ಐಪಿಎಲ್‌ಗೆ ಮರಳಲು ಕೋಚ್ ರಾಹುಲ್ ದ್ರಾವಿಡ್ ರೆಡಿ: ಈ ತಂಡಕ್ಕೆ ಕೋಚ್ ಆಗುವ ಸಾಧ್ಯತೆ
ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ 2024 ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಟೂರ್ನಿಯ ಬಳಿಕ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಒಪ್ಪಂದವೂ ಮುಗಿದಿದೆ. ಈಗ ಅವರ ಸ್ಥಾನವನ್ನು ಗೌತಮ್ ಗಂಭೀರ್ ತುಂಬಿದ್ದಾರೆ. ರಾಹುಲ್ ದ್ರಾವಿಡ್ ಮತ್ತೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬರುವ ಸಾಧ್ಯತೆ ದಟ್ಟವಾಗಿದೆ.
ಭಾರತದ ತಂಡದ ಕೋಚ್ ಆಗಿದ್ದಾಗ ರಾಹುಲ್ ದ್ರಾವಿಡ್ ಅವರಿಗೆ ಐಪಿಎಲ್ ತಂಡದ ಕೋಚ್ ಮಾಡುವ ಅವಕಾಶ ಇರುವುದಿಲ್ಲ. ಹೀಗಾಗಿ ಕಳೆದ ಕೆಲವು ವರ್ಷಗಳ ಕಾಲ ಐಪಿಎಲ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಮತ್ತೆ ಕಮ್‌ಬ್ಯಾಕ್ ಮಾಡಲು ರೆಡಿ ಆಗಿದ್ದಾರೆ. ರಾಹುಲ್ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಹುದ್ದೆಯನ್ನು ಅಲಂಕರಿಸಬಹುದು ಎಂಬ ಸುದ್ದಿ ಈಗ ಹರಿದಾಡುತ್ತಿದೆ.

ಕುಮಾರ್ ಆರ್‌ಆರ್ ಕೋಚ್
ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ಕುಮಾರ್ ಸಂಗಕ್ಕಾರ ಕಾಣಿಸಿಕೊಂಡಿದ್ದರು. ಇವರ ಕೋಚಿಂಗ್ ಅವಧಿಯಲ್ಲೂ ರಾಜಸ್ಥಾನ ಸ್ಥಿರ ಪ್ರದರ್ಶನವನ್ನೇ ನೀಡಿತ್ತು. ಆದರೆ ಇವರ ಬದಲಿಗೆ ರಾಹುಲ್ ಹೇಗೆ ಬರಲು ಸಾಧ್ಯ. ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಓಡಾಡುತ್ತಿರಬಹುದು. ಅಂದಹಾಗೆ ಸಂಗಕ್ಕಾರ ಅವರ ಹೆಸರು ಇಂಗ್ಲೆಂಡ್‌ನ ವೈಟ್ ಬಾಲ್ ತಂಡದ ಕೋಚ್ ಆಗುವ ಸುದ್ದಿ ಕೇಳಿ ಬರುತ್ತಿದೆ.
ದ್ರಾವಿಡ್ ಕೋಚ್ ಆಗುವುದು ಹೇಗೆ?
ಒಂದು ವೇಳೆ ಈ ಸುದ್ದಿಯೇ ನಿಜವಾದಲ್ಲಿ ಸಂಗಕ್ಕಾರ, ಇಂಗ್ಲೆಂಡ್ ತಂಡವನ್ನು ಸೇರಿಕೊಳ್ಳುತ್ತಾರೆ. ಆಗ ಖಾಲಿ ಆಗುವ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಸ್ಥಾನವನ್ನು ರಾಹುಲ್ ದ್ರಾವಿಡ್ ಅವರು ತುಂಬ ಬಹುದು. ದ್ರಾವಿಡ್ ಈ ಹಿಂದೆಯೂ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿದ್ದರು.
ಸಂಗಾ ಹೇಳಿದ್ದೇನು?
ಕುಮಾರ್ ಸಂಗಾಕ್ಕರ್ ಅವರನ್ನು ಇತ್ತಿಚಿಗಷ್ಟೇ ಆಂಗ್ಲ ಮಾಧ್ಯಮಗಳು ಈ ಬಗ್ಗೆ ಪ್ರಶ್ನೆ ಮಾಡಿದ್ದವು. ಆಗ ಸಂಗಾ ನಾನು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಅರಾಮಾಗಿ ಇರುವೆ. ಅಲ್ಲದೆ ಅಲ್ಲಿ ಕೆಲಸ ತೃಪ್ತಿ ಇದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ನಾನು ಈ ಕೆಲಸವನ್ನು ಆನಂದಿಸುತ್ತಿದ್ದೇನೆ ಎಂದು ತಿಳಿಸಿದ್ದರು. ಆದರೆ ಇಂಗ್ಲೆಂಡ್ ತಂಡದ ಕೋಚ್ ಸ್ಥಾನವನ್ನು ತಳ್ಳಿಯಂತೂ ಹಾಕಿರಲಿಲ್ಲ.

ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆಗಿದ್ದ ಮ್ಯಾಥ್ಯೂ ಮೋಟ್ ರಾಜೀನಾಮೆ ನೀಡಿದ ನಂತರ ಅವರ ಸ್ಥಾನಕ್ಕೆ ಇನ್ನು ಆಯ್ಕೆ ಪ್ರಕ್ರಿಯೆ ಆರಂಭವಾಗಿಲ್ಲ. ಈ ಸ್ಥಾನಕ್ಕಾಗಿ ಸಂದರ್ಶನ ಪ್ರಕ್ರಿಯೆ ಸ್ಪಲ್ಪ ಸಮಯದಲ್ಲಿ ನಡೆಯಲಿದೆ ಎಂದು ಇಸಿಬಿ ತಿಳಿಸಿತ್ತು. ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗೆ ಇಂಗ್ಲೆಂಡ್ ಬೋರ್ಡ್ ಮಾರ್ಕಸ್ ಟ್ರೆಸ್ಕೊಥಿಕ್ ಅವರನ್ನು ಕೋಚ್ ಆಗಿ ನೇಮಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications