ಒಲಿಂಪಿಕ್ಸ್ ನಲ್ಲೂ ಹೆಚ್ಚು ಪದಕ ಗೆಲ್ಲಲು ಭಾರತ ತಂಡಕ್ಕೆ ಮೋದಿ ಹಾರೈಕೆ

ನವದೆಹಲಿ, ಸೆಪ್ಟೆಂಬರ್ 5: ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಪದಕ ಗೆದ್ದ ಕ್ರೀಡಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಜೊತೆಗೆ ಮುಂದಿನ ಒಲಿಂಪಿಕ್ಸ್ ನಲ್ಲೂ ದೇಸಿ ಕ್ರೀಡಾ ತಂಡ ಹೆಚ್ಚು ಪದಕ ಗೆದ್ದು ಸಂಭ್ರಮವನ್ನು ದೇಶದೆಲ್ಲರಿಗೂ ಹಂಚಬೇಕೆಂದು ತಿಳಿಸಿದ್ದಾರೆ.
ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಒಟ್ಟು 69 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 8ನೇ ಸ್ಥಾನ ಗಳಿಸಿತ್ತು. ಇದರಲ್ಲಿ 15 ಬಂಗಾರ ಸೇರಿತ್ತು. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತ 69 ಪದಕಗಳನ್ನು ಗೆದ್ದಿದ್ದು ಇದೇ ಮೊದಲಸಾರಿ.
ಈ 18ನೇ ಏಷ್ಯನ್ ಗೇಮ್ಸ್ ನಲ್ಲಿ ದೇಶಕ್ಕಾಗಿ ಪದಕ ಗೆದ್ದ ತಂಡವನ್ನು ಬುಧವಾರ ಅಭಿನಂದಿಸಿದ ಮೋದಿ 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲೂ ಭಾರತ ಹೆಚ್ಚು ಪದಕ ಗೆಲ್ಲಬೇಕು. ಆ ನೆಲೆಯಲ್ಲಿ ಹೆಚ್ಚು ಶ್ರಮವಹಿಸಿ. ಒಲಿಂಪಿಕ್ಸ್ ನಂತ ಎಲ್ಲಾ ಪ್ರತಿಷ್ಠಿತ ಗೇಮ್ಸ್ ನಲ್ಲೂ ದೇಶಕ್ಕೆ ಹೆಚ್ಚು ಪದಕ ಬರುವಂತಾಗಲಿ ಎಂದು ಶುಭ ಹಾರೈಸಿದರು.
Story first published: Wednesday, September 5, 2018, 19:42 [IST]
Other articles published on Sep 5, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications