಕೊಳ್ಳಲಾಯಿತು.ಸದ್ಯ ಸೈಂಟ್ ವಿನ್ಸೆಂಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ಅವರು ತಮ್ಮ ಆಪ್ತ ಗೆಳೆಯ ಹ್ಯೂಸ್ ನೋಡಲು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹ್ಯೂಸ್ ಅವರು ಆಸ್ಟ್ರೇಲಿಯಾ ಪರ 26 ಟೆಸ್ಟ್, 25 ಏಕದಿನ ಕ್ರಿಕೆಟ್, 1 ಟಿ 20 ಪಂದ್ಯವಾಡಿದ್ದಾರೆ. ಭಾರತ ವಿರುದ್ಧ ಟೆಸ್ಟ್ ಸರಣಿ ಆಡುವ ಕನಸು ಹೊತ್ತಿದ್ದರು. ಬ್ರಿಸ್ಬೇನ್ ನಲ್ಲಿ ಡಿ.4ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.[ವೇಳಾಪಟ್ಟಿ ನೋಡಿ]

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X