Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

1960 ಒಲಿಂಪಿಕ್ ಡೆಕಾಥ್ಲಾನ್ ಚಾಂಪಿಯನ್ ರಾಫರ್ ಜಾನ್ಸನ್ ನಿಧನ

Rafer Johnson, 1960 Olympic decathlon champion, dies at 86

ಲಾಸ್ ಏಂಜಲ್ಸ್: 1960ರ ರೋಮ್ ಒಲಿಂಪಿಕ್‌ನ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ಅಥ್ಲೀಟ್ ರಾಫರ್ ಜಾನ್ಸನ್ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಲಾಸ್ ಏಂಜಲ್ಸ್‌ನಲ್ಲಿರುವ ಶರ್ಮನ್ ಓಕ್ಸ್‌ನಲ್ಲಿರುವ ತನ್ನ ನಿವಾಸದಲ್ಲಿ ಬುಧವಾರ (ಡಿಸೆಂಬರ್ 2) ರಾಫರ್ ಕೊನೆಯುಸಿರೆಳೆದಿದ್ದಾರೆ.

1955ರ ಕಾಲದಲ್ಲಿ ರಾಫರ್ ಜಾನ್ಸನ್ ಶ್ರೇಷ್ಠ ಅಥ್ಲೀಟ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. 1960ರಲ್ಲಿ ಒಲಿಂಪಿಕ್ಸ್‌ನಲ್ಲಿ ಜಾನ್ಸನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. 1956ರ ರಾಷ್ಟ್ರೀಯ ಡೆಕ್ಲಾಥ್ಲಾನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ರಾಫರ್ ಅದೇ ವರ್ಷ ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ರಾಫರ್ ಜಾನ್ಸನ್ 1960ರ ಒಲಿಂಪಿಕ್ಸ್‌ನಲ್ಲಿ ದೇಶದ ರಾಷ್ಟ್ರೀಯ ಧ್ವಜ ಹಿಡಿದಿದ್ದಿದ್ದು ಶ್ರೇಷ್ಠ ಸಾಧನೆಗಳಲ್ಲಿ ಒಂದಾಗಿತ್ತಲ್ಲದೆ, 1984ರ ಲಾಸ್ ಏಂಜಲೀಸ್ ಮೆಮೋರಿಯಲ್ ಕೊಲಿಜಿಯಂ ಉದ್ಘಾಟನೆ ವೇಳೆ ಜ್ಯೋತಿ ಬೆಳಗಿದ್ದರು. ಅಷ್ಟೇ ಅಲ್ಲ, ಮೂರು ಬೇರೆ ಬೇರೆ ಸಮಯಗಳಲ್ಲಿ ಡೆಕಾಥ್ಲಾನ್‌ ದಾಖಲೆಗಳನ್ನೂ ನಿರ್ಮಿಸಿದ್ದರು.

1955ರ ಪಾನ್ ಅಮೆರಿಕನ್ ಗೇಮ್ಸ್‌ನಲ್ಲೂ ಜಾನ್ಸನ್ ಬಂಗಾರ ಜಯಿಸಿದ್ದರು. ಆಗ ಜಾನ್ಸನ್ ಕೇವಲ ನಾಲ್ಕನೇ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರಷ್ಟೇ. ತನ್ನ ಬಾಲ್ಯದ ಹೀರೋ, ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಬಾಬ್ ಮಥಿಯಾಸ್ ಹೆಸರಿನಲ್ಲಿದ್ದ ದಾಖಲೆಯನ್ನೂ ಜಾನ್ಸನ್ ಸರಿಗಟ್ಟಿದ್ದರು.

Story first published: Thursday, December 3, 2020, 23:00 [IST]
Other articles published on Dec 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+