Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

18 ಸಿಕ್ಸ್ ಸಿಡಿಸಿದ ರಾಜಸ್ಥಾನದ ಕ್ರಿಕೆಟರ್ ಆದಿತ್ಯ

Rajasthan U-19 batsman smashes 18 sixes en route to a record 263
ಗ್ರೇಟರ್ ನೋಯ್ಡಾ, ಅ.22: ರಾಜಸ್ಥಾನದ ಅಂಡರ್ 19 ತಂಡದ ಆಟಗಾರ ಆದಿತ್ಯ ಗರ್ವಾಲ್ ಅವರು ಮಂಗಳವಾರ ನಡೆದ ಪಂದ್ಯದಲ್ಲಿ 18 ಸಿಕ್ಸ್ ಸಿಡಿಸಿದ್ದಲ್ಲದೆ 263 ವೈಯಕ್ತಿಕ ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದ್ದಾನೆ. ರೈಲ್ವೆಸ್ ವಿರುದ್ಧ ನಡೆದ ವಿನೂ ಮಂಕಡ್ ಟ್ರೋಫಿ ಕೇಂದ್ರ ವಿಭಾಗದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾನೆ.

ಗ್ರೇಟರ್ ನೋಯ್ಡಾದ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆದಿತ್ಯ ಗರ್ವಾಲ್ ಅದ್ಭುತ ಪ್ರದರ್ಶನ ನೀಡಿ 18 ಸಿಕ್ಸರ್, 22 ಬೌಂಡರಿ ನೆರವಿನೊಂದಿಗೆ 151 ಎಸೆತಗಳಲ್ಲಿ 263ರನ್ ಚೆಚ್ಚಿದ್ದಾನೆ. ಜೊತೆಗೆ 3ನೇ ವಿಕೆಟ್ ಗೆ ಎಂಎನ್ ಸಿಂಗ್(94) ಜೊತೆಗೂಡಿ 261 ರನ್ ಗಳಿಸಿದ್ದಾರೆ.

ಒಟ್ಟಾರೆ ರೈಲ್ವೆಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ನಿಗದಿತ 50 ಓವರ್ ಗಳಲ್ಲಿ 413 ಸ್ಕೋರ್ ಮಾಡಿದೆ. ಇದಕ್ಕೆ ಉತ್ತರವಾಗಿ ರೈಲ್ವೆಸ್ ತಂಡ 42.2 ಓವರ್ ಗಳಲ್ಲಿ 147 ರನ್ನಿಗೆ ಆಲೌಟ್ ಆಗಿ ಸೊಲೊಪ್ಪಿಕೊಂಡಿದೆ. ರೈಲ್ವೆಸ್ ಪರ ಮೋಹಿತ್ ಪಾಲ್ 42 ರನ್ ಗಳಿಸಿದ್ದೇ ದೊಡ್ಡ ಮೊತ್ತವಾಗಿತ್ತು. ರಾಜಸ್ಥಾನ ಪರ ಬೌಲಿಂಗ್ ನಲ್ಲಿ ಶುಭಂ ಶರ್ಮ ಉತ್ತಮ ಪ್ರದರ್ಶನ ನೀಡಿ 42 ರನ್ನಿತ್ತು 5 ವಿಕೆಟ್ ಕಬಳಿಸಿದರು. (ಪಿಟಿಐ)

ದುಲೀಪ್ ಟ್ರೋಫಿ ಸೆಮಿಫೈನಲ್ಸ್ ಆರಂಭ:

ರಾಬಿನ್ ಉತ್ತಪ್ಪ ಅಮೋಘ ಶತಕ: ಹಾಲಿ ಚಾಂಪಿಯನ್ ದಕ್ಷಿಣ ವಲಯ ಪರ ಆಡುತ್ತಿರುವ ರಾಬಿನ್ ಉತ್ತಪ್ಪ ಅವರು ಪೂರ್ವ ವಲಯ ವಿರುದ್ಧ ಮೊದಲ ದಿನವೇ 103 ರನ್(15ನೇ ಪ್ರಥಮ ದರ್ಜೆ ಶತಕ) ಗಳಿಸಿದ್ದಾರೆ.

ಕಳೆದ ಬಾರಿ ಫೈನಲ್ ಪಂದ್ಯ ಮಳೆಯಿಂದ ರದ್ದಾಗಿ ಉತ್ತರ ಹಾಗೂ ದಕ್ಷಿಣ ವಲಯ ಎರಡು ಜಂಟಿ ಚಾಂಪಿಯನ್ ಗಳೆನಿಸಿದ್ದವು. ದಕ್ಷಿಣ ವಲಯ ತಂಡಕ್ಕೆ ಕರ್ನಾಟಕದ ವಿನಯ್ ಕುಮಾರ್ ನಾಯಕರಾಗಿದ್ದು, ತಂಡದಲ್ಲಿ ಕರ್ನಾಟಕದ ರಾಬಿನ್ ಉತ್ತಪ್ಪ, ಮಿಥುನ್ ಶ್ರೇಯಸ್ ಗೋಪಾಲ್, ಎಚ್ ಶರತ್ ಕೂಡಾ ಇದ್ದಾರೆ. ಮತ್ತೊಂದು ಸೆಮಿಫೈನಲ್ ನಲ್ಲಿ ಹಾಲಿ ಚಾಂಪಿಯನ್ ಉತ್ತರ ವಲಯ ವಿರುದ್ಧ ಕೇಂದ್ರ ವಲಯ ತಂಡ ಸೆಣಸಾಟ ನಡೆಸಿವೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+