ಭಾರತದ ಕುಸ್ತಿ ಪಟು ವಿನೇಶ್‌ಗೆ ಧೈರ್ಯ ತುಂಬಿದ ಮೋದಿ
ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಫ್ರಿ ಸ್ಟೈಲ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದ ಭಾರತದ ವಿನೇಶ್ ಪೋಗಟ್ ಅವರಿಗೆ ಪೆಟ್ಟು ಬಿದ್ದಿದೆ. ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕವನ್ನು ಹೊಂದಿದ್ದರು ಎಂದು ವಿನೇಶ್ ಅವರನ್ನು ಅನರ್ಹ ಗೊಳಿಸಲಾಗಿದೆ. ಈ ಬಗ್ಗೆ ಭಾರತದ ಪ್ರಧಾನಿ ಟ್ವಿಟ್ ಮಾಡಿದ್ದಾರೆ.
ಈ ವೇಳೆ ಟ್ವೀಟ್ ಮಾಡಿರುವ ಮೋದಿ ನೀವು ಚಾಂಪಿಯನ್‌ಗಳ ಚಾಂಪಿಯನ್ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ನೀವು ಭಾರತದ ಹೆಮ್ಮೆ ಹಾಗೂ ಸ್ಪೂರ್ತಿ ಎಂದು ತಿಳಿಸಿದ್ದಾರೆ.

ನಿಜಕ್ಕೂ ಇದು ಬೇಸರದ ಸಂಗತಿ. ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನಿಮ್ಮಲ್ಲಿದೆ ಎಂದು ಬರೆದುಕೊಂಡಿದ್ದಾರೆ.
ಆಸ್ಪತ್ರೆಗೆ ದಾಖಲು
ಡಿಹ್ಯಾಡ್ರೆಷನ್‌ನಿಂದಾಗಿ ವಿನೇಶ್ ಪೋಗಟ್ ಅವರು ಆಸ್ಪತ್ರೆಗೆ ದಾಖಲಾಗಿದೆ. ತಾನು ಫೈನಲ್‌ನಲ್ಲಿ ಸ್ಪರ್ಧಿಸುತ್ತಿಲ್ಲ ಎಂಬ ವಿಷಯ ತಿಳಿದ ಬಳಿಕವೇ ವಿನೇಶ್ ಗಾಬರಿ ಗೊಂಡರು. ಅಲ್ಲದೆ ಡಿಹ್ಯಾಡ್ರೆಷನ್‌ನಗೆ ಬಲಿಯಾಗಬೇಕಾಯಿತು. ಈಗ ಅವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರು ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ.
ಲೋಕಸಭೆಯಲ್ಲಿ ಕೋಲಾಹಲ
ಒಲಿಂಪಿಕ್ಸ್ ಫೈನಲ್ ಪ್ರವೇಶಿಸಿದ್ದ ಕುಸ್ತಿ ಪಟು ವಿನೇಶ್ ಪೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. ಈ ಬಗ್ಗೆ ಲೋಕಸಭೆಯಲ್ಲಿ ಭಾರೀ ಕೋಲಾಹಲ ಉಂಟಾಗಿತ್ತು. ಈ ಬಗ್ಗೆ ವಿಪಕ್ಷಗಳು ಕ್ರೀಡಾ ಸಚಿವರಿಂದ ಉತ್ತರ ನೀಡುವಂತೆ ಒತ್ತಾಯಿಸಿದವು. ಈ ವಿಷಯದ ಬಗ್ಗೆ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಧ್ಯಾಹ್ನ ಉತ್ತರ ನೀಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications