ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಪಟುಗಳನ್ನು ಭೇಟಿ ಮಾಡಿದ ಮೋದಿ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದ ಸಾಧನೆ ಮಾಡಿರುವ ಅಥ್ಲೀಟ್‌ಗಳು ಹಾಗೂ ಭಾಗವಹಿಸಿದ್ದ ಕ್ರೀಡಾ ಪಟುಗಳನ್ನು ಗುರುವಾರ ಸ್ವಾತಂತ್ರ್ಯ ದಿನಾಚಾರಣೆಯ ದಿನದಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.
ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತ ಅಮೋಘ ಪ್ರದರ್ಶನವನ್ನು ನೀಡಿದೆ. ಒಟ್ಟು 117 ಕ್ರೀಡಾ ಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಭಾರತ 6 ಪದಕಗಳನ್ನು ಗೆದ್ದಿದೆ. ಇದರಲ್ಲಿ ಒಂದು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳು ಸೇರಿವೆ.

ಕ್ರೀಡಾಪಟುಗಳನ್ನು ಭೇಟಿ ಆದ ಪ್ರಧಾನಿ ಮೋದಿ
ಗುರುವಾರ ಕೆಂಪು ಕೋಟೆಯಲ್ಲಿನ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಒಲಿಂಪಿಯನ್ಸ್‌ಗಳನ್ನು ಭೇಟಿ ಮಾಡಿದರು. ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಭಾರತ ಹಾಕಿ ತಂಡವನ್ನು ಭೇಟಿಯಾದರು. ಇದೇ ವೇಳಿ ಆಟಗಾರರ ಕೊರಳಲ್ಲಿನ ಪದಕವನ್ನು ನೋಡಿ ಖುಷಿ ಪಟ್ಟರು. ಬಳಿಕ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಸಾಧನೆ ಮಾಡಿರುವ ಮನು ಭಾಕರ್ ಹಾಗೂ ಸರ್‌ಬಜೋತ್ ಸಿಂಗ್ ಅವರನ್ನು ಪ್ರಧಾನಿ ಭೇಟಿ ಆದರು.
ಇದೇ ವೇಳೆ ಶೂಟಿಂಗ್‌ನಲ್ಲಿ ಕಂಚಿನ ಸಾಧನೆ ಮಾಡಿದ ಸ್ವಪ್ನಿಲ್ ಕುಸಾಲೆ ಅವರನ್ನು ಸಹ ಮೋದಿ ಭೇಟಿ ಮಾಡಿದರು. ಕುಸ್ತಿಯಲ್ಲಿ ಕಂಚಿನ ಸಾಧನೆ ಮಾಡಿದ್ದ ಅಮನ್ ಸೆಹ್ರಾವತ್ ವಿಡಿಯೋದಲ್ಲಿ ಕಂಡು ಬಂದರು. ಇದೇ ವೇಳೆ ಅವರು ಜೆರ್ಸಿಯನ್ನು ಮೋದಿ ಅವರಿಗೆ ನೀಡುತ್ತಿರುವುದು ಕಂಡು ಬಂದಿತು. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ಆಗಿ ವೈರಲ್ ಆಗುತ್ತಿದೆ.
ಇದಕ್ಕೂ ಮುನ್ನ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ವೇಳೆ 2036ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸುವ ಕನಸನ್ನು ಹೊಂದಿರುವುದಾಗಿ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications