For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್: ಭವಾನಿ ದೇವಿ ಭಾವುಕ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ

PM Narendra Modi reacted to Bhavani Devi after her loss at Olympics

ಟೋಕಿಯೋ, ಜುಲೈ: ಭಾರತದ ಪೆನ್ಸರ್ ಭವಾನಿ ದೇವಿ ಒಲಿಂಪಿಕ್ಸ್‌ನಲ್ಲಿ 32ರ ಘಟ್ಟದಲ್ಲಿ ಸೋತು ಹೊರಬಿದ್ದಿದ್ದಾರೆ. ವಿಶ್ವದ ನಂ. 3 ಆಟಗಾರ್ತಿ ಮ್ಯಾನೊನ್ ಬ್ರುನೆಟ್ ವಿರುದ್ಧ 7-15 ಅಂತರದಲ್ಲಿ ಸೋಲು ಕಂಡಿದ್ದಾರೆ. ಈ ಸೋಲಿನ ಬಳಿಕ ಭವಾನಿ ದೇವಿ ಭಾವುಕವಾಗಿ ಟ್ವೀಟ್ ಮಾಡಿ ಬೇಸರವನ್ನು ವ್ಯಕ್ತಪಡಿಸಿದ್ದರು. ಹಾಗೂ ತಮ್ಮ ಸೋಲಿಗೆ ಕ್ಷಮೆಯಾಚನೆಯನ್ನು ಮಾಡಿದ್ದರು.

ಭವಾನಿದೇವಿ ಮಾಡಿದ ಈ ಟ್ವೀಟ್‌ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ನೀವು ನಿಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದೀರಿ. ಸೋಲು ಗೆಲುವು ಜೀವನದ ಪ್ರಮುಖ ಭಾಗ. ನಿಮ್ಮ ಕೊಡುಗೆಗೆ ಭಾರತ ಹೆಮ್ಮೆ ಪಡುತ್ತದೆ. ನಮ್ಮ ನಾಗರೀಕರಿಗೆ ನೀವು ಸ್ಪೂರ್ತಿಯಾಗಿದ್ದೀರಿ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಭವಾನಿ ದೇವಿಗೆ ಮತ್ತಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಭವಾನಿ ದೇವಿ ಒಲಿಂಪಿಕ್ಸ್‌ನಲ್ಲಿ ಫೆನ್ಸಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಭವಾನಿದೇವಿ ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಉನ್ನತ ಶ್ರೇಯಾಂಕದ ಆಟಗಾರ್ತಿಯ ವಿರುದ್ಧ ಉತ್ತಮ ಹೋರಾಟವನ್ನು ಭವಾನಿದೇವಿ ಪ್ರದರ್ಶಿಸಿದ್ದರು. ಆದರೆ ಗೆಲುವು ಸಾಧ್ಯವಾಗಿರಲಿಲ್ಲ.

ಈ ಸೋಲಿನ ಬಳಿಕ ಭವಾನಿದೇವಿ ಟ್ವಿಟ್‌ ಮಾಡಿದ್ದರು. "ದೊಡ್ಡ ದಿನ. ಇದು ತುಂಬಾ ಉತ್ಸಾಹ ಹಾಗೂ ಭಾವನಾತ್ಮಕ ಕ್ಷಣವಾಗಿತ್ತು. ನಾನು ಒಲಿಂಪಿಕ್‌ನಲ್ಲಿ ಪ್ರಥಮ ಭಾರತೀಯ ಫೆನ್ಸಿಂಗ್ ಆಟಗಾರ್ತಿಯಾಗಿ ಕಣಕ್ಕಿಳಿದು ನಾಡಿಯಾ ಅಜೀಜಿ ವಿರುದ್ಧ ಮೊದಲ ಪಂದ್ಯವನ್ನು 15/3 ಅಂತರದಿಂದ ಗೆಲುವು ಸಾಧಿಸಿದ್ದೆ. ಆದರೆ ಎರಡನೇ ಪಂದ್ಯದಲ್ಲಿ ವಿಶ್ವದ 3ನೇ ಶ್ರೇಯಾಂಕದ ಆಟಗಾರ್ತಿ ಮನೊನ್ ಬ್ರುನೆಟ್ ವಿರುದ್ಧ ಸೋತಿದ್ದೇನೆ. ನಾನು ನನ್ನ ಅತ್ಯುತ್ತಮ ಆಟವನ್ನು ಆಡಿದ್ದೇನೆ. ಆದರೆ ಗೆಲುವು ಸಾಧ್ಯವಾಗಲಿಲ್ಲ. ಕ್ಷಮಿಸಿ" ಎಂದು ಭಾವುಕವಾಗಿ ಟ್ವೀಟ್ ಮಾಡಿದ್ದರು.

Story first published: Tuesday, July 27, 2021, 20:12 [IST]
Other articles published on Jul 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+