Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾಹುಲ್ ದ್ರಾವಿಡ್ ಕೆನ್ನೆ ಸವರಿದ ಪ್ರಣೀತಾ

ಬೆಂಗಳೂರು, ನ.6: ಗಡ್ಡ ಎಳೆದವರಿಗೆ ಮಿಠಾಯಿ ಎಂಬ ಮಾತು ಮೊಘಲರ ಕಾಲದಿಂದ ಕೇಳಿ ಬಂದಿತ್ತು. ಈಗ 'ನೀವು ಶೇವ್ ಮಾಡುತ್ತೀರಾ' ಎಂಬ ಅಭಿಯಾನ ಆರಂಭಗೊಂಡಿದೆ. ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಹಾಗೂ ನಟಿ ಪ್ರಣೀತಾ ಸುಭಾಶ್ ಅವರು ಜಿಲೆಟ್ ನ ಈ ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಪ್ರಣೀತಾ ಅವರು ದ್ರಾವಿಡ್ ಕೆನ್ನೆ ಸವರಿ ಶೇವ್ ಮಾಡಿದ್ದು ವಿಶೇಷವಾಗಿತ್ತು.

ಜಿಲೆಟ್ ಮ್ಯಾಕ್ 3 ಟರ್ಬೋ ಉತ್ಪನ್ನ ಲಾಂಚ್ ಮಾಡಿದ ದ್ರಾವಿಡ್ ಅವರ ಬಳಿ ಹೊಸ ರೇಜರ್ ಹಿಡಿದು ಬಂದ ಪ್ರಣೀತಾ ಅವರು ದ್ರಾವಿಡ್ ಅವರ ಗಡ್ಡ ಬೋಳಿಸಿ ಕ್ಲೀನ್ ಶೇವ್ ಮಾಡಿದರು. ಕ್ರೀಡಾಪಟುವಾಗಿ ಬೆಳೆಯುತ್ತಿದ್ದಂತೆ ಕ್ಲೀನ್ ಶೇವ್ ಮಾಡಿಕೊಂಡು ಸಮಾರಂಭದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಮೈದಾನದಲ್ಲೂ ಹೊಸ ಆತ್ಮವಿಶ್ವಾಸ ಮೂಡಿಸಲು ಸಹಾಯಕವಾಗಲಿದೆ ಎಂದು ರಾಹುಲ್ ದ್ರಾವಿಡ್ ಹೇಳಿದರು.



ದ್ರಾವಿಡ್ ಮಾತನ್ನು ಪುರಸ್ಕರಿಸಿದ ಪ್ರಣೀತಾ, ಶೇ 75ರಷ್ಟು ಯುವತಿಯರು ಕ್ಲೀನ್ ಶೇವ್ ಮಾಡಿಕೊಂಡಿರುವ ಯುವಕರನ್ನು ಇಷ್ಟಪಡುತ್ತಾರೆ. ನುಣುಪಾದ ಕೆನ್ನೆಯುಳ್ಳ ಪುರುಷರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುವುದಂತೆ. ಅದರೆ, ಅಂಥ ಕೆನ್ನೆ ಸವರುವ ಭಾಗ್ಯ ಯಾರಿಗುಂಟು ಯಾರಿಗಿಲ್ಲ ಎಂದು ನಗೆಯಾಡಿದರು.

ಮ್ಯಾಕ್ 3 ಮೂಲಕ ಇನ್ನಷ್ಟು ಕ್ಲೀನ್ ಶೇವ್ ಯುವಕರನ್ನು ಕಾಣುವ ನಿರೀಕ್ಷೆ ನನಗಂತೂ ಇದೆ ಎಂದರು. ಟೈಟಾನಿಯಂ ಮಾದರಿ ಬ್ಲೇಡ್ ವುಳ್ಳ ರೇಜರ್ ಗಳು ಜೀರೋ ರೆಡ್ ನೆಸ್ ಹೊಂದಿದ್ದು ಕ್ಲೀನ್ ಶೇವ್ ನೀಡಲಿದೆ ಎಂದು ಪ್ರಣೀತಾ ಹೇಳಿದ್ದಲ್ಲದೆ ಶೇವ್ ಮಾಡಿ ತೋರಿಸಿದರು.
Rahul Dravid and Pranitha Subhash


ಪ್ರಾಕ್ಟರ್ ಅಂಡ್ ಗ್ಲಾಂಬಲ್ ಸಂಸ್ಥೆಗೆ ಸೇರಿದ ಜಿಲೆಟ್ ಮ್ಯಾಕ್ 3 ಅಲ್ಲದೆ ಇದೇ ಸಂಸ್ಥೆ Always®, Ambi Pur®, Ariel®, Bounty®, Charmin®, Crest®, Dawn®, Downy®, Duracell®, Fairy®, Febreze®, Gain®, Gillette®, Head & Shoulders®, Lenor®, Olay®, Oral-B®, Pampers®, Pantene®, SK-II®, Tide®, Vicks®, Wella® and Whisper® ಮುಂತಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಜನಪ್ರಿಯಗೊಳಿಸಿದೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+