ಟೇಕ್ವಾಂಡೋ ಇಂಟರ್ನ್ಯಾಷನಲ್ ಚಾಂಪಿಯನ್ಶಿಪ್; ಹರೀಶ್‌ಗೆ ಚಿನ್ನ

ಬ್ಯಾಂಕಾಕ್, ಅಕ್ಟೋಬರ್ 29: ಥೈಲ್ಯಾಂಡ್ನ ಬ್ಯಾಂಕಾಕ್‌ನಲ್ಲಿ ನಡೆದ 9ನೇ ತಿರಕ್ ಟೇಕ್ವಾಂಡೋ ಇಂಟರ್ನ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಬಂಗಾರ ಲಭಿಸಿದೆ. ಕನ್ನಡಿಗ, ಹರೀಶ್ ಸೆಲ್ವರಾಜು 80 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಇನ್ನು 27 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಗ್ರೀನ್ ಬೆಲ್ಟ್ ಹೋಲ್ಡರ್ ಪ್ರತ್ಯುಷ್ ರಂಗನಾಥ್ ಅವರು 3ನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈ ವಿಭಾಗದ ಚಿನ್ನ ಥೈಲ್ಯಾಂಡ್ ಪಾಲಾದರೆ, ಬೆಳ್ಳಿ ಪದಕವನ್ನು ಚೀನಾ ಪಡೆದುಕೊಂಡಿತು.

ಪ್ರತ್ಯುಷ್ ರಂಗನಾಥ್ ಕಳೆದ 1.8 ವರ್ಷಗಳಿಂದ ಮಲ್ಲೇಶ್ವರಂನ ನಕ್ಷತ್ರ ಅಕಾಡೆಮಿಯಲ್ಲಿ ನವೀನ್ ಕುಮಾರ್ ಅವರ ಅಡಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಆಗಸ್ಟ್ನಲ್ಲಿ ನಡೆದ ರಾಜ್ಯ ಮಟ್ಟದ ಸಬ್ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಪ್ರತ್ಯುಷ್‌ಗೆ ಚಿನ್ನದ ಪದಕ ದೊರೆತಿತ್ತು.
Story first published: Tuesday, October 29, 2019, 22:12 [IST]
Other articles published on Oct 29, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications