Chess: ಕ್ಯಾಂಡಿಡೇಟ್ಸ್ ಟೂರ್ನಿಗೆ ಪ್ರಜ್ಞಾನಂದ ಅರ್ಹತೆ
ಭಾರತದ ಸ್ಟಾರ್ ಚೆಸ್ ಆಟಗಾರ ಆರ್ ಪ್ರಜ್ಞಾನಂದ ಪ್ರಸಕ್ತ ವರ್ಷದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಇವರ ಸಾಧನೆಯ ಮುಡಿಗೆ ಮತ್ತೊಂದು ಗರಿ ಸಂದಿದೆ. ಪ್ರಜ್ಞಾನಂದ ಫಿಡೆ ಸರ್ಕ್ಯೂಟ್ 2025ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ, 2026ರ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಈ ಮೂಲಕ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದರು. 2026ರ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಪುರುಷ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.
ಭಾರತದ ಸ್ಟಾರ್ ಚೆಸ್ ಆಟಗಾರ ಆರ್. ಪ್ರಜ್ಞಾನಂದ 9 ಸುತ್ತುಗಳ ನಂತರ 7 ಅಂಕಗಳನ್ನು ಗಳಿಸುವ ಮೂಲಕ ಲಂಡನ್ ಚೆಸ್ ಕ್ಲಾಸಿಕ್‌ನ ಜಂಟಿ ವಿಜೇತರಾದರು. ಭಾರತದ ಪ್ರಣವ್ ವಿ 6.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಅಂತಿಮ ಸುತ್ತಿನಲ್ಲಿ ಪ್ರಜ್ಞಾನಂದ ಇಸ್ರೇಲ್‌ನ ಇಯಾ ಸ್ಮಿರಿನ್ ಅವರೊಂದಿಗೆ ಡ್ರಾ ಮಾಡಿಕೊಂಡು ಮೊದಲ ಸ್ಥಾನವನ್ನು ಪಡೆದುಕೊಂಡರು. ಪ್ರಜ್ಞಾನಂದ FIDE ಸರ್ಕ್ಯೂಟ್‌ನಲ್ಲಿ 8.17 ಅಂಕಗಳನ್ನು ಗಳಿಸಿದ್ದಾರೆ.

ಚೆನ್ನೈನ ಚೆಸ್ ಆಟಗಾರ ಪ್ರಜ್ಞಾನಂದ ಅವರು ಪ್ರಸಕ್ತ ವರ್ಷ ಅಮೋಘ ಪ್ರದರ್ಶನ ನೀಡಿದ್ದಾರೆ. ಇದೇ ವೇಳೆ ಪ್ರಜ್ಞಾನಂದ ಹಲವು ಪ್ರಶಸ್ತಿಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಅವರ ಅರ್ಹತೆಯು ಲಂಡನ್ ಚೆಸ್ ಓಪನ್‌ನಲ್ಲಿ ನಿರ್ಣಾಯಕವಾಯಿತು. ಫಿಡೆ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರಿಂದ ಇವರಿಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಈ ವರ್ಷದಲ್ಲಿ ಪ್ರಜ್ಞಾನಂದ್ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಗುಕೇಶ್ ಡಿ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು. ಗ್ರ್ಯಾಂಡ್ ಚೆಸ್ ಟೂರ್ ಸೂಪರ್‌ಬೆಟ್ ಚೆಸ್ ಕ್ಲಾಸಿಕ್ ರೊಮೇನಿಯಾ ಅಮೋಘ ಪ್ರದರ್ಶನ ನೀಡಿ ಮೇನಲ್ಲಿ ಪ್ರಶಸ್ತಿ ಪಡೆದಿದ್ದರು.
3 ಆಟಗಾರ್ತಿಯರಿಗೆ ಅವಕಾಶ
ಪ್ರಜ್ಞಾನಂದ ಜೊತೆಗೆ, ಅನೀಶ್ ಗಿರಿ, ಫಾಬಿಯಾನೊ ಕರುವಾನಾ, ಮಥಿಯಾಸ್ ಬ್ಲೂಬಾಮ್, ಜಾವೋಖಿರ್ ಸಿಂಡರೋವ್, ವೆಯಿ ಯಿ ಮತ್ತು ಆಂಡ್ರೆ ಎಸಿಪೆಂಕೊ ಸೇರಿದಂತೆ ಒಟ್ಟು ಏಳು ಆಟಗಾರರು ತಮ್ಮ ಸ್ಥಾನವನ್ನು ಖಚಿತಪಡಿಸಿದ್ದಾರೆ. ಎಂಟನೇ ಸ್ಥಾನವನ್ನು ರೇಟಿಂಗ್ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಕ್ಯಾಂಡಿಡೇಟ್ಸ್ 2026 ಪಂದ್ಯಾವಳಿಯು ಸೈಪ್ರಸ್‌ನ ಪೆಜಿಯಾದಲ್ಲಿ ಕ್ಯಾಪ್ ಸೇಂಟ್ ಜಾರ್ಜಸ್ ಹೋಟೆಲ್ ಮತ್ತು ರೆಸಾರ್ಟ್‌ನಲ್ಲಿ ಮಾರ್ಚ್ 28 ರಿಂದ ಏಪ್ರಿಲ್ 16, 2026 ರವರೆಗೆ ನಡೆಯಲಿದೆ. ಭಾರತದ ಮಹಿಳಾ ಆಟಗಾರ್ತಿಯರಾದ ದಿವ್ಯಾ ದೇಶ್‌ಮುಖ್, ಕೋನೇರು ಹಂಪಿ, ಮತ್ತು ಆರ್. ವೈಶಾಲಿ ಅವರು ಮುಂದಿನ ವರ್ಷ ನಡೆಯಲಿರುವ ಮಹಿಳಾ ಕ್ಯಾಂಡಿಡೇಟ್ಸ್ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications