ಪ್ರೊ ಕುಸ್ತಿ ಲೀಗ್ : ಬೆಂಗಳೂರು ಯೋಧರನ್ನು ಸ್ವಾಗತಿಸಿ
ಬೆಂಗಳೂರು, ನ.22: ಪ್ರೊ ಸ್ಫೋಟಿಫೈ ಆಯೋಜನೆಯ ಪ್ರಪ್ರಥಮ ಆವೃತ್ತಿಯ ಪ್ರೊ ರೆಸ್ಲಿಂಗ್ ಲೀಗ್ (ಪಿಡಬ್ಲ್ಯೂಎಲ್) ತನ್ನ ತಂಡಗಳನ್ನು ಪ್ರಕಟಿಸಿದೆ. ಬೆಂಗಳೂರು ಸೇರಿದಂತೆ ಆರು ನಗರಗಳಿಂದ ತಂಡಗಳು ಕಣಕ್ಕಿಳಿಯಲಿವೆ.
ಡಿಸೆಂಬರ್ 10ರಿಂದ ಕುಸ್ತಿ ಲೀಗ್ ಆರಂಭಗೊಳ್ಳಲಿದ್ದು, ವಿಶ್ವ ಮಟ್ಟದ ಅಗ್ರಗಣ್ಯ ಕುಸ್ತಿ ಪಟುಗಳು ಈ ಲೀಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗ ಆಯ್ಕೆಯಾಗಿರುವ ತಂಡಗಳು ಇಂತಿವೆ: [ವಿಶ್ವದ ದುಬಾರಿ ಕುಸ್ತಿ ಲೀಗ್ ಗೆ ಭಾರತದಲ್ಲಿ ಚಾಲನೆ]

* ಬೆಂಗಳೂರು ಯೋಧ (ಜೆಎಸ್ ಡಬ್ಲ್ಯೂ ಸಮೂಹ)
* ದೆಹಲಿ ವೀರ್ (ಜಿಎಂಆರ್ ಗ್ರೂಪ್)
* ಸಿಡಿಆರ್ ಪಂಜಾಬ್ ರಾಯಲ್ಸ್ (ಸಿಡಿಆರ್ ಗ್ರೂಪ್ ಹಾಗೂ ನಟ ಧರ್ಮೇಂದ್ರ)
* ಯುಪಿ ವಾರಿಯರ್ಸ್ (ಲೋಟಸ್ ಗ್ರೀನ್ಸ್)
* ಹರ್ಯಾಣ ಹಮ್ಮರ್ಸ್ (ಆಲೈವ್ ಗ್ಲೋಬಲ್)
* ಮುಂಬೈಚೇ ಗರುಡೆ (ಮಾರ್ವಿಕ್ ಇಂಡಸ್ಟ್ರೀಸ್, ಮಫತ್ ಲಾಲ್, ಗರುಡಾಚಾರ್ಯ)
ಪ್ರೊ ಕುಸ್ತಿ ಲೀಗ್ ಆವೃತ್ತಿಗೆ ಚಾಲನೆ ನೀಡುವ ಮುಹೂರ್ತ ಹತ್ತಿರ ಬರುತ್ತಿರುವುದು ಸಂತಸದ ವಿಷಯ. ಈ ಬಾರಿ 6 ನಗರಗಳಿಂದ ಆರು ತಂಡಗಳು ಕಣಕ್ಕಿಳಿಯಲಿವೆ. ಯುವ ಹಾಗೂ ಹಿರಿಯ ಆಟಗಾರರು ತಂಡಗಳಲಿದ್ದು, ಉತ್ಸಾಹದ ವಾತಾವರಣ ಕಂದು ಬಂದಿದೆ ಎಂದು ಪ್ರೊ ಸ್ಫೋಟಿಫೈನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕಾರ್ತಿಕೇಯ ಶರ್ಮ ಅಭಿಪ್ರಾಯಪಟ್ಟಿದ್ದಾರೆ. [ಮೈಸೂರಿನ ಖ್ಯಾತಿ ಏರಿಸಿದ ಗರಡಿ ಮನೆಗಳು]
ಬ್ರೆಜಿಲ್ಲಿನ ರಿಯೋದಲ್ಲಿರುವ ಒಲಿಂಪಿಕ್ಸ್ ಗೆ ಪೂರ್ವ ತಯಾರಿಯಾಗಿ ಪ್ರೋ ರೆಸ್ಲಿಂಗ್ ಲೀಗ್ ಬಂದಿರುವ ದೇಶಿ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸಲಿದೆ. ಆರು ನಗರಗಳಿಂದ 66 ಕ್ಕೂ ಅಧಿಕ ಕುಸ್ತಿಪಟುಗಳು ಸ್ಥಾನ ಪಡೆಯಲಿದ್ದಾರೆ.
ಪ್ರೋ ರೆಸ್ಲಿಂಗ್ ಲೀಗ್ ಯಾವ ಚಾನೆಲ್ ನಲ್ಲಿ ಪ್ರಸಾರವಾಗಲಿದೆ ಎಂಬುದು ಆಗಸ್ಟ್ 30ಕ್ಕೆ ತಿಳಿಯಲಿದೆ. ಸೆಪ್ಟೆಂಬರ್ 15ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ವಿಶ್ವದ ಟಾಪ್ 20 ಕುಸ್ತಿಪಟುಗಳು ಈ ಟೂರ್ನಿಯಲ್ಲಿ ಭಾಗವಹಿಸಲು ಒಪ್ಪಿದ್ದಾರೆ
(ಐಎಎನ್ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications