35 ರನ್ ಗೆ ಸರ್ವಪತನ ಕಂಡ ರಾಜಸ್ಥಾನ
ನಾಗಪುರ, ನ.11 : ಒಂದು ತಂಡಕ್ಕೆ 50 ಓವರ್ ಆದರೆ ಎರಡು ತಂಡಕ್ಕೆ ಎಷ್ಟು? ಇದೆಂಥಾ ಪ್ರಶ್ನೆ ಅಂದುಕೊಂಡಿರಾ, 50 ಓವರ್ ಏಕದಿನ ಪಂದ್ಯ ಅಂದರೆ ಒಟ್ಟು 100 ಓವರ್ ಆಗುತ್ತದೆ. ಆದರೆ ಇಲ್ಲಿ ಇಡೀ ಪಂದ್ಯವೇ 21 ಓವರ್ ಗೆ ಮುಗಿದು ಹೋಗಿದೆ!
ರಾಜಸ್ಥಾನದ ಆಟಗಾರರಿಗೆ ಪೆವಿಲಿಯನ್ ಗೆ ಮರಳಲು ಅದೇಕೆ ಅಷ್ಟು ಗಡಿಬಿಡಿ ಇತ್ತೋ ಗೊತ್ತಿಲ್ಲ. ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಕೇವಲ 35 ರನ್ ಗಳಿಗೆ ಆಲ್ ಔಟ್ ಆದ ರಾಜಸ್ಥಾನ ಮಂಗಳವಾರ ರೈಲ್ವೇಸ್ ಗೆ ಸುಲಭ ತುತ್ತಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 15.3 ಓವರ್ ಗಳಲ್ಲಿ 35 ರನ್‌ಗೆ ಸರ್ವ ಪತನ ಕಂಡಿತು. ಈ ಮೊತ್ತವನ್ನು ಬೆನ್ನಟ್ಟಿದ ರೈಲ್ವೇಸ್ ತಂಡ 5.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ರಾಜಸ್ಥಾನದ ಐವರು ಆಟಗಾರರು ಸೊನ್ನೆ ಸುತ್ತಿದರು. ದೇಶಿ ಕ್ರಿಕೆಟ್‌ನಲ್ಲಿ ದಾಖಲಾದ ಎರಡನೇ ಅತಿ ಕಡಿಮೆ ಮೊತ್ತ ಇದಾಗಿದೆ. 2000ರಲ್ಲಿ ಮುಂಬೈ ವಿರುದ್ಧ ಸೌರಾಷ್ಟ್ರ 34 ರನ್‌ಗಳಿಗೆ ಆಲೌಟ್ ಆಗಿದ್ದು ದಾಖಲೆ.
ಜಾಗತಿಕವಾಗಿ ಇದು ಏಳನೇ ಅತಿ ಕಡಿಮೆ ಮೊತ್ತ. ರೈಲ್ವೇಸ್ ಪರ ಅನುರೀತ್ ಸಿಂಗ್ ಮತ್ತು ಅಮಿತ್ ಮಿಶ್ರಾ ತಲಾ ಐದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ರಾಜಸ್ತಾನ್ : 15.3 ಓವರ್‌ಗಳಲ್ಲಿ 35 ರನ್
ರೈಲ್ವೇಸ್ : 5.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 39ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications