For Quick Alerts
ALLOW NOTIFICATIONS  
For Daily Alerts

ಯು ಮುಂಬಾ ವಿರುದ್ಧ ತಣ್ಣಗಾದ ಬೆಂಗಳೂರು ಬುಲ್ಸ್

ಮುಂಬೈ, ಜು. 20: ಮೊದಲ ಪಂದ್ಯದಲ್ಲಿ ಜಯ ದಾಖಲು ಮಾಡಿದ್ದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 2ನೇ ಆವೃತ್ತಿಯ ತನ್ನ 2ನೇ ಪಂದ್ಯದಲ್ಲಿ ಹಾಲಿ ರನ್ನರ್​ಅಪ್ ಯು ಮುಂಬಾ ವಿರುದ್ಧ ಭಾನುವಾರ ರಾತ್ರಿ ಸೋಲು ಅನುಭವಿಸಿದೆ.

ಮುಂಬೈನ ಎನ್​ಎಸ್​ಸಿಐ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 23-36 ಅಂಕಗಳಿಂದ ಮುಂಬೈ ತಂಡಕ್ಕೆ ಶರಣಾಯಿತು. ಸತತ 2ನೇ ಜಯ ಸಾಧಿಸಿದ ಮುಂಬೈ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು. ಒಂದು ಗೆಲುವು ಹಾಗೂ ಒಂದು ಸೋಲನುಭವಿಸಿದ ಬೆಂಗಳೂರು 3ನೇ ಸ್ಥಾನಕ್ಕೆ ಕುಸಿಯಿತು.[ಪಿಕೆಎಲ್ ವೇಳಾಪಟ್ಟಿ ನೋಡಿ]

bengalueu


ಮೊದಲ ಪಂದ್ಯದಲ್ಲಿ ಬೆಂಗಳೂರು ಉತ್ತಮ ಪ್ರದರ್ಶನ ನೀಡಿ ಅಚ್ಚರಿ ಜಯ ದಾಖಲಿಸಿತ್ತು. ಸ್ಟಾರ್ ರೈಡರ್ ಅಜಯ್ ಠಾಕೂರ್ (11 ಅಂಕ) ಅದ್ಭುತ ಪ್ರದರ್ಶನ ನೀಡಿ ಗೆಲುವು ತಂದುಕೊಟ್ಟಿದ್ದರು.

ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ಜಯದ ಆರಂಭ ಮಾಡಿದೆ. ಎನ್​ಎಸ್​ಸಿಐ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟೈಟಾನ್ಸ್ ತಂಡ 36-27 ರಿಂದ ದೆಹಲಿ ದಬಾಂಗ್ ತಂಡವನ್ನು ಮಣಿಸಿತು.[ಪ್ರೋ ಕಬಡ್ಡಿ: ಬೆಂಗಳೂರಿಗೆ ಜಯ ತಂದ ಅಜಯ್ ಠಾಕೂರ್]

ಇಂದಿನ ಪಂದ್ಯ, ಜುಲೈ 20
ಪುಣೇರಿ ಪಲ್ಟನ್ - ತೆಲಗು ಟೈಟಾನ್ಸ್
ಯು ಮುಂಬಾ -ಪಾಟ್ನಾ ಪಾಟ್ನ ಪೈರೇಟ್ಸ್

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+