For Quick Alerts
ALLOW NOTIFICATIONS  
For Daily Alerts

Ice Skating: ಬೆಂಗಳೂರಿನಿಂದ ಲದಾಕ್‌ವರೆಗೆ ರಾಘವೇಂದ್ರ ಅವರ ಸ್ಪೂರ್ತಿದಾಯಕ ಕಥೆ

ಸಾಮಾನ್ಯವಾಗಿ ಅಥ್ಲೀಟ್‌ಗಳು ಮೈದಾನ ಬಿಟ್ಟು ಕೋಚಿಂಗ್‌ ವೃತ್ತಿಯತ್ತ ಮುಖಮಾಡುವ ವೇಳೆಗೆ ಬೆಂಗಳೂರಿನ ರಾಘವೇಂದ್ರ ಸೋಮಯಾಜಿ ಅವರು ಕ್ರೀಡೆಯ ಮೇಲೆ ಅಪಾರ ಪ್ರೀತಿ ಹಾಗೂ ಉತ್ಸಾಹದಿಂದ ಸ್ಕೇಟಿಂಗ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದಾರೆ.

ಬೆಂಗಳೂರಿನ 38 ವರ್ಷದ, ಹಿರಿಯ ಸ್ಪೀಡ್ ಸ್ಕೇಟರ್ ಮತ್ತು ಶಾರ್ಟ್-ಟ್ರ್ಯಾಕ್ ಐಸ್ ಸ್ಕೇಟರ್. ಇವರು ಭಾರತೀಯ ಸ್ಕೆಟಿಂಗ್ ಹವ್ಯಾಸದಿಂದ ನಿಧಾನವಾಗಿ ವ್ಯವಸ್ಥಿತ ರೂಪಕ್ಕೆ ಬದಲಾಗುತ್ತಿರುವುದನ್ನು ಕಂಡಿದ್ದಾರೆ. ಇವರ ಈ ಪ್ರಯಣ ಸಹ ಈ ಬದಲಾವಣೆಗೆ ಸಾಕ್ಷಿಯಾಗಿದೆ.

Raghavendra Somayaji

ಖೆಲೋ ಇಂಡಿಯಾ ವಿಂಟರ್‌ ಗೇಮ್ಸ್‌ 2026ರಲ್ಲಿ ರಾಘವೇಂದ್ರ ಅವರು ಕರ್ನಾಟಕ ಪುರುಷರ 3000 ಮೀಟರ್ ಶಾರ್ಟ್‌ ಟ್ರ್ಯಾಕ್‌ ರಿಲೇ ಸದಸ್ಯರಾಗಿದ್ದಾರೆ. ಈ ತಂಡ ನವಾಂಗ್ ದೋರ್ಜೆ ಸ್ಟೋಬ್ಡನ್ ಕ್ರೀಡಾಂಗಣದಲ್ಲಿ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿತ್ತು. ಬಂಗಾರದ ಸ್ಪರ್ಧೆಯಲ್ಲಿ ಕರ್ನಾಟಕ ಹರಿಯಾಣಗಿಂತಲೂ ಮುಂದಿತ್ತು. ಆದರೆ ಕೊನೆಯಲ್ಲಿ ಕೂದಲೆಳೆಯ ಅಂತರದಲ್ಲಿ ಸ್ವರ್ಣ ಕೈ ಚೆಲ್ಲಿತು.

ಈ ಬಗ್ಗೆ ರಾಘವೇಂದ್ರ ಸೋಮಯಾಜಿ ಅವರು ಮೈಖೇಲ್‌ ಜೊತೆ ಮಾತನಾಡಿದ್ದು, ಒಂದು ಕ್ಷಣದ ಲೋಪ ಪದಕದ ಬಣ್ಣವನ್ನು ಬದಲಿಸಿತು. ನಾವು ಕೊನೆಯ 60 ಮೀಟರ್‌ ರೇಸ್‌ನಲ್ಲಿ ಹಿನ್ನಡೆ ಅನುಭವಿಸಿದೆವು. ಈ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹರಿಯಾಣ ತಂಡಕ್ಕೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಈ ಪದಕ ರಾಘವೇಂದ್ರ ಅವರ ಕ್ರೀಡಾ ಆಸಕ್ತಿ ಹೆಚ್ಚಿಸಿತು. ಇವರು ಒಮ್ಮೆ ರಾಷ್ಟ್ರೀಯ ಚಾಂಪಿಯನ್ ಸಹ ಆಗಿದ್ದರು. ಬಳಿಕ ಅವರು ಐಸ್ ಸ್ಕೇಟಿಂಗ್‌ನತ್ತ ಆಕರ್ಷಿತರಾದರು. ಸುಮಾರು ವರ್ಷಗಳ ಬಳಿಕ ರಾಘವೇಂದ್ರ ಅವರು ಕೋಚ್‌ ಸಹಾಯದಿಂದ ಐಸ್ ಸ್ಕೇಟಿಂಗ್‌ ಆರಂಭಿಸಿದರು.

ರೋಲರ್ ಸ್ಕೇಟಿಂಗ್‌ ಚಾಂಪಿಯನ್‌

ರಾಘವೇಂದ್ರ ಅವರು ಐಸ್‌ ಸ್ಕೇಟಿಂಗ್‌ನ ತಮ್ಮ ಮೊದಲ ಸ್ಪರ್ಧೆಯ ಅನುಭವ ಹಂಚಿಕೊಂಡಿದ್ದಾರೆ. "ನಾನು ರೋಲರ್ ಸ್ಕೇಟಿಂಗ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್. ನನ್ನ ಕೋಚ್‌ ನನಗೆ ಐಸ್‌ ಸ್ಕೇಟಿಂಗ್‌ ಆಡಲು ಪ್ರೇರೇಪಿಸಿದರು. ಕೋಲ್ಕತ್ತಾದಲ್ಲಿ ನಾವು ಮೊದಲ ರಾಷ್ಟ್ರೀಯ ಸ್ಪರ್ಧೆ ನಡೆಸಿದವು. ನಾನು ಈ ಸ್ಪರ್ಧೆಯ ಒಂದು ವಾರಕ್ಕೂ ಮುನ್ನ ಐಸ್ ಸ್ಕೇಟಿಂಗ್ ಆರಂಭಿಸಿದ್ದೆ. ನಾನು ಮೊದಲ ಸ್ಪರ್ಧೆಯಲ್ಲಿ ಎರಡು ಗೋಲು ಬಾರಿಸುವಲ್ಲಿ ಸಫಲನಾಗಿದ್ದೇ ಎಂದು ತಿಳಿಸಿದರು.

ಒಂದು ಕ್ರೀಡೆಯಿಂದ ಮತ್ತೊಂದು ಕ್ರೀಡೆಗೆ ಬದಲಾಗುವಾ ಆದ ತಾಂತ್ರಿಕ ಸಮಸ್ಯೆಯ ಬಗ್ಗೆಯೂ ರಾಘವೇಂದ್ರ ಗಮನ ಹರಿಸಿದ್ದಾರೆ. ನನಗೆ ಸ್ಕೇಟಿಂಗ್‌ ಕ್ರೀಡೆ ಬೇಸ್ ಚೆನ್ನಾಗಿತ್ತು. ಹೀಗಾಗಿ ಮತ್ತೊಂದು ಕ್ರೀಡೆಯಲ್ಲಿ ಬೆವರು ಹರಿಸುವುದು ಕಷ್ಟವಾಗಿರಲಿಲ್ಲ. ಈಗಾಗಲೇ ರೋಲರ್ ಸ್ಕೇಟಿಂಗ್‌ನಲ್ಲಿ ನಿಯಂತ್ರಣ ಮತ್ತು ಸಮತೋಲನವನ್ನು ಹೊಂದಿದ್ದರೆ, ಐಸ್‌ಗೆ ಹೊಂದಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

ರಾಘವೇಂದ್ರ 2006 ರ ಸುಮಾರಿಗೆ ಶಾರ್ಟ್-ಟ್ರ್ಯಾಕ್ ಐಸ್ ಸ್ಕೇಟಿಂಗ್‌ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ಕಾಲ ಕಳೆದಂತೆ ಭಾರತೀಯ ಐಸ್ ಸ್ಕೇಟಿಂಗ್ ಸಂಘ ದೇಶದ ಸ್ಕೇಟರ್‌ಗಳನ್ನು ಸಹ ಅಂತಾರಾಷ್ಟ್ರೀಯ ಶಿಬಿರಗಳು ಮತ್ತು ಸ್ಪರ್ಧೆಗಳಿಗೆ ಕಳುಹಿಸಲು ಪ್ರಾರಂಭಿಸಿತು. ಇದರಿಂದಾಗಿ ನಮ್ಮ ಪ್ರದರ್ಶನ ಸುಧಾರಣೆ ಆಯಿತು. 2017 ರಲ್ಲಿ, ನಾನು ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆ ಆಗಿ ಸ್ಥಿರ ಪ್ರದರ್ಶನ ನೀಡಿದ್ದೇನೆ ಎಂದು ರಾಘವೇಂದ್ರ ನೆನಪಿಸಿಕೊಂಡರು.

ಡೆಹ್ರಾಡೂನ್‌ನಲ್ಲಿ ಶಿಬಿರ

ರಾಘವೇಂದ್ರ ಕರ್ನಾಟಕದವರಾಗಿದ್ದು ಆರಂಭದಲ್ಲಿ ಕೊಂಚ ಸಮಸ್ಯೆಗಳನ್ನು ಎದುರಿಸಿದರು. ಭಾರತದಲ್ಲಿ ಐಸ್ ರಿಂಕ್‌ಗಳು ವಿರಳವಾಗಿದ್ದು, ಹೆಚ್ಚಾಗಿ ಉತ್ತರದಲ್ಲಿ ಕೇಂದ್ರೀಕೃತವಾಗಿವೆ. "ನಾವು ಕರ್ನಾಟಕದವರು, ಅಲ್ಲಿ ಮಂಜುಗಡ್ಡೆ ಮತ್ತು ಶೀತ ವಾತಾವರಣ ಇರುವುದಿಲ್ಲ. ನಾನು ಮೊದಲ ಬಾರಿಗೆ ಲಡಾಖ್‌ಗೆ ಬಂದಾಗ ತಾಪಮಾನ ಮೈನಸ್ 15 ಡಿಗ್ರಿ ಇತ್ತು. ಆಗ ಬೆಂಗಳೂರಿನಲ್ಲಿ 25 ಡಿಗ್ರಿ ಇರುತಿತ್ತು. ಈ ವಾತಾವರಣಕ್ಕೆ ಹೊಂದಿಕೊಳ್ಳಲು ಎರಡು ದಿನ ವಿಶ್ರಾಂತಿ ಪಡೆಯಬೇಕಾಯಿತು ಎಂದು ವಿವರಿಸಿದ್ದಾರೆ.

ರಾಘವೇಂದ್ರ ಅವರು ಕರ್ನಾಟಕದಲ್ಲಿ ತರಬೇತುದಾರ ಮತ್ತು ಅಕಾಡೆಮಿ ಮಾಲೀಕರೂ ಆಗಿದ್ದಾರೆ. ಮುಂದಿನ ಪೀಳಿಗೆಯ ಭಾರತೀಯ ಸ್ಕೇಟರ್‌ಗಳ ಬಗ್ಗೆ ಅಪಾರ ಆಶಯ ಹೊಂದಿದ್ದಾರೆ. "ನಮ್ಮ ಒಕ್ಕೂಟವು ಸ್ಕೇಟರ್‌ಗಳನ್ನು ವಿದೇಶಗಳಿಗೆ ತರಬೇತಿಗಾಗಿ ಕಳುಹಿಸುತ್ತಿದೆ. ಡೆಹ್ರಾಡೂನ್‌ನಲ್ಲಿನ ಶಿಬಿರ ಸಾಕಷ್ಟು ಸಹಾಯ ಮಾಡುತ್ತಿದೆ. ಕರ್ನಾಟಕದಲ್ಲಿ ಐಸ್ ಇಲ್ಲದಿದ್ದರೂ, ರೋಲರ್ ಸ್ಕೇಟಿಂಗ್ ಬಲವಾದ ಅಡಿಪಾಯವನ್ನು ನೀಡುತ್ತದೆ ಎಂದಿದ್ದಾರೆ.

ರಾಘವೇಂದ್ರ ಅವರ ಪದಕದ ಬೇಟೆ ಹೀಗೆ ಮುಂದುವರೆದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತರಲಿ ಎಂಬುದೇ ಅಭಿಮಾನಿಗಳ ಆಶಯ.

Story first published: Sunday, January 25, 2026, 15:57 [IST]
Other articles published on Jan 25, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+