Chess: ವಿಶ್ವ ಚಾಂಪಿಯನ್ ಗುಕೇಶ್ ಮಣಿಸಿದ ಪ್ರಜ್ಞಾನಂದಗೆ ಪ್ರಶಸ್ತಿ
ಸಿಂಗಾಪುರದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ ಶಿಪ್ ಚೆಸ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಗೆಲುವು ದಾಖಲಿಸಿದ್ದ ಡಿ ಗುಕೇಶ್ ನಿರಾಸೆ ಕಾದಿದೆ. ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ 2025 ರ ಮಾಸ್ಟರ್ಸ್ ವಿಭಾಗದಲ್ಲಿ ಗುಕೇಶ್ ಸೋಲು ಕಂಡಿದ್ದಾರೆ. ಅಮೋಘ ಪ್ರದರ್ಶನ ನೀಡಿದ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಗೆಲುವು ದಾಖಲಿಸಿದ್ದಾರೆ. ವಿಶ್ವ ಚಾಂಪಿಯನ್ ಅವರನ್ನು ಸೋಲಿಸಿದ ಪ್ರಜ್ಞಾನಂದ ಚೊಚ್ಚಲ ಪ್ರಶಸ್ತಿಯನ್ನು ಪಡೆದು ಸಂಭ್ರಮಿಸಿದ್ದಾರೆ. ವಿಶ್ವ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ ಗುಕೇಶ್ ಮೊದಲ ಟೂರ್ನಿ ಇದಾಗಿತ್ತು.
ಗುಕೇಶ್ ಹಾಗೂ ಪ್ರಜ್ಞಾನಂದ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದರು. ಇಬ್ಬರ ನಡುವಿನ ಪಂದ್ಯ ಟೈ ಆಯಿತು. ಬಳಿಕ ಇಬ್ಬರ ನಡುವೆ ಟೈ ಬ್ರೇಕರ್ ಆಡಿಸಲಾಯಿತು. ಪ್ರಶಸ್ತಿ ಸುತ್ತಿನ ಕದಾಟದಲ್ಲಿ ಪ್ರಜ್ಞಾನಂದ ಸ್ಥಿರ ಪ್ರದರ್ಶನ ನೀಡಿ ಅಂಕಗಳನ್ನು ಬಾಚಿಕೊಂಡರು. ಅಲ್ಲದೆ ಗುಕೇಶ್ ಅವರ ನಡೆಗೆ ಪ್ರತಿಯಾಗಿ, ಪ್ರತಿ ತಂತ್ರವನ್ನು ರಚಿಸಿ ಗೆಲುವು ಸಾಧಿಸಿದರು.

ಪಂದ್ಯ ಆರಂಭವಾದಾಗ ಪ್ರಜ್ಞಾನಂದ ಒಂದು ತಪ್ಪು ಮಾಡಿದರು. ಈ ತಪ್ಪಿನ ಸಂಪೂರ್ಣ ಲಾಭವನ್ನು ಪಡೆದ ಗುಕೇಶ್ ಅಬ್ಬರಿಸಿದರು. ಆದರೆ ತಾವು ಮಾಡಿದ ತಪ್ಪು ಪ್ರಜ್ಞಾನಂದಗೆ ಅರಿವಿತ್ತು. ಹೀಗಾಗಿ ಅವರು ಬಿಟ್ಟು ಕೊಡಲಿಲ್ಲ. ಎರಡನೇ ಪಂದ್ಯದಲ್ಲಿ ಗುಕೇಶ್ ವಿರುದ್ಧ ಉತ್ತಮ ರಣ ತಂತ್ರ ಪ್ರದರ್ಶಿಸಿದ ಪ್ರಜ್ಞಾನಂದ, ಬುದ್ಧಿವಂತಿಕೆಯ ಆಟವಾಡಿದರು. ಬಳಿಕ ಪಂದ್ಯವನ್ನು ಸಡತ್ ಡೆತ್ ಬಳಿ ಕೊಂಡೊಯ್ದರಯ. ಈ ಪಂದ್ಯದಲ್ಲೂ ಧೃತಿ ಗೆಡದೆ ಆಟವಾಡಿದ ಪ್ರಜ್ಞಾನಂದ ಪ್ರಶಸ್ತಿ ಪಡೆದರು.
ಪಂದ್ಯದ ಯಾವುದೇ ಸಮಯದಲ್ಲಿ ಪ್ರಜ್ಞಾನಂದ ಚಿತ್ತವನ್ನು ಬೇರೆ ಕಡೆಗೆ ಹರಿಸಲೇ ಇಲ್ಲ. ಇವರು ಇವರು ತಮ್ಮ ತಾಂತ್ರಿಕ ಕೌಶಲ್ಯ ಪ್ರದರ್ಶಿಸಿದರು. ಪಂದ್ಯದ ಒತ್ತಡ ಹೆಚ್ಚಾದಂತೆ ಗುಕೇಶ್ ಏಕಾಗ್ರತೆ ಕಳೆದುಕೊಂಡರು. ಹೀಗಾಗಿ ಒಂದು ತಪ್ಪು ಮೂವ್ ಮಾಡಿದರು. ಇದರಿಂದ ಹತಾಶೆಗೆ ಒಳಗಾದ ಗುಕೇಶ್ ತಮ್ಮ ಕುರ್ಚಿಗೆ ಒರಗಿದರು. ಆಗ ಅವರ ಮುಖದಲ್ಲಿ ನಿರಾಸೆ ಸ್ಪರ್ಷವಾಗಿ ಎದ್ದು ಕಾಣುತ್ತಿತ್ತು. ಪ್ರಜ್ಞಾನಂದ ಸಮ ಚಿತ್ತದಿಂದ ಪಂದ್ಯವನ್ನು ಆಡಿ ಗೆಲುವು ದಾಖಲಿಸಿದರು. ಇದು ಮಾಸ್ಟರ್ಸ್ ಮಟ್ಟದಲ್ಲಿ ಅವರ ಮೊದಲ ಗೆಲುವು.

ಟಾಟಾ ಸ್ಟೀಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 14 ಆಟಗಾರರು ಭಾಗವಹಿಸಿದ್ದರು. ಈ ಈವೆಂಟ್‌ನ 13ನೇ ಸುತ್ತಿನ ಬಳಿಕ ಪ್ರಜ್ಞಾನಂದ ಮತ್ತು ಗುಕೇಶ್ ತಲಾ 8.5 ಅಂಕಗಳನ್ನು ಕಲೆ ಹಾಕಿದ್ದರು. ಇದಾದ ಬಳಿಕ ಟೈ ಬ್ರೇಕರ್‌ನಲ್ಲಿ ಪ್ರಜ್ಞಾನಂದ ಸ್ಥಿರ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕ್ಕೆರಿದರು. ಈ ಚೆಸ್ ಟೂರ್ನಿಯನ್ನು 1938ರಿಂದ ಆಡಿಸಲಾಗುತ್ತಿದೆ.
ಪ್ರಜ್ಞಾನಂದ್ ಯಾರು?
ಪ್ರಜ್ಞಾನಂದ್ ತಮಿಳುನಾಡಿನ ನಿವಾಸಿ. ತಮ್ಮ 10ನೇ ವಯಸ್ಸಿನಲ್ಲೇ ಇವರು ಇಂಟರ್‌ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ ಆಗಿದ್ದರು. ಇವರ ತಂದೆ ತಮಿಳುನಾಡಿನಲ್ಲಿ ಬ್ಯಾಂಕ್ ಉದ್ಯೋಗಿ. ಪ್ರಜ್ಞಾನಂದ 2016 ರಲ್ಲಿ 10 ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಅಂತರರಾಷ್ಟ್ರೀಯ ಚೆಸ್ ಮಾಸ್ಟರ್ ಆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications