For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಮಿಡ್ ನೈಟ್ ಮ್ಯಾರಥಾನ್‍: ಕೀನ್ಯಾ, ಇಥಿಯೋಪಿಯಾ ಅಥ್ಲೀಟ್ಸ್ ಪ್ರಾಬಲ್ಯ

By ಪ್ರತಿನಿಧಿ
PhonePe Bengaluru Midnight Marathon results

ಬೆಂಗಳೂರು, ಭಾನುವಾರ, ಡಿಸೆಂಬರ್‍ 8, 2019; 13ನೇ ಆವೃತ್ತಿ ಮಿಡ್‍ನೈಟ್‍ ಮ್ಯಾರಥಾನ್‍ ಅದ್ಧೂರಿಯಾಗಿ ನಡೆಯಿತು. ಫುಲ್‍ ಮ್ಯಾರಥಾನ್‍ ನಲ್ಲಿ ಇಥಿಯೋಪಿಯಾದ 21 ವರುಷದ ಜಿಕೆ ಅಟ್ಲಾವ್‍ ದೆಬೆಹಾ 42. 195 ಕಿ.ಮೀ. ಓಟದಲ್ಲಿ ಮೊದಲ ಸ್ಥಾನ ಪಡೆದರು. ಅವರು ಗುರಿಯನ್ನು ಒಟ್ಟು 2 ಗಂಟೆ 22. 01 ಸೆಕೆಂಡ್ಸ್, 21 ಮಿಲಿಸೆಕೆಂಡ್ಸ್‍ ನಲ್ಲಿ ಗುರಿ ಸೇರಿ ಚಿನ್ನದ ಪದಕ ಪಡೆದರು. ಎರಡನೇ ಸ್ಥಾನವನ್ನು ಇಥಿಯೋಪಿಯಾದ ಡೆಗೆಫಾ ಮೆಜಾ‍್ 2 ಗಂಟೆ 22.01 ಸೆಕೆಂಡ್ಸ್‍ 67 ದ್ವಿತೀಯ ಸ್ಥಾನ ಪಡೆದರು. ಇಥಿಯೋಪಿಯಾ ಮತ್ತೊಬ್ಬ ಓಟಗಾರ ಬಿಕಿಲೆ ಅಬೆಬೆ ಆಸೆಫ 2 ಗಂಟೆ 32.12 ಸೆಕೆಂಡ್ಸ್‍ ನಲ್ಲಿ ಗುರಿ ತಲುಪಿ ತೃತೀಯ ಸ್ಥಾನ ಪಡೆದರು.
ಒಟ್ಟಾರೆ ದೇಶ ವಿದೇಶ ಸೇರಿದಂತೆ 6 ಸಾವಿರಕ್ಕೂ ಅಧಿಕ ಮಂದಿ ಅಥ್ಲೀಟ್‍ ಗಳು ಭಾಗಿಯಾಗಿದ್ದರು. ಯುವಕರು, ಮಕ್ಕಳು, ವಿಕಲಚೇತನ ವಿಭಾಗದ ಅಥ್ಲೀಟ್ ಗಳು ಕ್ರೀಡಾ ಕೂಟಕ್ಕೆ ವಿಶೇಷ ಮೆರುಗನ್ನು ತಂದರು. 10ಕೆ ಓಟದಲ್ಲಿ ಒಟ್ಟು 2 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದು ಗಮನ ಸೆಳೆಯಿತು.

* 10ಕೆ ಮುಕ್ತ ವಿಭಾಗದಲ್ಲೂ ಇಥಿಯೋಪಿಯಾ ಪರಾಕ್ರಮ:
ಪುರುಷರ 10ಕೆ ವಿಭಾಗದಲ್ಲಿ 24 ವರುಷದ ಹುಮ್ನೇಶ್‍ ಹೈಲುಟಿಚಾ 31 ನಿಮಿಷ 31 ಸೆಕೆಂಡ್ಸ್‍ ನಲ್ಲಿ ಗುರಿ ಸೇರಿದರು. ಚಿನ್ನದ ಪದಕ ಪಡೆದರು. ಇಥಿಯೋಪಿಯಾದ ಮತ್ತೊಬ್ಬ ತಾರೆ ಅಬೆಬೆ ಫೆಕಾಡೆ 31 ನಿಮಿಷ 45 ಸೆಕೆಂಡ್ಸ್‍ ನಲ್ಲಿ ಗುರಿ ಸೇರಿ ದ್ವಿತೀಯ ಸ್ಥಾನ ಪಡೆದರು. ವಿಶೇಷವೆಂದರೆ ಈ ವಿಭಾಗದಲ್ಲಿ ಭಾರತದ ಶಿವಂ ಯಾದವ್‍ ವಿದೇಶಿ ಓಟಗಾರರಿಗೆ ಕಠಿಣ ಸವಾಲು ನೀಡಿದರು. 32 ನಿಮಿಷ 04 ಸೆಕೆಂಡ್ಸ್‍ನಲ್ಲಿ ಗುರಿ ತಲುಪಿ ತೃತೀಯ ಸ್ಥಾನ ಪಡೆದರು.
*ಭಾರತೀಯರ ವಿಭಾಗದಲ್ಲಿ ಶಿವಂ, ಸ್ಮಿತಾಗೆ ಚಿನ್ನ:
ಪುರುಷರ 10 ಕೆ ಓಟದಲ್ಲಿ ಭಾರತೀಯರು ಅತ್ಯುತ್ಸಾಹದಿಂದ ಭಾಗವಹಿಸಿದರು. ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಶಿವಂ ಯಾದವ್‍ 32. ನಿಮಿಷ 04 ಸೆಕೆಂಡ್ಸ್‍ ನಲ್ಲಿ ಗುರಿ ಸೇರಿ ಮೊದಲಿಗರಾದರು. ಇದೇ ವಿಭಾಗದ ದ್ವಿತೀಯ ಸ್ಥಾನವನ್ನು ಎಂಇಜಿ ಕೇಂದ್ರದ ಎಂ.ಡಿ.ಧೋನೆಶ್‍ (32 ನಿಮಿಷ 44 ಸೆಕೆಂಡ್ಸ್‍) ಪಡೆದರು. ಬೆಂಗಳೂರಿನ ತಾರಾಚಂದ್‍ 32.46 ಸೆಕೆಂಡ್ಸ್‍ ನಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದರು.
ಭಾರತೀಯ ಮಹಿಳಾ ವಿಭಾಗದ 10ಕೆ ಓಟದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಸ್ಮಿತಾ 40 ನಿಮಿಷ59 ಸೆಕೆಂಡ್ಸ್‍ ನಲ್ಲಿ ಮೊದಲಿಗರಾಗಿ ತಲುಪಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು. ಭಾರತೀಯ ಕ್ರೀಡಾ ಪ್ರಾಧಿಕಾರದ ಕೆ.ಬಿ ಹರ್ಷಿತ 43 ನಿಮಿಷ 24 ಸೆಕೆಂಡ್ಸ್‍ ನಲ್ಲಿ ದ್ವಿತೀಯ ಸ್ಥಾನಿಯಾದರು. ಈವಿಭಾಗದ ತೃತೀಯ ಸ್ಥಾನವನ್ನು ಫರ್ಹೀನ್‍ (45 ನಿಮಿಷ 31 ಸೆಕೆಂಡ್ಸ್‍ನಲ್ಲಿ ಗುರಿ ಸೇರಿ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಉಳಿದಂತೆ ಮುಕ್ತ ವಿಭಾಗದ ಪುರುಷರ ಹಾಫ್‍ ಮ್ಯಾರಥಾನ್ ನಲ್ಲಿ ಕೀನ್ಯಾದ ಲ್ಯಾಂಗರ್‍ 1 ಗಂಟೆ 5 ನಿಮಿಷ 11 ಸೆಕೆಂಡ್ಸ್‍ ನಲ್ಲಿ ರೇಸ್‍ ಮುಗಿಸಿ ಮೊದಲ ಸ್ಥಾನ ಪಡೆದರು. ಈ ವಿಭಾಗದ ದ್ವಿತೀಯ ಸ್ಥಾನವನ್ನು ಕೀನ್ಯಾದ ಹೆನ್ರಿ ಕಿಪ್ರೊನೊ 1 ಗಂಟೆ 5 ನಿಮಿಷ 13 ಸೆಕೆಂಡ್ಸ್‍ ದ್ವಿತೀಯ ಹಾಗೂ ಇಥಿಯೋಪಿಯಾದ ಉರ್ಗೆಕು ಬಾಶೆಟು 1 ಗಂಟೆ 5 ನಿಮಿಷ 22 ಸೆಕೆಂಡ್ಸ್‍ನಲ್ಲಿ ತೃತೀಯ ಸ್ಥಾನ ಪಡೆದರು. ಭಾರತೀಯರ ವಿಭಾಗ ಪುರುಷರ ಹಾಫ್‍ ಮ್ಯಾರಥಾನ್‍ನಲ್ಲಿ ಮೊದಲ ಸ್ಥಾನವನ್ನು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರವೀಣ್‍ ಜವಂತ್‍ ಪಡೆದರು. ಒಟ್ಟು 1 ಗಂಟೆ 10 ನಿಮಿಷ 5 ಸೆಕೆಂಡ್ಸ್‍ನಲ್ಲಿ ನಿಗದಿತ ಗುರಿ ಪೂರೈಸಿದರು. ಇದೇ ವಿಭಾಗದ ದ್ವಿತೀಯ ಸ್ಥಾನವನ್ನು 25 ವರುಷದ ಅಂಬು ಕುಮಾರ್‍ ಪಡೆದರು. ಅವರು 1 ನಿಮಿಷ 12 ನಿಮಿಷ 3 ಸೆಕೆಂಡ್ಸ್‍ ನಲ್ಲಿ ಗುರಿ ತಲುಪಿದರು. ಅವರು ಮದ್ರಾಸ್‍ ಇಂಜಿನಿಯರಿಂಗ್‍ ಸೆಂಟರ್‍ ಅನ್ನು ಪ್ರತಿನಿಧಿಸಿದ್ದರು. ಇದೇ ಸಂಸ್ಥೆಯ ಕೆ.ಶಿಜು ಎಂಇಜಿಯ ಮತ್ತೊಬ್ಬ ಓಟಗಾರ ಕೆ ಶಿಜು 1 ಗಂಟೆ 14 ನಿಮಿಷ 08 ಸೆಕೆಂಡ್ಸ್‍ ನಲ್ಲಿ ಗುರಿ ಸೇರಿ ಕಂಚಿನ ಪದಕ ಗೆದ್ದರು.

Story first published: Sunday, December 8, 2019, 22:07 [IST]
Other articles published on Dec 8, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+