Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೋಕಿಯೋ ಒಲಿಂಪಿಕ್ಸ್‌ ಅಥ್ಲೀಟ್‌ಗಳಿಗೆ ಶುಭ ಹಾರೈಸಿದ ನರೇಂದ್ರ ಮೋದಿ

PM Narendra Modi wishes athletes luck ahead of Tokyo Olympics

ನವದೆಹಲಿ: ಮುಂಬರಲಿರುವ ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧವಾಗಿರುವ ಭಾರತೀಯ ಅಥ್ಲೀಟ್‌ಗಳಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಅಥ್ಲೀಟ್‌ಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಕ್ರೀಡಾಪಟುಗಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು.

"ನನ್ನ ಕೊನೇಯ ಮನ್‌ ಕೀ ಬಾತ್‌ನಲ್ಲಿ ನಾನು ನಿನ್ನ (ದೀಪಿಕಾ ಕುಮಾರಿ-ಆರ್ಚರ್) ಬಗ್ಗೆ ಮಾತನಾಡಿದ್ದೆ. ನೀನೀಗ ವಿಶ್ವ ನಂ.1 ಶ್ರೇಯಾಂಕಿತೆ. ವಿಶ್ವಕ್ಕೆ ನಿನ್ನ ಪ್ರಯಾಣದ ಹಾದಿ ಗೊತ್ತಾಗಬೇಕಿದೆ. ನನಗೆ ನಿನ್ನ ಬಾಲ್ಯದ ಬಗ್ಗೆ ಗೊತ್ತು. ನೀನಾಗ ಮಾವಿನ ಹಣ್ಣಿಗೆ ಗುರಿಯಿಡುತ್ತಿದ್ದೆ," ಎಂದು ಸಂವಾದದಲ್ಲಿ ಮೋದಿ ಹೇಳಿದ್ದಾರೆ.

"ನೀವು ಇಂಥ ದೊಡ್ಡ ಮಟ್ಟದ ವೇದಿಕೆಗೆ ಏರುವಾಗ ನಿರೀಕ್ಷೆಗಳೂ ಹೆಚ್ಚಿರುತ್ತವೆ. ಮುಂಬರಲಿರುವ ಗೇಮ್ಸ್‌ನಲ್ಲಿ ನೀವು ದೇಶಕ್ಕೆ ಹೆಮ್ಮೆ ತರುವ ಸಾಧನೆ ತೋರುತ್ತೀರಿ ಎಂದು ದೇಶಕ್ಕೆ ನಿಮ್ಮ ಮೇಲೆ ವಿಶ್ವಾಸವಿದೆ,' ಎಂದು ಮೋದಿ ಕ್ರೀಡಾಪಟುಗಳಿಗೆ ಹುರುಪು ತುಂಬಿದ್ದಾರೆ.

ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತದಿಂದ 18 ಕ್ರೀಡಾ ವಿಭಾಗಗಳಲ್ಲಿ ಒಟ್ಟು 126 ಕ್ರೀಡಾಪಟುಗಳು ತೆರಳಲಿದ್ದಾರೆ. ಯಾವುದೇ ಒಲಿಂಪಿಕ್ಸ್‌ಗೆ ಹೋಲಿಸಿದರೆ ಭಾರತ ಕಳುಹಿಸುತ್ತಿರುವ ಅತಿದೊಡ್ಡ ಅಥ್ಲೀಟ್‌ಗಳ ತಂಡ ಇದಾಗಿದೆ.

Story first published: Tuesday, July 13, 2021, 22:54 [IST]
Other articles published on Jul 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+