Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Chess: ನಾರ್ವೆ ಚೆಸ್ ಟೂರ್ನಮೆಂಟ್ ಗೆದ್ದ ಮೊದಲ ಭಾರತೀಯ ಆರ್‌ ಪ್ರಜ್ಞಾನಂದ್

ಭಾರತದ ಭರವಸೆಯ ಆಟಗಾರ ಆರ್‌ ಪ್ರಜ್ಞಾನಂದ್ ಅವರು ಇತಿಹಾಸ ನಿರ್ಮಿಸಿದ್ದಾರೆ. ಓಸ್ಲೋದಲ್ಲಿ ನಡೆದ ಪ್ರತಿಷ್ಠಿತ ನಾರ್ವೆ ಚೆಸ್ ಟೂರ್ನಮೆಂಟ್ ಗೆಲ್ಲುವ ಮೂಲಕ 20 ವರ್ಷದ ಪ್ರಜ್ಞಾನಂದ್, ಪ್ರತಿಷ್ಠಿತ ಟೂರ್ನಮೆಂಟ್ ಅನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತಿಮ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಆರ್‌ ಪ್ರಜ್ಞಾನಂದ್ ಅವರ ಈ ಗೆಲುವು ತುಂಬಾ ವಿಶೇಷವಾಗಿದೆ. ಏಕೆಂದರೆ ಈ ಪಂದ್ಯವಳಿಯ ಆರಂಭದಲ್ಲಿ ಪ್ರಜ್ಞಾನಂದ್ ಪಂದ್ಯವಳಿಯಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ ಅಂತಿಮ ಸುತ್ತುಗಳಲ್ಲಿ ಚಾಂಪಿಯನ್ ಆಗಲು ಬಲವಾದ ಪುನರಾಗಮನ ಮಾಡಿದರು. ವಿಶ್ವದ ಅತ್ಯುತ್ತಮ ಆಟಗಾರರು ಈ ಪಂದ್ಯವಳಿಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವುದು ಪ್ರಜ್ಞಾನಂದ್ ಅವರಿಗೆ ಸುಲಭವಾಗಿರಲಿಲ್ಲ.

R Praggnanandhaa

ಈ ಪಂದ್ಯಾವಳಿಯಲ್ಲಿ ವಿಶ್ವದ ನಂಬರ್-1 ಮ್ಯಾಗ್ನಸ್ ಕಾರ್ಲ್ಸನ್, ಪ್ರಸ್ತುತ ವಿಶ್ವ ಚಾಂಪಿಯನ್ ಡಿ ಗುಕೇಶ್, ಅಲಿರೆಜಾ ಫಿರೋಜ್ಜಾ ಮತ್ತು ವೆಸ್ಲಿ ಸೋ ಅವರಂತಹ ದಿಗ್ಗಜರು ಕಾಣಿಸಿಕೊಂಡಿದ್ದರು. ಪ್ರಜ್ಞಾನಂದ್ ಅಂತಿಮ ಸುತ್ತಿನ ಕಾದಾಟದಲ್ಲಿ ಅಮೆರಿಕದ ಆಟಗಾರ ವೆಸ್ಲಿ ಸೋ ಅಲಿರೆಜಾ ಅವರನ್ನು ಸೋಲಿಸುವ ಮೂಲಕ ತಮ್ಮ ಭರವಸೆಯನ್ನು ಜೀವಂತವಾಗಿರಿಸಿಕೊಂಡರು. ಕೊನೆಯ ಸುತ್ತಿನ ಪಂದ್ಯವನ್ನು ಗೆಲ್ಲುವ ಮೂಲಕ ವೆಸ್ಲಿ ಸೋ ಅವರ ಭರವಸೆಯನ್ನು ಹುಸಿಗೊಳಿಸಿದರು.

ಪ್ರಜ್ಞಾನಂದ್ ಇತಿಹಾಸ

ಭಾರತದ ಡಿ ಗುಕೇಶ್‌ ಅವರನ್ನು ಮಣಿಸಿದ ಸ್ಟಾರ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರು. ಈ ಪಂದ್ಯವಳಿಯಲ್ಲಿ ಪ್ರಜ್ಞಾನಂದ್ ಅಮೋಘ ಪ್ರದರ್ಶನ ನೀಡಿದ್ದರು. ಇವರು ಸ್ಟಾರ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಮೇಲಿನ ಅವರ ಪ್ರಾಬಲ್ಯ. ಚೆನ್ನೈನ ಈ ಯುವ ಆಟಗಾರ ಪಂದ್ಯಾವಳಿಯಲ್ಲಿ ಕಾರ್ಲ್ಸನ್ ಅವರನ್ನು ಒಮ್ಮೆ ಅಲ್ಲ, ಎರಡು ಬಾರಿ ಸೋಲಿಸಿದರು.

ಈ ಮೂಲಕ ಒಂದೇ ಚೆಸ್‌ ಟೂರ್ನಿಯಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಎರಡು ಬಾರಿ ಸೋಲಿಸಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ವಿಶ್ವನಾಥನ್ ಆನಂದ್ ಈ ಸಾಧನೆ ಮಾಡಿದ್ದರು.

ಸಾಧನೆಗೆ ಅಭಿನಂದನೆ

ಪ್ರಜ್ಞಾನಂದ ಐತಿಹಾಸಿಕ ಸಾಧನೆಗೆ ಅಭಿನಂದನೆಗಳು ಹರಿದು ಬಂದಿವೆ. ಹಿರಿಯ ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಜ್ಞಾನಂದ್ ಅವರ ಸಾಧನೆಯ ಗುಣಗಾನ ಮಾಡಿದ್ದಾರೆ.

Story first published: Saturday, June 6, 2026, 10:03 [IST]
Other articles published on Jun 6, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+