For Quick Alerts
ALLOW NOTIFICATIONS  
For Daily Alerts

ಸಾಧನೆಗೆ ಅಡ್ಡಿಯಾಗದ ಬಡತನ, ಭಾರತದ ಪದಕದ ಬೇಟೆಯಲ್ಲಿ ಗ್ರಾಮಿಣ ಪ್ರತಿಭೆಗಳೇ ಮುಂದು

ಮಕ್ಕಳು ಚಿಕ್ಕವರಿದ್ದಾಗ ಕಂಡಿದ್ದನ್ನೆಲ್ಲಾ ಕೇಳುತ್ತಾರೆ. ಅದ್ರಲ್ಲಿ ಯಾವುದು ಮಗುವಿಗೆ ಕೊಡಬೇಕು, ಯಾವುದು ಕೊಡಬಾರದು ಎಂಬ ಪ್ರಜ್ಞೆ ಪೋಷಕರಾದವರಿಗೆ ಇದ್ದೇ ಇರುತ್ತದೆ. ಮೊದಲೆಲ್ಲಾ ತಂದೆ ತಾಯಿ ತನ್ನ ಮಗ ಸರ್ಕಾರಿ ನೌಕರಿ ಹೊಂದಿದರೆ ಸಾಕು ಎಂದು ಹೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಏನ್ನಾನದರೂ ಮಾಡು ವಿಶೇಷವಾದನ್ನು ಮಾಡು ಎನ್ನುವ ಕಾಲ ಬಂದಿದೆ.

ವಿಶೇಷವಾದನ್ನು ಮಾಡಲು ಸಹ ಶಾರ್ಟ್‌ ಕರ್ಟ್‌ ದಾರಿ ಹಿಡಿಯಬಾರದು. ತಾವು ಹಾಕಿಕೊಂಡ ಗುರಿ ಮುಟ್ಟುವವರೆಗೂ ಹಾರ್ಡ್‌ ವರ್ಕ್‌ ಮಾಡುತ್ತಾ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇಂತಹದ್ದೇ ಯಶಸ್ಸಿನ ಗೋಪುರ ಏರಿದ ಸಾಧಕರ ಬಗ್ಗೆ ದಿ ಇಂಡಿಯನ್‌ ಎಕ್ಸಪ್ರೆಸ್‌ ಮಾಹಿತಿಯನ್ನು ಬಹಿರಂಗ ಮಾಡಿದೆ.

Poverty No Barrier to Success: Rural Talents Lead Indias Pursuit of Medals

ದಿ ಇಂಡಿಯನ್‌ ಎಕ್ಸಪ್ರೆಸ್‌ ಮಾಹಿತಿಯನ್ನು ನೋಡಿದರೆ, ಸಾಧನೆ ಮಾಡುವ ಛಲವೊಂದಿದ್ದರೆ ಸಾಧಕ ಏನನ್ನಾದರೂ ಸಾಧಿಸಬಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಮಕ್ಕಳ ಆಸೆಯನ್ನು ಈಡೇರಿಸಲು ಪಾಲಕರು ಕಷ್ಟ ಪಡುತ್ತಾರೆ. ತಮಗೆ ಎಷ್ಟೆ ಕಷ್ಟ ಆದ್ರೂ ಚಿಂತೆಯಿಲ್ಲ, ಮಕ್ಕಳು ನಗುತ್ತಾ ಇರಲಿ ಎಂಬುವ ಆಸೆ ಅವರದ್ದು. ಚಿಕ್ಕ ಅಂಗಡಿಯನ್ನು ಹಾಕಿಕೊಂಡು ಉಪಜೀವನ ನಡೆಸುವ ವ್ಯಕ್ತಿಗೆ ಮಗುವಿನ ಆಸೆ ಈಡೇರಿಸುವುದು ಕಷ್ಟ. ಆದ್ರೂ ಅದನ್ನು ಲೆಕ್ಕಿಸದೆ ಆತ ಅವಳ ಏಳಿಗಾಗಿ ಶ್ರಮಿಸುತ್ತಾನೆ.

Poverty No Barrier to Success: Rural Talents Lead Indias Pursuit of Medals

ಬಳ್ಳಾರಿಯಲ್ಲಿ ಟೀ ಸ್ಟಾಲ್‌ ನಡೆಸುವ ತಂದೆಗೆ ತನ್ನ ಮಗಳ ಆಸೆ ಈಡೇರಿಸುವುದು ಕೊಂಚ ಕಷ್ಟ. ಆದರೆ, ಕೊಡಗಿನಲ್ಲಿ ಕಾಫಿ ತೋಟವನ್ನು ಹೊಂದಿರುವ ತಂದೆಗೆ ತನ್ನ ಮಗನ ಆಸೆಯನ್ನು ಈಡೇರಿಸುವುದ ಸುಲಭ. ಈ ಎರಡೂ ಪ್ರಸಂಗಗಳು ಬೇರೆ ಆದರೂ ಸಹ ಇಬ್ಬರೂ ತಂದೆಯಂದಿರ ಗುರಿ ಒಂದೆ ಆಗಿದೆ. ದಿ ಇಂಡಿಯನ್‌ ಎಕ್ಸಪ್ರೆಸ್‌ ವರದಿಯ ಪ್ರಕಾರ ಭಾರತದ ಪರ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಪದಕವನ್ನು ಬಾಚಿಕೊಂಡ ಕ್ರೀಡಾ ಪಟುಗಳ ಕುಟುಂಬ ವರ್ಷಕ್ಕೆ 5 ಲಕ್ಷಕ್ಕಿಂತಲೂ ಕಡಿಮೆ ಇರುವುದಾಗಿ ತಿಳಿದು ಬರುತ್ತದೆ.

ಹಾಕಿ ಫರ್ವಡ್ ಆಟಗಾರನ ತಂದೆ ವಾರಣಾಸಿಯಲ್ಲಿ ಚಿಕ್ಕ ಸಿರೇ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಚೆನ್ನೈ ಮೂಲದ ಟೆನಿಸ್ ಆಟಗಾರ್ತಿಯ ತಂದೆ ಉದ್ಯಮಿ.. ಹೀಗೆ ಹುಡುಕುತ್ತಾ ಹೋದರೆ, ಭಾರತದಲ್ಲಿ ಇಂತಹ ಹಲವು ಕಥೆಗಳು ನಮ್ಮ ಕಣ್ಣಮುಂದೆ ಬರುತ್ತವೆ.

Poverty No Barrier to Success: Rural Talents Lead Indias Pursuit of Medals

ಈ ಅಥ್ಲೀಟ್‌ಗಳು ಬೇರೆ ಬೇರೆ ಪ್ರಪಂಚಗಳಲ್ಲಿ ಬೆಳೆದರು ಮತ್ತು ಅವರ ಗುರಿ ಒಂದೇ. ಅವರ ಮಾರ್ಗಗಳು ಎಂದಿಗೂ ಬದಲಾಗಲಿಲ್ಲ. ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ, ಅವರು ಭಾರತಕ್ಕೆ ದಾಖಲೆಯ 107 ಪದಕಗಳನ್ನು ಪಡೆಯಲು ವೇದಿಕೆಯತ್ತ ಹೆಜ್ಜೆ ಹಾಕಿದರು: 58 ವ್ಯಕ್ತಿಗಳು ಮತ್ತು 49 ತಂಡದ ಫಲವಾಗಿ ಭಾರತ ಈ ಸಾಧನೆ ಮಾಡಿದೆ.

ಈ ಗೇಮ್ಸ್‌ ಮುಗಿಯುತ್ತಿದ್ದಂತೆ ಪದಕ ವಿಜೆತ ಕ್ರೀಡಾ ಪಟುಗಳ ಇತಿಹಾಸವನ್ನು ಅರಿಯುವ ಆಸೆಯಿಂದ ಸಮೀಕ್ಷೆ ನಡೆಸಲಾಯಿತು. ಇದರಿಂದ ಭಾರತದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಕ್ರೀಡಾ ಪರಿಸರದ ವ್ಯವಸ್ಥೆಯ ವೃದ್ಧಿ ತೋರಿಸುತ್ತದೆ.

- ಪದಕ ವಿಜೇತರಲ್ಲಿ ಸ್ತ್ರೀ-ಪುರುಷ ಶೇಕಡಾವಾರು ಅನುಪಾತವು 43:57 ಆಗಿದೆ. ಇದು ಕ್ರೀಡಾ ಯಶಸ್ಸಿನಲ್ಲಿ ಕಡಿಮೆ ಆಗುತ್ತಿರುವ ಲಿಂಗ ಅಂತರವನ್ನು ಸೂಚಿಸುತ್ತದೆ. ಎರಡು ದಶಕಗಳ ಹಿಂದೆ, ಈ ಅನುಪಾತವು ಸರಿಸುಮಾರು 36:64 ಆಗಿತ್ತು ಮತ್ತು 2018 ರ ಆವೃತ್ತಿಯಲ್ಲಿ ಇದು ಸರಿಸುಮಾರು 40:60 ರಷ್ಟಿತ್ತು.

Poverty No Barrier to Success: Rural Talents Lead Indias Pursuit of Medals

- ಏಷ್ಯನ್ ಗೇಮ್ಸ್‌ನಲ್ಲಿ ಪದಕ ಬಾಚಿಕೊಂಡ ಕ್ರೀಡಾ ಪಟುಗಳಲ್ಲಿ ಹೆಚ್ಚಿನವರು ಗ್ರಾಮಿಣ ಭಾಗದವರು. ಪದಕ ವಿಜೇತರಲ್ಲಿ ಮೂರನೇ ಒಂದು ಭಾಗದಷ್ಟು ಗ್ರಾಮೀಣ ಪ್ರದೇಶದ ಪ್ರತಿಭೆಗಳು.

- ಮಕ್ಕಳ ಆಸೆಯನ್ನು ಈಡೇರಿಸಲು ಪೋಷಕರು ಮಾಡಿದ ತ್ಯಾಗ ಪೋಡಿಯಂನಲ್ಲಿ ಎದ್ದು ಕಾಣುತ್ತಿತ್ತು. ಏಷ್ಯನ್ ಗೇಮ್ಸ್‌ನಲ್ಲಿ 40ಕ್ಕೂ ಹೆಚ್ಚು ಪದಕ ವಿಜೇತ ಕ್ರೀಡಾ ಪಟುಗಳ ಆರ್ಥಿಕ ಸ್ಥಿತಿ ಶೋಚನಿಯ.

- ಕ್ರೀಡೆಯಲ್ಲಿ ವಿಶೇವಾದ ಸಾಧನೆ ಮಾಡಿದರೆ ಉತ್ತಮ ಭವಿಷ್ಯ ಇದೆ ಎಂಬುದನ್ನು ನಂಬಿ ಬಂದವರೇ ಹೆಚ್ಚು. ಕಳೆದ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ವಿಜೇತ 50 ಕ್ರೀಡಾ ಪಟುಗಳ ವಾರ್ಷಿಕ ಆದಾಯ 50 ಸಾವಿರ ಆಗಿದೆ.

- ಇನ್ನು ಸರ್ಕಾರಿ ನೌಕರಿ ಹಾಗೂ ಸ್ಥಿರ ಉದ್ಯೋಗವನ್ನು ಹೊಂದಿದ ಪೋಷಕರ ಮಕ್ಕಳ ಸಂಖ್ಯೆ 33. ಮೊದಲು ಈ ವರ್ಗವು ಕ್ರೀಡೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಇಷ್ಟಪಡುತ್ತಿರಲಿಲ್ಲ.

- ಏಷ್ಯಾನ್‌ ಗೇಮ್ಸ್‌ನಲ್ಲಿ ಪದಕ ಪಡೆದ 62 ಕ್ರೀಡಾ ಪಟುಗಳ ಕುಟುಂಬ ಕೃಷಿ ನಂಬಿಕೊಂಡಿದ್ದರೆ. 44 ಪದಕಗಳನ್ನು ಪಡೆದ ಕ್ರೀಡಾ ಪಟುಗಳ ಕುಟುಂಬಗಳು ತಮ್ಮ ಸ್ವಂತ ವ್ಯವಹಾರವನ್ನು ಹೊಂದಿವೆ.

- ಈ ಕ್ರೀಡಾಪಟುಗಳು ಆರಂಭಿಕ ಪ್ರತಿಭೆಯನ್ನು ಗುರುತಿಸಿರುವುದು ಮೂಲಭೂತ ಖಾಸಗಿ ಅಕಾಡೆಮಿಗಳಲ್ಲಿ ಉದ್ಯಮಶೀಲ ತರಬೇತುದಾರಾರು ಮಾಡಿದ್ದಾರೆ.

- ಹೆಚ್ಚಿನ ಕ್ರೀಡಾಪಟುಗಳು ತಮ್ಮ ಕ್ರೀಡಾ ಮತ್ತು ಶಿಕ್ಷಣ ವೃತ್ತಿ ಸಮತೋಲನಗೊಳಿಸಿದ್ದಾರೆ. 232 ಕ್ರೀಡಾಪಟುಗಳಲ್ಲಿ 20 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 135 ಮಂದಿ ಕಾಲೇಜು ಪದವೀಧರರಾಗಿದ್ದರೆ. 21 ಮಂದಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ವಿಪರ್ಯಾಸವೆಂದರೆ, ಕನಿಷ್ಠ 55 ಪದವೀಧರ-ಕ್ರೀಡಾಪಟುಗಳ ಪೋಷಕರು ಪಿಯುಸಿಯನ್ನು ಸಹ ಮುಗಿಸಿಲ್ಲ.

- ದೇಶದಲ್ಲಿ ಈಗ ಕ್ರಿಕೆಟ್‌ ಹೊರತು ಪಡಿಸಿ ಬೇರೆ ಕ್ರೀಡೆಗಳಿಗೂ ಒತ್ತು ಸಿಗುತ್ತಿದೆ. ಆದರೆ ಈ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ, ಸಂಘ ಸಂಸ್ಥೆಗಳು ಕೆಲಸ ಮಾಡಬೇಕಿವೆ.

- ಪದಕ ವಿಜೇತ ಕ್ರೀಡಾ ಪಟುಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು ಜನರಿಗೆ ಮಾತ್ರ ಕೆಲಸ ಸಿಕ್ಕಿದೆ. ಕೇವಲ 13 ಕ್ರೀಡಾಪಟುಗಳು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗವನ್ನು ಕಂಡುಕೊಳ್ಳುತ್ತಾರೆ.

Story first published: Wednesday, January 3, 2024, 12:51 [IST]
Other articles published on Jan 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+