PR Sreejesh: ಭಾರತದ ಗೋಲ್ ಕೀಪರ್ ಶ್ರೀಜೇಶ್ ಹೆಗಲಿಗೆ ಹೊಸ ಜವಾಬ್ದಾರಿ ನೀಡಿದ ಪ್ರಧಾನಿ ಮೋದಿ
ಭಾರತ ಹಾಕಿ ತನ್ನ ಗತ ವೈಭವವನ್ನು ಮರುಕಳಿಸಲು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಸ್ಟಾರ್ ಗೋಲ್ ಕೀಪರ್ ಅವರ ಕೊಡುಗೆ ಸಹ ಅಪಾರ. ಇವರನ್ನು ಭಾರತದ ಹಾಕಿ ಕ್ರೀಡಾ ಅಭಿಮಾನಿಗಳು ದಿ ವಾಲ್ ಎಂದೇ ಕರೆಯುತ್ತಾರೆ. ಗೋಲು ಪೆಟ್ಟಿಗೆಯ ಮುಂದೆ ಇನ್ನು ಇವರು ಕಾಣಿಸಿಕೊಳ್ಳುವುದಿಲ್ಲ. ಆದರೆ ಇವರ ಹೆಗಲಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಹೊಸ ಜವಾಬ್ದಾರಿಯನ್ನು ನೀಡಿದ್ದಾರೆ.
ಪ್ಯಾರಿಸ್ ಒಲಿಂಪಕ್ಸ್ ಕ್ರೀಡಾ ಕೂಟದಲ್ಲಿ ಭಾರತದ ಪುರುಷರ ಹಾಕಿ ತಂಡ ಅಮೋಘ ಸಾಧನೆ ಮಾಡಿದೆ. ಈ ಮೂಲಕ ಹರ್ಮನ್ ಪ್ರೀತ್ ಸಿಂಗ್ ಪಡೆ ಇತಿಹಾಸ ನಿರ್ಮಿಸಿದೆ. 52 ವರ್ಷಗಳ ಬಳಿಕ ಭಾರತ ತಂಡ ಒಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಪದಕಗಳನ್ನು ಬ್ಯಾಕ್ ಟು ಬ್ಯಾಕ್ ಗೆದ್ದಿದೆ. ಈ ಸ್ಮರಣೀಯ ಸಮಯವನ್ನು ಇನ್ನು ಅವಿಸ್ಮರಣೀಯವಾಗಿಸಲು, ಪ್ರಧಾನಿ ನರೇಂದ್ರ ಮೋದಿ ಟೀಮ್ ಇಂಡಿಯಾ ಹಾಕಿ ತಂಡದ ಆಟಗಾರರೊಂದಿಗೆ ಫೋನ್ ಮಾಡಿ ಮಾತನಾಡಿದರು.

ಭಾರತಕ್ಕೆ ನಾಲ್ಕನೇ ಕಂಚು
ಸ್ಪೇನ್ ವಿರುದ್ಧ ನಡೆದ ಕಂಚಿನ ಪದಕದ ಹೋರಾಟದಲ್ಲಿ ಭಾರತದ ಕ್ಲಾಸ್ ಆಟದ ಪರಿಣಾಮ ಸತತ ಎರಡನೇ ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಇದು ತನ್ನ ಅಂತಾರಾಷ್ಟ್ರೀಯ ಹಾಕಿ ವೃತ್ತಿ ಜೀವನದ ಕೊನೆಯ ಟೂರ್ನಿ ಎಂದು ತಿಳಿಸಿದ್ದ ಪಿಆರ್ ಶ್ರೀಜೇಶ್ ಅವರಿಗೆ ತಂಡ ಪದಕದೊಂದಿಗೆ ಬಿಳ್ಕೊಟ್ಟಿದೆ.
ಶ್ರೀಜೇಶ್ ಹೆಗಲಿಗೆ ಹೊಸ ಜವಾಬ್ದಾರಿ
ಕಂಚಿನ ಪದಕ ವಿಜೇತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಾಲ್ ಮಾಡಿ ಅಭಿನಂದಿಸಿದರು. ಅಲ್ಲದೆ ಈ ವೇಳೆ ಭಾರತದ ಸ್ಟಾರ್ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಅವರೊಂದಿಗೂ ಸಹ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ನೀವು ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದೀರಿ. ನಿಮ್ಮ ಸಾಧನೆ ಅಮೋಘ ಎಂದು ಬಣ್ಣಿಸಿದರು. ಅಲ್ಲದೆ ಪಿಆರ್ ಶ್ರೀಜೇಶ್ ಅವರ ಮೇಲೆ ಪ್ರಧಾನಿ ಒಂದು ಹೊಸ ಜವಾಬ್ದಾರಿಯನ್ನು ಹೇರಿದರು.
ನೀವು ನಿವೃತ್ತಿಯನ್ನು ಪಡೆಯುತ್ತಿದ್ದೀರಿ ಎಂಬುದು ತಿಳಿಯಿತು. ಭವಿಷ್ಯದ ತಂಡವನ್ನು ಕಟ್ಟುವ ಮಹತ್ವದ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ಪ್ರಧಾನಿ ತಿಳಿಸಿದರು.

ತಂಡದೊಂದಿಗೆ ಶ್ರೀಜೇಶ್?
ವರದಿಗಳ ಪ್ರಕಾರ ಪಿಆರ್ ಶ್ರೀಜೇಶ್ ಅವರು ನಿವೃತ್ತಿ ಘೋಷಿಸಿದರೂ ಸಹ ಟೀಮ್ ಇಂಡಿಯಾದೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಾಧಕನ ಸಾಧನೆ
ಒಲಿಂಪಿಕ್ಸ್ ಹಾಕಿ ಟೂರ್ನಿಯಲ್ಲಿ ಪಿಆರ್ ಶ್ರೀಜೇಶ್ ಅವರು ಅದ್ಭುತ್ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದಾರೆ. ಇವರು ಗೋಲು ಪೆಟ್ಟಿಗೆಯ ಮುಂದೆ ನಿಂತರೆ, ಯಾವುದೇ ಸ್ಟ್ರೈಕರ್‌ಗೆ ಚೆಂಡನ್ನು ಗೋಲು ಪೆಟ್ಟಿಗೆಯ ಒಳಗೆ ನೂಕುವುದು ಸಾಹಸದ ಕೆಲಸವೇ ಆಗಿರುತ್ತದೆ. 300 ಕ್ಕೂ ಹೆಚ್ಚು ಪಂದ್ಯಗಳಲ್ಲಿ ಶ್ರೀಜೇಶ್ ಭಾರತದ ಪರ ಅಖಾಡಕ್ಕೆ ಇಳಿದಿದ್ದಾರೆ. ಅಲ್ಲದೆ ಅದೆಷ್ಟೋ ಗೆಲುವಿನಲ್ಲಿ ಹೀರೋ ರೀತಿ ಮಿಂಚಿದ್ದಾರೆ.
ಭಾರತದ ಸ್ಟಾರ್ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಎರಡು ಏಷ್ಯನ್ ಗೇಮ್ ಹಾಗ ಎರಡು ಒಲಿಂಪಿಕ್ಸ್ ಪದಕವನ್ನು ಹೊಂದಿರುವ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications