ಪ್ರಮೋದ್ ಸೇರಿ ನಾಲ್ವರು ಪ್ಯಾರಾ ಅಥ್ಲೀಟ್‌ಗಳು ಖೇಲ್ ರತ್ನಕ್ಕೆ ಶಿಫಾರಸು

ನವದೆಹಲಿ: ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ (ಪಿಸಿಐ) ನಾಲ್ವರು ಪ್ಯಾರಾ ಅಥ್ಲೀಟ್‌ಗಳನ್ನು ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನಾ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಶೂಟರ್ ಮನೀಶ್ ನರ್ವಾಲ್, ಹೈ ಜಂಪರ್ ಶರತ್ ಕುಮಾರ್, ಶಟ್ಲರ್ ಪ್ರಮೋದ್ ಭಗತ್, ಜಾವೆಲಿನ್ ಥ್ರೋವರ್ ಸುಂದರ್ ಸಿಂಗ್ ಗುರ್ಜರ್ ಹೆಸರುಗಳು ಮೇಜರ್ ಧ್ಯಾನ್ ಚಂದ್ ಪ್ರಶಸ್ತಿಗೆ ಶಿಫಾರಸಾಗಿದೆ.
ಈ ನಾಲ್ವರೂ ಕೂಡ ಇತ್ತೀಚೆಗಷ್ಟೇ ಮುಕ್ತಾಯವಾಗಿರುವ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕಗಳ ಮೆರಗು ತಂದಿದ್ದರು. ಅಥ್ಲೀಟ್‌ಗಳಿಗೆ ಪ್ರಶಸ್ತಿ ನೀಡಿದರೆ ಮುಂಬರಲಿರುವ 2024ರ ಪ್ಯಾರಿಸ್ ಗೇಮ್ಸ್‌ಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಪಿಸಿಐ ಅಧ್ಯಕ್ಷೆ ದೀಪಾ ಮಲಿಕ್ ಹೇಳಿದ್ದಾರೆ.
"ನಮ್ಮ ಅಥ್ಲೀಟ್‌ಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನಮಗೆ ಅವರ ಬಗ್ಗೆ ಹೆಮ್ಮೆಯಿದೆ. ಇಂಥ ಪ್ರಶಸ್ತಿಗಳು ಅವರನ್ನು ಮುಂಬರಲಿರುವ ಗೇಮ್ಸ್‌ಗೆ ಹೆಚ್ಚು ಪ್ರೇರೇಪಿಸುತ್ತವೆ. ದೇಶ ಹೆಮ್ಮೆ ಪಡುವಂತೆ ಮಾಡಿರುವುದರಿಂದ ಇವರೆಲ್ಲರೂ ಆ ಪ್ರಶಸ್ತಿಗೆ ಅರ್ಹರು," ಎಂದು ದೀಪಾ ಮಲಿಕ್ ಹೇಳಿದ್ದಾರೆ.
"ಪ್ಯಾರಾ ಜಾವೆಲಿನ್ ಥ್ರೋವರ್ ಸುಮಿತ್ ಅಂತಿಮ್ ಮತ್ತು ಶೂಟರ್ ಅವನಿ ಲೇಖರ ಅವರ ಹೆಸರುಗಳು ಈ ಬಾರಿ ಅರ್ಜುನ ಪ್ರಶಸ್ತಿಗೆ ಶಿಫಾರಸಾಗಿದೆ. ಇಬ್ಬರೂ ಕೂಡ ತಮ್ಮ ಪದಕಗಳ ಮೂಲಕ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ," ಎಂದು ಎಎನ್‌ಐ ಜೊತೆ ದೀಪಾ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications