ಕಬಡ್ಡಿ ಕ್ಯಾಪ್ಟನ್ ಗೆ ಸವಾಲು ಎಸೆದ ಜಡೇಜ, ಹಾರ್ದಿಕ್
ಮುಂಬೈ, ಆಗಸ್ಟ್ 03: ಪ್ರೋ ಕಬಡ್ಡಿ ಲೀಗ್ 2017 ಜ್ವರ ಕ್ರಿಕೆಟರ್ ಗಳಿಗೂ ಹಬ್ಬಿದೆ. ಸಮಯ ಸಿಕ್ಕಾಗ ಪಂದ್ಯಗಳನ್ನು ನೋಡಿ ಕ್ರಿಕೆಟರ್ಸ್ ಟ್ವೀಟ್ ಮಾಡುತ್ತಿದ್ದಾರೆ.
ಈ ನಡುವೆ ಭಾರತದ ಕಬಡ್ಡಿ ತಂಡದ ನಾಯಕ, ಪಿಕೆಎಲ್ ನಲ್ಲಿ ಯು ಮುಂಬಾ ತಂಡದ ಕ್ಯಾಪ್ಟನ್ ಅನೂಪ್ ಕುಮಾರ್ ಗೆ ಕ್ರಿಕೆಟರ್ಸ್ ಚಾಲೆಂಜ್ ಹಾಕಿದ್ದಾರೆ.

ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಪರ ಆಡುತ್ತಿರುವ ರವೀಂದ್ರ ಜಡೇಜ, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಹಾಕಿದ ಸವಾಲನ್ನು ಅನೂಪ್ ಸ್ವೀಕರಿಸಿದ್ದಾರೆ.
ಕ್ರಿಕೆಟರ್ ಗಳು 'break the beard' ಚಾಲೆಂಜ್ ಹಾಕಿದ್ದಾರೆ. ವಿಡಿಯೋ ನೋಡಿಕೊಂಡು ಕ್ರಿಕೆಟರ್ಸ್ ಹೊಸ ಸ್ಟೈಲಿಗೆ ಮಾರು ಹೋಗುವ ನಾಯಕ ಅನೂಪ್, ಪಂಗಾ ಹೋಜಾಯ್ ಎಂದು ಸವಾಲು ಸ್ವೀಕರಿಸಿರುವುದಾಗಿ ಹೇಳುತ್ತಾರೆ.
ಕಳೆದ ಐಪಿಎಲ್ ಸೀಸನ್ ನಲ್ಲಿ ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ಶಿಖರ್ ಧವನ್, ಜಹೀರ್ ಖಾನ್ ಹಾಗೂ ರವೀಂದ್ರ ಜಡೇಜ ಅವರು ಗಡ್ಡ ತೆಗೆಯುವ ಚಾಲೆಂಜ್ ನಲ್ಲಿ ಪಾಲ್ಗೊಂಡು ಹೊಸ ಲುಕ್ ನೊಂದಿಗೆ ಕಾಣಿಸಿಕೊಂಡರು.
ಕಬಡ್ಡಿ ಲೋಕದಲ್ಲಿ ಕ್ಯಾಪ್ಟನ್ ಕೂಲ್ ಎನಿಸಿಕೊಂಡಿರುವ ಅನೂಪ್ ಅವರು ಈಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡರೆ, ಈ ಟ್ರೆಂಡ್ ಕಬಡ್ಡಿ ಕ್ಷೇತ್ರದಲ್ಲಿ ಇನ್ನಷ್ಟು ಆಟಗಾರರಿಗೆ ಹಬ್ಬಬಹುದು. ಕಳೆದ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ 28-29ರಲ್ಲಿ ಯೂ ಮುಂಬಾ ರೋಚಕ ಜಯ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Story first published: Wednesday, January 3, 2018, 10:16 [IST]
Other articles published on Jan 3, 2018
Read in English: PKL: Anup accepts Jadeja's challenge
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications