Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮದುವೆಯಾಗಿದ್ದಾರಾ ಪೃಥ್ವಿ ಶಾ?: ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ತಕ್ಷಣ ಡಿಲೀಟ್!

Prithvi Shaw Shared An Instagram Post With Nidhi Tapadia And Immediately Deleted The Post

ಪ್ರೇಮಿಗಳ ದಿನಾಚರಣೆಯಂದು ಭಾರತದ ಯುವ ಕ್ರಿಕೆಟಿಗ ಪೃಥ್ವಿ ಶಾ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹುಡುಗಿಯೊಂದಿನ ರೊಮ್ಯಾಂಟಿಕ್ ಚಿತ್ರವನ್ನು ಹಂಚಿಕೊಂಡಿದ್ದಲ್ಲದೆ 'ಹ್ಯಾಪಿ ವ್ಯಾಲೆಂಟೈನ್ಸ್‌ ಡೇ ವೈಫಿ' ಎಂದು ಹಾಕಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಆದರೆ, ಫೋಟೋ ಅಪ್‌ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ. ಯಾರೋ ಅದನ್ನು ಎಡಿಟ್ ಮಾಡಿ ನನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿದ್ದಾರೆ. ಅದನ್ನು ಹಾಕಿರುವುದು ನಾನಲ್ಲ, ಆ ಪೋಸ್ಟ್‌ಗೆ ಹೆಚ್ಚಿನ ಮಹತ್ವ ನೀಡಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ಪೃಥ್ವಿ ಶಾ ಮೊದಲು ಪೋಸ್ಟ್ ಮಾಡಿದ್ದ ಚಿತ್ರ ಈಗ ಸಖತ್ ವೈರಲ್ ಆಗಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಪೃಥ್ವಿ ಶಾ ಯಾರಿಗೂ ಹೇಳದೆ ಮದುವೆಯಾಗಿದ್ದಾರಾ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪೃಥ್ವಿ ಶಾ ಜೊತೆ ಇರುವ ಮಹಿಳೆಯ ಹೆಸರು ನಿಧಿ ತಪಾಡಿಯಾ. ಮಾಡೆಲ್ ಮತ್ತು ನಟಿಯಾಗಿರುವ ನಿಧಿ ತಪಾಡಿಯಾ ಜೊತೆ ಪೃಥ್ವಿ ಶಾ ಪ್ರೀತಿಯಲ್ಲಿರುವುದು ಮಾತ್ರ ಈಗ ಹೊರಜಗತ್ತಿಗೆ ಗೊತ್ತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರನ್ನು ಫಾಲೋ ಮಾಡುತ್ತಿರುವವರಿಗೆ ಮಾತ್ರ ಇವರಿಬ್ಬರ ಮಧ್ಯೆ ವಿಶೇಷ ಬಾಂಧವ್ಯ ಇರುವುದು ಗೊತ್ತಾಗಿದೆ.

Prithvi Shaw Shared An Instagram Post With Nidhi Tapadia And Immediately Deleted The Post

ಪೃಥ್ವಿ ಶಾರನ್ನು ಟ್ಯಾಗ್ ಮಾಡಿದ್ದ ತಪಾಡಿಯಾ

ಫೋಟೋ ಅಪ್‌ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಪೃಥ್ವಿ ಶಾ ಅದನ್ನು ಡಿಲೀಟ್ ಮಾಡಿದ್ದರು ಕೂಡ ಸ್ವತಃ ತಪಾಡಿಯಾ ಇಬ್ಬರ ನಡುವಿನ ಸಂಬಂಧದ ಬಗ್ಗೆ ಸುಳಿವು ನೀಡಿದ್ದರು.

ತಪಾಡಿಯಾ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಮಾಡಿದ್ದ ಪೋಸ್ಟ್‌ನಲ್ಲಿ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಇರುವುದಾಗಿ ಹೇಳಿಕೊಂಡಿದ್ದರು. ಹಿಮದ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದ ತಪಾಡಿಯಾ 'ಪ್ರಸ್ತುತ ಸ್ವರ್ಗದಲ್ಲಿ ವಾಸಿಸುತ್ತಿದ್ದೇನೆ' ಎಂದು ಶೀರ್ಷಿಕೆ ನೀಡಿದ್ದರು. ಅಲ್ಲದೆ ಈ ಪೋಸ್ಟ್‌ಗೆ ಪೃಥ್ವಿ ಶಾರನ್ನು ಟ್ಯಾಗ್ ಮಾಡಿದ್ದರು.

Prithvi Shaw Shared An Instagram Post With Nidhi Tapadia And Immediately Deleted The Post

ಮತ್ತೊಂದು ತಾರಾ ಜೋಡಿಯಾಗುತ್ತಾ?

ಇತ್ತೀಚೆಗೆ ತಾನೆ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಬಾಲಿವುಡ್ ನಟಿ ಆಥಿಯಾ ಶೆಟ್ಟಿಯನ್ನು ವಿವಾಹವಾಗಿದ್ದರು. ಬ್ಯಾಲಿವುಡ್‌ನ ಖ್ಯಾತ ನಟ ಸುನಿಲ್‌ ಶೆಟ್ಟಿ ಮಗಳಾದ ಆಥಿಯಾ ಜೊತೆ ರಾಹುಲ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು.

ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ನತಾಶಾ ಸ್ಟಾಂಕೋವಿಕ್‌ರನ್ನು 2020ರಲ್ಲಿ ಸರಳವಾಗಿ ಮದುವೆಯಾಗಿದ್ದರು. ಈಗ ಈ ಜೋಡಿ ಪ್ರೇಮಿಗಳ ದಿನಾಚರಣೆಯಂದು ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ.

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಕೂಡ ಮತ್ತೊಂದು ಪ್ರಮುಖ ತಾರಾ ಜೋಡಿಯಾಗಿದೆ. ಈಗ ಪೃಥ್ವಿ ಶಾ ಕೂಡ ಇದೇ ಸಾಲಿಗೆ ಸೇರುತ್ತಾರೆ ಎನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

Story first published: Tuesday, February 14, 2023, 16:03 [IST]
Other articles published on Feb 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+