For Quick Alerts
ALLOW NOTIFICATIONS  
For Daily Alerts

Chess: ಚೀನಾ ಆಟಗಾರನ ವಿರುದ್ಧ ಸೊಗಸಾದ ಆಟವಾಡಿದ ಪ್ರಗ್ನಾನಂದ್

ಭಾರತದ ಸ್ಟಾರ್ ಚೆಸ್ ಆಟಗಾರ ಆರ್ ಪ್ರಗ್ನಾನಂದ್ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್‌ನಲ್ಲಿ ಚೀನಾದ ಪ್ರಸ್ತುತ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿದರು.

ಮಂಗಳವಾರ (ಜನವರಿ 16) ರಾತ್ರಿ ನಡೆದ ಈ ಟೂರ್ನಿಯಲ್ಲಿ ಆರ್ ಪ್ರಗ್ನಾನಂದ ಅದ್ಭುತ ಗೆಲುವು ದಾಖಲಿಸಿದರು. ಈ ಗೆಲುವಿನೊಂದಿಗೆ ಆರ್ ಪ್ರಜ್ಞಾಾನಂದ ಅವರು FIDE ರೇಟಿಂಗ್‌ನಲ್ಲಿ 2743 ರೇಟಿಂಗ್‌ಗೆ ತಲುಪಿದ್ದಾರೆ.

Pragnanand played a great game against the Chinese player

ಸಚಿನ್ ತೆಂಡೂಲ್ಕರ್ ಕೂಡ ಪ್ರಗ್ನಾನಂದ ವಿಜಯದ ಬಗ್ಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಖಾತೆಯಿಂದ ಅವರನ್ನು ಸಚಿನ್ ಶ್ಲಾಘಿಸಿದ್ದಾರೆ. "ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ವಿರುದ್ಧದ ಈ ಗೆಲುವಿಗೆ ಅನೇಕ ಅಭಿನಂದನೆಗಳು. 18ನೇ ವಯಸ್ಸಿನಲ್ಲಿ, ನೀವು ಆಟದಲ್ಲಿ ಪ್ರಾಬಲ್ಯ ಸಾಧಿಸಿದ್ದಲ್ಲದೆ ಭಾರತದ ಅಗ್ರ ಶ್ರೇಯಾಂಕದ ಆಟಗಾರರಾಗಿದ್ದಾರೆ. ನಿಮ್ಮ ಮುಂಬರುವ ಸವಾಲುಗಳಿಗೆ ಶುಭಾಶಯಗಳು. ಚೆಸ್‌ನಲ್ಲಿ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿ" ಎಂದು ಬರೆದು ಕೊಂಡಿದ್ದಾರೆ.

ಪ್ರಗ್ನಾನಂದ ಕಳೆದ ವರ್ಷ ಕೇವಲ 18ನೇ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದರು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಎದುರು ಸೋತರು. ಆದರೆ ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರತ್ತ ತಮ್ಮ ಚಿತ್ತ ಕದ್ದರು. 2023 ರ ಚೆಸ್ ವಿಶ್ವಕಪ್ ವಿಜೇತ ಕಾರ್ಲ್ಸೆನ್ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದರು.

ಭಾರತದ ಕಿರಿಯ ಗ್ರ್ಯಾಂಡ್ ಮಾಸ್ಟರ್

ಪ್ರಗ್ನಾನಂದರು 5 ನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದರು. 2018 ರಲ್ಲಿ, 12 ನೇ ವಯಸ್ಸಿನಲ್ಲಿ, ಪ್ರಗ್ನಾನಂದ ಅವರು ಭಾರತದ ಕಿರಿಯ ವಯಸ್ಸಿನ ಗ್ರ್ಯಾಂಡ್ ಮಾಸ್ಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ವಿಶ್ವದಲ್ಲಿ ಚಿಕ್ಕವಯಸ್ಸಿನಲ್ಲಿ ಈ ಸಾಧನೆ ಮಾಡಿದ ಎರಡನೇ ಚೆಸ್ ಪಟು ಎಂಬ ಕೀರ್ತಿ ತನ್ನದಾಗಿಸಿಕೊಂಡರು. ಪ್ರಗ್ನಾನಂದರ ಸಹೋದರ ವೈಶಾಲಿ ಸಹ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ. ಈ ಮೂಲಕ ಗ್ರ್ಯಾಂಡ್‌ ಮಾಸ್ಟರ್‌ ಬಿರುದು ಪಡೆದ ವಿಶ್ವದ ಮೊದಲ ಸಹೋದರ ಸಹೋದರಿ ಎಂಬ ಕೀರ್ತಿ ಇವರದ್ದಾಗಿದೆ.

ಪ್ರಗ್ನಾನಂದ್ ಈ ಮೈಲಿಗಲ್ಲು ತಲುಪುವಲ್ಲಿ ಅವರ ತಾಯಿ ನಾಗಲಕ್ಷ್ಮಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಗ್ನಾನಂದ್ ತಾಯಿ ಯಾವಾಗಲೂ ಅವನೊಂದಿಗೆ ಪ್ರವಾಸ ಬೆಳೆಸುತ್ತಾಳೆ. ಪ್ರಗ್ನಾನಂದ್ ಅವರು ವಿದೇಶ ಪ್ರವಾಸದಲ್ಲಿ ತಾಯಿ ಬೇಯಿಸಿದ ಆಹಾರವನ್ನು ತಿನ್ನುತ್ತಾರೆ.

Story first published: Wednesday, January 17, 2024, 19:29 [IST]
Other articles published on Jan 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+