Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಮನು ಭಾಕರ್, ಶ್ರೀಜೇಶ್‌ ಧ್ವಜಧಾರಿಗಳು

ಪ್ಯಾರಿಸ್‌ ಒಲಿಂಪಿಕ್ಸ್‌ ಮುಕ್ತಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ಮೆಡ್ಲಿ ಈವೆಂಟ್‌ಗಳು ನಡೆಯುವುದು ಬಾಕಿ ಇದೆ. ಭಾರತದ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಚೇತೋಹಾರಿ ಪ್ರದರ್ಶನ ನೀಡಿದೆ. ಆದರೆ ಟೊಕಿಯೋ ಒಲಿಂಪಿಕ್ಸ್ ಸಾಧನೆಯನ್ನು ಮೀರಲು ಸಾಧ್ಯವಾಗಿಲ್ಲ. ಈಗ ಪ್ಯಾರಿಸ್‌ನಲ್ಲಿ ಮುಕ್ತಾಯ ಸಮಾರಂಭಕ್ಕೆ ಭರದ ಸಿದ್ಧತೆಗಳು ನಡೆದಿವೆ.

ಒಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಭಾಗವಹಿಸುವುದೇ ಕ್ರೀಡಾ ಪಟುಗಳ ಪಾಲಿಗೆ ದೊಡ್ಡ ಸಾಧನೆ. ಅದರಲ್ಲೂ ಪದಕದ ಬೇಟೆ ನಡೆಸಿದರೆ, ಅದಕ್ಕಿಂತ ದೊಡ್ಡ ಯಶಸ್ಸು ಬೇರೆಯದ್ದು ಇರಲು ಸಾಧ್ಯವೇ ಇಲ್ಲ. ಈ ಬಾರಿಯೂ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕದ ಸಾಧನೆ ಮಾಡಿದ ಭಾರತದ ಇಬ್ಬರು ಅಥ್ಲೀಟ್‌ಗಳು ಮುಕ್ತಾಯ ಸಮಾರಂಭದಲ್ಲಿ ಭಾರತ ದಳವನ್ನು ಮುನ್ನಡೆಸಲಿದ್ದಾರೆ.

PR Sreejesh and Manu Bhaker to Lead India as Flag Bearers at Paris Olympics 2024 Closing Ceremony

ಆಗಸ್ಟ್ 11 ರಂದು ಸಮಾರೋಪ

ಪ್ಯಾರಿಸ್ ಒಲಿಂಪಿಕ್ಸ್ 2024 ಸಮಾರೋಪ ಸಮಾರಂಭವು ಆಗಸ್ಟ್ 11 ರಂದು ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಹಾಕಿ ತಂಡದ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಹಾಗೂ ಶೂಟಿಂಗ್‌ನಲ್ಲಿ ಎರಡು ಕಂಚಿನ ಪದಕದ ಸಾಧನೆ ಮಾಡಿರುವ ಮನು ಭಾಕರ್‌ ಭಾರತದ ಪರ ಧ್ವಜಧಾರಿ ಜವಾಬ್ದಾರಿ ಹೊತ್ತು ಕೊಳ್ಳಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪಿವಿ ಸಿಂಧು, ಶರತ್ ಕಮಲ್ ಧ್ವಜಧಾರಿಗಳಾಗಿ ಕಾಣಿಸಿಕೊಂಡಿದ್ದರು.

ಶ್ರೀಜೇಶ್‌ಗೆ ಗೌರವ

ಭಾರತದ ಸ್ಟಾರ್ ಗೋಲ್‌ ಕೀಪರ್ ಪಿಆರ್ ಶ್ರೀಜೇಶ್‌ ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿವೃತ್ತಿ ಟೂರ್ನಿಯಲ್ಲಿ ಕಂಚಿನ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಸಮಾರೋಪದಲ್ಲಿ ಶ್ರೀಜೇಶ್ ಹಾಗೂ ಮನು ಧ್ವಜಧಾರಿಗಳಾಗಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಅಧ್ಯಕ್ಷೆ ಪಿಟಿ ಉಷಾ ಘೋಷಿಸಿದರು.

ಸಮಾರೋಪ ಸಮಾರಂಭದಲ್ಲಿ ಪಿ ಆರ್‌ ಶ್ರೀಜೇಶ್‌ ಅವರು ಧ್ವಜಧಾರಿಯಾಗಿ ಆಯ್ಕೆ ಆಗಿದ್ದನ್ನು ಕೇಳಿಯೇ ಗೋಲ್ ಕೀಪರ್ ಭಾವುಕರಾದರು ಎಂದು ಪಿಟಿ ಉಷಾ ತಿಳಿಸಿದರು. ಪ್ರಸಕ್ತ ಒಲಿಂಪಿಕ್ಸ್‌ನ ಜಾವೆಲಿನ್‌ ಥ್ರೋದಲ್ಲಿ ಬೆಳ್ಳಿ ಸಾಧನೆ ಮಾಡಿದ್ದ ನೀರಜ್‌ ಚೋಪ್ರಾ ಅವರೇ ಶ್ರೀಜೇಶ್‌ ಅವರಿಗೆ ಈ ಗೌರವ ನೀಡುವಂತೆ ಮನವಿ ಮಾಡಿದರು.

ಮನು ಸಾಧನೆ

ಮನು ಭಾಕರ್‌ ಶೂಟಿಂಗ್‌ನಲ್ಲಿ ಅಭೂತ್‌ ಪೂರ್ವ ಸಾಧನೆ ಮಾಡಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಸ್ವಾತಂತ್ರ್ಯ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಮನು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರೆ, 10 ಮೀಟರ್ ಮಿಶ್ರ ಪಿಸ್ತೂಲ್ ಸ್ಪರ್ಧೆಯಲ್ಲಿ ಎರಡನೇ ಕಂಚಿನ ಪದಕ ಗೆದಿದ್ದರು.

ಶ್ರೀಜೇಶ್‌ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಭಾರತ ಈ ಬಾರಿ ಕಂಚಿನ ಪದಕ ಗೆಲ್ಲುವಲ್ಲಿ ಶ್ರೀಜೇಶ್ ಅವರ ಪಾತ್ರ ಬಹಳ ಮುಖ್ಯವಾಗಿದೆ.

Story first published: Friday, August 9, 2024, 18:20 [IST]
Other articles published on Aug 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+