ವಿಶ್ವಕಪ್ ಗೆದ್ದು ತನ್ನಿ: ಧೋನಿ ತಂಡಕ್ಕೆ ಮೋದಿ ಕರೆ
ನವದೆಹಲಿ, ಫೆ.12:ಹಾಲಿ ವಿಶ್ವ ಚಾಂಪಿಯನ್ ಟೀಂ ಇಂಡಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ. ವಿಶ್ವಕಪ್ ಗೆದ್ದು ತರುವಂತೆ ಮೋದಿ ಅವರು ಕರೆ ನೀಡಿದ್ದಾರೆ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಜಾಗತಿಕವಾಗಿ ನಂ.2ನೇ ಸ್ಥಾನಕ್ಕೇರಿರುವ ಮೋದಿ ಅವರು ನೀಡಿರುವ ಕರೆಗೆ ಸಾರ್ವಜನಿಕರು ಕೂಡಾ ತಮ್ಮ ಶುಭ ಹಾರೈಕೆ ಸಂದೇಶಗಳನ್ನು ಪೋಣಿಸಿದ್ದಾರೆ.
ಮೋದಿ ಅವರು ಗುರುವಾರ ಸರಣಿ ಟ್ವೀಟ್ ಮಾಡಿ 'ಖೇಲೋ ದಿಲ್ಸೆ ವರ್ಲ್ಡ್ ಕಪ್ ಲಾವೋ ಫಿರ್ ಸೇ' ಎಂದು ಕರೆ ನೀಡಿದ್ದಾರೆ. ಎಂಎಸ್ ಧೋನಿ ನೇತೃತ್ವದ ತಂಡ ಪ್ರತಿ ಆಟಗಾರರಿಗೂ ಹುರಿದುಂಬಿಸುವ ಮಾತುಗಳನ್ನು ಬರೆದಿರುವ ಮೋದಿ ಅವರು ಧೋನಿ ಬಗ್ಗೆ ವಿಶೇಷ ಪದಗಳನ್ನು ಬಳಸಿ ನಿಮ್ಮ ಮೇಲೆ ನಂಬಿಕೆಯಿದೆ. ದೇಶದ ಗೌರವ ಇನ್ನಷ್ಟು ಹೆಚ್ಚಿಸಿ ಎಂದಿದ್ದಾರೆ.
ಜೊತೆಗೆ ವಿರಾಟ್ ಕೊಹ್ಲಿ ತಮ್ಮ ಎಂದಿನ ಲಯಕ್ಕೆ ಮರಳಿ ವಿಶ್ವಕಪ್ ಟೂರ್ನಿಯಲ್ಲಿ ಆರ್ಭಟಿಸಲಿ, ಇಡೀ ದೇಶ ನಿಮ್ಮ ಆಟವನ್ನು ನೋಡಲು ಕಾತುರರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ವಿಶ್ವಕಪ್ 2015 ಟೂರ್ನಿಯ ಟ್ರೋಫಿಯ ಜೊತೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬಾಟ್ ರೊಂದಿಗೆ ಮೋದಿ ಅವರು ಪೋಸ್ ಕೊಟ್ಟಿದ್ದನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ. ಮೋದಿ ಅವರ ಸರಣಿ ಟ್ವೀಟ್ ಗಳನ್ನು ನೋಡಿ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications