Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಬೆಳ್ಳಿ ಗೆದ್ದ ನೀರಜ್‌ ಚೋಪ್ರಾಗೆ ಫೋನ್‌ ಕರೆ ಮಾಡಿದ ಪ್ರಧಾನಿ ಮೋದಿ

ಆಗಸ್ಟ್ 9 ಶುಕ್ರವಾರ, ಭಾರತ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ಯಾರಿಸ್‌ನಲ್ಲಿ ಬೆಳ್ಳಿ ಪದಕಗಳ ಗೆದ್ದ ನಂತರ ಇಡೀ ದೇಶವೇ ಸಂಭ್ರಮಾಚರಣೆಯಲ್ಲಿದೆ. ನೀರಜ್ ಚೋಪ್ರಾ ಮತ್ತು ಭಾರತೀಯರು ಚಿನ್ನದ ಪದಕದ ನಿರೀಕ್ಷೆಯಲ್ಲಿದರು.

ಆದರೆ ನೀರಜ್ ಎರಡನೇ ಪ್ರಯತ್ನದಲ್ಲಿ 89.45 ಮೀಟರ್‌ ದೂರ ಎಸೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅವರ ಅತ್ಯುತ್ತಮ ಪ್ರದರ್ಶನದ ನಡುವೆ ಕೂಡ ಬಂಗಾರ ದಕ್ಕಲಿಲ್ಲ. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ನೀರಜ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅಭಿನಂದಿಸಿದ್ದಾರೆ. ಈ ಹಿಂದೆ, ಪ್ರಧಾನಿ ಕೂಡ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅವರನ್ನು ಹೊಗಳಿದ್ದರು.

Prime Minister Narendra Modi made phone call to Neeraj Chopra

ಬೆಳ್ಳಿ ಪದಕ ಗೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ನೀರಜ್ ಚೋಪ್ರಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ . ಈ ವೇಳೆ ಅವರನ್ನು ಅಭಿನಂದಿಸಿದ ಮೋದಿ ನೀರಜ್ ಗಾಯದ ಬಗ್ಗೆ ಮಾಹಿತಿ ಪಡೆದು ತಾಯಿಯ ಕ್ರೀಡಾ ಸ್ಪೂರ್ತಿಯನ್ನು ಶ್ಲಾಘಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ನೀರಜ್ ಅವರನ್ನು ಗುಣಗಾನ ಮಾಡಿದ್ದಾರೆ. 'ನೀರಜ್ ತಮ್ಮ ಪ್ರತಿಭೆಯನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ಅವರು ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ಯಶಸ್ವಿಯಾಗಿರುವುದು ಭಾರತಕ್ಕೆ ಸಂತಸ ತಂದಿದೆ. ಬೆಳ್ಳಿ ಪದಕ ಗೆದ್ದಿರುವ ಅವರಿಗೆ ಅಭಿನಂದನೆಗಳು.

ತಮ್ಮ ಕನಸುಗಳನ್ನು ನನಸಾಗಿಸಲು ಮತ್ತು ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಲು ಮುಂಬರುವ ಅಸಂಖ್ಯಾತ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸಲಿದ್ದಾರೆ' ಎಂದು ಮೋದಿ ಬರೆದುಕೊಂಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಫೈನಲ್ ಸ್ಪರ್ಧೆಯಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ಎಸೆದು ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ . ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

Story first published: Friday, August 9, 2024, 17:47 [IST]
Other articles published on Aug 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+