For Quick Alerts
ALLOW NOTIFICATIONS  
For Daily Alerts

ಗ್ರ್ಯಾಂಡ್ ಮಾಸ್ಟರ್ ಬಿರುದು ಪಡೆದ ಸಹೋದರ-ಸಹೋದರಿ: ವಿಶಿಷ್ಟ ದಾಖಲೆ ಪ್ರಜ್ಞಾನಾನಂದ, ವೈಶಾಲಿ

ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಾನಂದ ಮತ್ತು ಅವರ ಸಹೋದರಿ ವೈಶಾಲಿ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದ್ದಾರೆ. ಸ್ಪೇನ್‌ನಲ್ಲಿ ನಡೆದ ಲೊಬ್ರೆಗಟ್ ಓಪನ್‌ ಚೆಸ್ ಟೂರ್ನಿಯಲ್ಲಿ ವೈಶಾಲಿ 2500 ರೇಟಿಂಗ್ ಪಾಯಿಂಟ್ ದಾಟುವ ಮೂಲಕ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಎಂಬ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೂರನೇ ಚೆಸ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೈಲಿಗಲ್ಲಿನೊಂದಿಗೆ ವೈಶಾಲಿ ಮತ್ತು ಅವರ ಸಹೋದರ ಪ್ರಜ್ಞಾನಾನಂದ ಅವರು ಚೆಸ್ ಇತಿಹಾಸದಲ್ಲಿ ಗ್ರ್ಯಾಂಡ್ ಮಾಸ್ಟರ್ ಆದ ಮೊದಲ ಸಹೋದರ-ಸಹೋದರಿ ಜೋಡಿ ಎಂಬ ಹಿರಿಮೆ ಹೊಂದಿದ್ದಾರೆ.

ಇನ್ನೊಂದು ವಿಶೇಷ ಅಂದರೆ, ಸಹೋದರ ಸಹೋದರಿಯರಿಬ್ಬರೂ ಸಹ ಕೆಡೆಟ್‌ಗಳಾಗಿದ್ದಾರೆ. ಈ ಹಿಂದೆ ಭಾರತದ ಕೊನೆರು ಹಂಪಿ ಮತ್ತು ಹರಿಕಾ ದ್ರೋಣಾವಳಿ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಆಗಿದ್ದರು. ಗ್ರ್ಯಾಂಡ್‌ಮಾಸ್ಟರ್ ಆದ ನಂತರ, ಈ ಪ್ರಶಸ್ತಿ ಸಿಕ್ಕಿರುವುದು ನನಗೆ ತುಂಬಾ ಖುಷಿ ತಂದಿದೆ. ಚೆಸ್ ಆಡಲು ಆರಂಭಿಸಿದಾಗಿನಿಂದ ಗ್ರ್ಯಾಂಡ್ ಮಾಸ್ಟರ್ ಆಗಬೇಕೆಂಬ ಕನಸು ಕಂಡಿದ್ದೆ ಎಂದು ವೈಶಾಲಿ ಹೇಳಿದ್ದಾರೆ. ಇನ್ನು ಸದ್ಯ ನನ್ನ ಗಮನ ಲೊಬ್ರೆಗಟ್ ಓಪನ್ ಪಂದ್ಯಾವಳಿಯನ್ನು ಗೆಲ್ಲುವತ್ತ ನೆಟ್ಟಿದೆ. 18ರ ಹರೆಯದ ಪ್ರಜ್ಞಾನಾನಂದ 12ನೇ ವಯಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಆದರೆ, ವೈಶಾಲಿ 22ನೇ ವಯಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಪಟ್ಟ ಅಲಂಕರಿಸಿದ್ದಾರೆ.

R Praggnanandhaa, Sister Vaishali Create Unique Record

ಈ ಸಹೋದರ-ಸಹೋದರಿ ಜೋಡಿ ಚೆಸ್ ಒಲಿಂಪಿಯಾಡ್‌ನಲ್ಲಿ ಎರಡು ಕಂಚಿನ ಪದಕ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಡಬಲ್ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಸಹೋದರ-ಸಹೋದರಿಯರಿಬ್ಬರೂ ಪ್ರತಿದಿನ 8 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಾರೆ.

ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಾನಂದರ ಅಕ್ಕ ವೈಶಾಲಿ ಚಿಕ್ಕಂದಿನಿಂದಲೇ ಚೆಸ್ ಆಟದ ಬಗ್ಗೆ ಒಲವಿತ್ತು. ಸಹೋದರಿ ವೈಶಾಲಿ ಮನೆಯಲ್ಲಿ ಚೆಸ್ ಆಡುವುದನ್ನು ನೋಡಿ ಪ್ರಜ್ಞಾನಾನಂದನಿಗೆ ಚದುರಂಗದ ಆಟದ ಬಗ್ಗೆ ಆಸಕ್ತಿಯೂ ಹೆಚ್ಚಾಯಿತು. ಅಲ್ಲದೆ ತನ್ನ ಸಹೋದರನಿಗೆ ವೈಶಾಲಿ ಚದುರಂಗದ ಪಟ್ಟುಗಳನ್ನು ಹೇಳಿಕೊಡಲು ಆರಂಭಿಸಿದರು.

R Praggnanandhaa, Sister Vaishali Create Unique Record

ಪ್ರಜ್ಞಾನಾನಂದ ವೈಶಾಲಿ ತಂದೆ ಸ್ಟೇಟ್ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ನಾಗಲಕ್ಷ್ಮಿ ಗೃಹಿಣಿ. ವೈಶಾಲಿ ಬಾಲ್ಯದಲ್ಲಿ ಟಿವಿಯಲ್ಲಿ ಬರುತ್ತಿದ್ದ ಕಾರ್ಟುನ್‌ ಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಇದರಿಂದ ದೂರ ಉಳಿಯಲು ಪೋಷಕರು ಚೆಸ್‌ ಹಾಗೂ ಡ್ರಾಯಿಂಗ್ ತರಬೇತಿಗೆ ಸೇರಿಸಿದರು. ನಾನು ಸುಮಾರು 6 ವರ್ಷದವನಿದ್ದಾಗ, ನಾನು ಬಹಳಷ್ಟು ಕಾರ್ಟೂನ್‌ಗಳನ್ನು ನೋಡುತ್ತಿದ್ದೆ. ನನ್ನನ್ನು ಟಿವಿಯಿಂದ ದೂರವಿಡಲು ನನ್ನ ತಂದೆ-ತಾಯಿ ನನ್ನನ್ನು ಚೆಸ್ ಮತ್ತು ಡ್ರಾಯಿಂಗ್ ತರಗತಿಗಳಿಗೆ ಸೇರಿಸಿದರು. ಸಹೋದರಿ ಚೆಸ್ ಆಡುವುದನ್ನು ನೋಡಿ ಪ್ರಜ್ಞಾನಾನಂದ ಅವಳಿಂದ ಪ್ರೇರಿತರಾಗಿ ಕೇವಲ 3 ವರ್ಷ ವಯಸ್ಸಿನಲ್ಲೇ ಚೆಸ್ ಕಲಿಯಲು ಪ್ರಾರಂಭಿಸಿದರು.

7 ನೇ ವಯಸ್ಸಿನಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಗೆದ್ದಾಗ ಪ್ರಜ್ಞಾನಾನಂದ ಅವರ ಹೆಸರು ಮೊದಲು ಬೆಳಕಿಗೆ ಬಂದಿತು. ನಂತರ ಅವರು ಫೆಡರೇಶನ್ ಇಂಟರ್ ನ್ಯಾಷನಲ್ ಡೆಸ್ ಅಥ್ಲೆಟಿಕ್ಸ್ ಮಾಸ್ಟರ್ ಎಂಬ ಬಿರುದನ್ನು ಪಡೆದರು.

Story first published: Sunday, December 3, 2023, 10:02 [IST]
Other articles published on Dec 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+