ನೂತನ ಸಂಸತ್‌ನತ್ತ ತೆರಳದಂತೆ ಪ್ರತಿಭಟನಾ ನಿರತ ರೆಸ್ಲರ್‌ಗಳನ್ನು ತಡೆದ ಪೊಲೀಸರು!

ನಿನ್ನೆ ( ಮೇ 28 ) ನವದೆಹಲಿಯಲ್ಲಿ ನೂತನ ಸಂಸತ್ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ದೇಶದ ಪ್ರಧಾನಿ ನರೇಂದ್ರ್ ಮೋದಿ ಈ ಭವ್ಯ ಕಟ್ಟಡವನ್ನು ಉದ್ಘಾಟಿಸಿದರು. ದೇಶದ ವಿವಿಧ ಕ್ಷೇತ್ರಗಳ ಹಲವಾರು ನಾಯಕರು, ರಾಜಕಾರಣಿಗಳು ಈ ಮಹಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಒಂದೆಡೆ ವಿಜೃಂಭಣೆಯಿಂದ ಈ ಕಾರ್ಯಕ್ರಮ ಜರುಗಿದರೆ ಮತ್ತೊಂದೆಡೆ ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ರೆಸ್ಲರ್ ಫೆಡರೇಶನ್ ಆಫ್ ಇಂಡಿಯಾ ( WFI ) ಪ್ರತಿಭಟನೆ ನಡೆಸುತ್ತಿರುವ ರೆಸ್ಲರ್‌ಗಳು ಇದೇ ಸಂಸತ್ ಭವನದ ಕಡೆ ಉದ್ಘಾಟನಾ ದಿನವೇ ನುಗ್ಗಲು ಯತ್ನಿಸಿದ್ದಾರೆ.
ಹೌದು, ಇಂದು ಸಂಸತ್ ಭವನದ ಎದುರು ರೆಸ್ಲರ್‌ಗಳು 'ಮಹಿಳಾ ಮಹಾಪಂಚಾಯತ್' ನಡೆಸಲು ತೀರ್ಮಾನಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೇಶದ ವಿವಿಧ ಪಕ್ಷಗಳ ವಿವಿಧ ನಾಯಕರು ಈ ಕಾರ್ಯಕ್ರಮಕ್ಕೆ ಹಾಜರಾಗಲಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಇದರ ಕುರಿತಾದ ಸುದ್ದಿಗಳು ಪ್ರಸಾರವಾಗಲಿವೆ. ಇಂತಹ ದಿನದಂದು ನೂತನ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದಾಗಲಾದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಬೇಡಿಕೆಗಳನ್ನು ಆಲಿಸಬಹುದು ಎಂಬುದು ರೆಸ್ಲರ್‌ಗಳ ಉದ್ದೇಶವಾಗಿತ್ತು.
ಆದರೆ ರೆಸ್ಲರ್‌ಗಳ ಈ ಯೋಜನೆಗೆ ದೆಹಲಿ ಪೊಲೀಸರು ತಣ್ಣೀರೆರಚಿದ್ದು, ಜಂತರ್ ಮಂತರ್‌ನಿಂದ ಹೊರಟಿದ್ದ ರೆಸ್ಲರ್‌ಗಳನ್ನು ದೆಹಲಿ ಪೊಲೀಸರು ತಡೆದಿದ್ದಾರೆ. ಈ ವೇಳೆ ರೆಸ್ಲರ್‌ಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ಯತ್ನಿಸಿದ್ದು, ನೂಕಾಟ ಉಂಟಾಗಿದೆ. ಈ ವೇಳೆ ಮಹಿಳಾ ರೆಸ್ಲರ್‌ಗಳು ಕಣ್ಣೀರಿಟ್ಟಿ ಘಟನೆ ಸಹ ನಡೆದಿದೆ.
ಸದ್ಯ ಒಂದೆಡೆ ಭವ್ಯ ಸಂಸತ್ ಭವನದ ವಿಜೃಂಭಣೆಯ ಉದ್ಘಾಟನೆ ನಡೆಯುತ್ತಿದ್ದು, ಮತ್ತೊಂದೆಡೆ ರೆಸ್ಲರ್‌ಗಳ ಪರದಾಟವನ್ನು ಕಂಡ ನೆಟ್ಟಿಗರು ರಾಜಕೀಯ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಈ ಪ್ರತಿಭಟನೆ ಯಾಕೆ?
ರೆಸ್ಲರ್ ಫೆಡರೇಶನ್ ಆಫ್ ಇಂಡಿಯಾ ( WFI ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿ ಕಿರುಕುಳದ ಗಂಭೀರ ಆರೋಪ ಮಾಡಿರುವ ಭಾರತದ ರೆಸ್ಲರ್‌ಗಳು ಕಳೆದ ಏಪ್ರಿಲ್ 23ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನ ಆಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಣ ತೊಟ್ಟಿದ್ದಾರೆ.
ಕಳೆದ ಜನವರಿ ತಿಂಗಳಿನಲ್ಲಿ ಭಾರತದ ಟಾಪ್ ರೆಸ್ಲರ್‌ಗಳಾದ ವಿನೀಶ್ ಫೋಗಟ್, ಭಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲ್ಲಿಕ್ ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ( WFI ) ಅಧ್ಯಕ್ಷರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿ ಕಿರುಕುಳದ ಗಂಭೀರ ಆರೋಪವನ್ನು ಮಾಡಿದ್ದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಿ ಎಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ದೆಹಲಿ ಪೊಲೀಸರಿಗೆ ದೂರನ್ನೂ ಸಹ ನೀಡಿದ್ದರು.
ದೆಹಲಿ ಪೊಲೀಸರಿಗೆ ದೂರನ್ನೂ ಸಹ ನೀಡಿದ್ದರು. ಆದರೆ ದೂರು ನೀಡಿ ಮೂರು ತಿಂಗಳುಗಳು ಕಳೆದರೂ ಸಹ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂದು ಮತ್ತೆ ರೆಸ್ಲರ್‌ಗಳು ರೊಚ್ಚಿಗೆದ್ದಿದ್ದಾರೆ. ಈ ಬಾರಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವವರೆಗೂ ಪ್ರತಿಭಟನೆ ನಡೆಸಲು ರೆಸ್ಲರ್‌ಗಳು ತೀರ್ಮಾನಿಸಿದ್ದರು.
ಇನ್ನು ಈ ಬಾರಿ ಏಳು ಮಹಿಳಾ ರೆಸ್ಲರ್‌ಗಳು ಹೊಸ ದೂರುಗಳೊಂದಿಗೆ ಬಂದಿದ್ದು, ಬ್ರಿಜ್ ಭೂಷಣ್ ಶರಣ್ ಸಿಂಗ್ ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಲಕ್ಷಣಗಳೂ ಸಹ ಕಾಣಸಿಗುತ್ತಿವೆ. ಈ ದೂರಿನ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ ಎಂದು ಕಿಡಿಕಾರಿದ್ದ ಸಾಕ್ಷಿ ಮಲ್ಲಿಕ್ "ಮಹಿಳಾ ಕುಸ್ತಿಪಟುಗಳ ಹೇಳಿಕೆಯನ್ನು ದಾಖಲಿಸಿಕೊಂಡಿರುವ ವರದಿಯು ಸಾರ್ವಜನಿಕವಾಗಬೇಕೆಂದು ನಾವು ಬಯಸುತ್ತೇವೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ದೂರು ನೀಡಿದವರಲ್ಲಿ ಅಪ್ರಾಪ್ತ ಬಾಲಕಿಯೂ ಇದ್ದಾರೆ" ಎಂದು ಹೇಳಿಕೆ ನೀಡಿ ಯಾವುದೇ ಕಾರಣಕ್ಕೂ ಆ ದೂರುದಾರರ ಹೆಸರುಗಳು ಆಚೆ ಬರಬಾರದು ಎಂದು ಸಹ ಹೇಳಿಕೆ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications