ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಪ್ಯಾರಾಲಂಪಿಕ್ಸ್ ಅಥ್ಲೀಟ್‌ಗಳ ಜೊತೆ ನರೇಂದ್ರ ಮೋದಿ ಸಂವಾದ

PM Narendra Modi interact with the Indian para-athlete contingent for Paralympics 2020

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಅಥ್ಲೀಟ್‌ಗಳ ಜೊತೆ ಆಗಸ್ಟ್ 17ರ ಮಂಗಳವಾರ ಸಂವಾದ ನಡೆಸಿದ್ದಾರೆ. ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಅಥ್ಲೀಟ್‌ಗಳನ್ನು ಮೋದಿ ಹುರಿದುಂಬಿಸಿದ್ದಾರೆ.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಭರ್ಜರಿ ಗೆಲುವಿಗೆ ದಿಗ್ಗಜರ ಪ್ರತಿಕ್ರಿಯೆ ಹೇಗಿದೆ ನೋಡಿ!ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಭರ್ಜರಿ ಗೆಲುವಿಗೆ ದಿಗ್ಗಜರ ಪ್ರತಿಕ್ರಿಯೆ ಹೇಗಿದೆ ನೋಡಿ!

ಟೋಕಿಯೋ ಪ್ಯಾರಾಲಂಪಿಕ್ಸ್ ಕ್ರೀಡಾಕೂಟ ಆಗಸ್ಟ್ 24ರಿಂದ ಸೆಪ್ಟೆಂಬರ್‌ 5ರ ವರೆಗೆ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ಆರ್ಚರಿ ಸ್ಪರ್ಧೆಯ ಮೂಲಕ ಟೋಕಿಯೋ ಪ್ಯಾರಾಲಂಪಿಕ್ಸ್ ಶುರುವಾಗಲಿದೆ. ಈ ಬಾರಿ ಭಾರತದಿಂದ ಒಟ್ಟು 54 ಅಥ್ಲೀಟ್‌ಗಳು ಬೇರೆ ಬೇರೆ 9 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.

'ಅವರಿಗೂ ನಮಗೂ ವ್ಯತ್ಯಾಸವಿದೆ'; ಸೋತ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ಜೋ ರೂಟ್!'ಅವರಿಗೂ ನಮಗೂ ವ್ಯತ್ಯಾಸವಿದೆ'; ಸೋತ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ಜೋ ರೂಟ್!

ವರ್ಚುಯಲ್ ವಿಡಿಯೋ ಮೂಲಕ ನರೇಂದ್ರ ಮೋದಿ ಭಾರತೀಯ ಪ್ಯಾರಾಲಂಪಿಕ್ಸ್ ಅಥ್ಲೀಟ್‌ಗಳ ಜೊತೆ ಮಾತುಕತೆ ನಡೆಸಿದ್ದಾರೆ. ಸುಮಾರು 1 ಗಂಟೆ, 15 ನಿಮಿಗಳ ಕಾಲ ನಡೆದಿರುವ ಈ ಸಂವಾದದ ವಿಡಿಯೋವನ್ನು ಮೋದಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಳ್ಳಲಾಗಿದೆ. ಕ್ರೀಡಾಪಟುಗಳ ಜೊತೆ ಮಾತನಾಡಿರುವ ಮೋದಿ ಅಥ್ಲೀಟ್‌ಗಳ ಬದುಕಿನ ಹಿನ್ನೆಯ ಬಗ್ಗೆ ಕೇಳಿ ಅವರನ್ನು ಸ್ಫೂರ್ತಿಗೊಳಿಸುವ ಯತ್ನಿಸಿದ್ದಾರೆ.

ರಿಯೋ ಪ್ಯಾರಾಲಂಪಿಕ್ಸ್ 2016ರಲ್ಲಿ ದೇಶ ಬಾವುಟ ಹಿಡಿದು ಮುನ್ನಡೆಸಿದ್ದ ಗುರುಶರಣ್ ಸಿಂಗ್ ಮತ್ತು ಬಂಗಾರದ ಪದಕ ವಿಜೇತ ಹೈ ಜಂಪರ್ ತಾಂಗವೇಲು ಮರಿಯಪ್ಪನ್ ಈ ಬಾರಿ ತಂಡದಲ್ಲಿ ಪದಕದ ನಿರೀಕ್ಷೆ ಮೂಡಿಸಿರುವ ಪ್ರಮುಖ ಅಥ್ಲೀಟ್‌ಗಳು. ಜುಲೈನಲ್ಲಿ ಟೋಕಿಯೋ ಒಲಿಂಪಿಕ್ಸ್ ಅಥ್ಲೀಟ್‌ಗಳ ಜೊತೆಗೂ ಮೋದಿ ಹೀಗೇ ಸಂವಾದ ನಡೆಸಿದ್ದರು.

Story first published: Tuesday, August 17, 2021, 16:34 [IST]
Other articles published on Aug 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X