For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ರೆಡ್‍ಬುಲ್ 'ಹಾರುವ' ಮೋಜಿನ ಕ್ರೀಡೆ

By Mahesh

ಬೆಂಗಳೂರು, ಜೂ. 26: ಮೋಟರ್ ಸ್ಪೋರ್ಟ್ಸ್, ಎನರ್ಜಿ ಡ್ರಿಂಕ್ಸ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿರುವ ರೆಡ್ ಬುಲ್ ಅಂಸ್ಥೆ ಈಗ ಮೋಜಿನ ಹಾರಾಟದ ಕ್ರೀಡೆಯನ್ನು ಭಾರತಕ್ಕೆ ತಂದಿದೆ. ಅದರಲ್ಲೂ ನಮ್ಮ ಬೆಂಗಳೂರಿನಲ್ಲೆ ಮೊದಲಿಗೆ ಈ ಹಾರಾಟದ ಕ್ರೀಡೆ ಫ್ಲುಟ್ಯಾಗ್ ನಡೆಯಲಿದೆ.

ಸೆಪ್ಟೆಂಬರ್.28,2014ರಂದು ಸ್ಯಾಂಕಿ ಟ್ಯಾಂಕ್ ನಲ್ಲಿ ನಮ್ಮ ದೇಶದ ವಿವಿಧೆಡೆಗಳಿಂದ ಬಂದಿರುವ ಹ್ಯಾಂಡ್ ಮೇಡ್ ಫ್ಲೈಯಿಂಗ್ ಮೆಷಿನ್ ಗಳೊಂದಿಗೆ ಹಾರಾಟ ನಡೆಸಲಿದ್ದಾರೆ. ಗುರುತ್ವಾಕರ್ಷಣೆಯೊಂದಿಗೆ ಸೆಣಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಜಿ ಅಹ್ವಾನಿಸಲಾಗಿದೆ.

ಫ್ಲುಟ್ಯಾಗ್ ಜರ್ಮನ್ ಪದವಾಗಿದ್ದು ಹಾರಾಟ ದಿನ ಎಂಬ ಅರ್ಥ ನೀಡುತ್ತದೆ. ಇದನ್ನು ಫ್ಲ್ಯೂಗ್‍ತಾಗ್(Floog Taag) ಎಂದು ಉಚ್ಚಾರಣೆ ಮಾಡುತ್ತಾರೆ. ರೆಡ್‍ಬುಲ್ ಫ್ಲ್ಯುಟ್ಯಾಗ್ ನಲ್ಲಿ ಭಾಗಿಯಾಗಲು ನೀವು ಓರ್ವ ತಜ್ಞ ಏರೋನ್ಯಾಟಿಕ್ಸ್ ಆಗಿರಬೇಕಿಲ್ಲ. ಕ್ರಾಫ್ಟನ್ನು ಮೂರು ಮಾನದಂಡಗಳಲ್ಲಿ ನಿರ್ಧರಿಸಲಾಗುತ್ತದೆ. ವಿಮಾನದ ಅಂತರ, ನಿರ್ಮಾಣ ಕ್ರಿಯಾಶೀಲತೆ ಮತ್ತು ಪ್ರದರ್ಶನ.

Red Bull Flugtag To Make India Debut In Bangalore On September 28th

ಆಸಕ್ತಿದಾಯಕ ಏವಿಯೇಟರ್ಸ್ ಅರ್ಜಿ ಸಲ್ಲಿಸಬಹುದು. ನಿಮ್ಮದೇ ಸ್ವಂತ ಕ್ರಾಫ್ಟ್ಸ್-ಚಪ್ಪಲ್ಸ್, ಕ್ಯಾಟಲ್, ಕಾರ್ಟೂನ್ ಪಾತ್ರಗಳನ್ನು ಸೃಷ್ಟಿಸಬಹುದು.

4 ಜನರ 40 ತಂಡಗಳನ್ನು ಆಯ್ಕೆ ಮಾಡಿ ಸಣ್ಣ ಪುಟ್ಟ ಪರೀಕ್ಷೆಗೆ ಒಳಪಡಿಸಲಾಗುವುದು. ಧೈರ್ಯ ಹೊಂದಿರುವ ತಂಡ ಸ್ಯಾಂಕಿ ಟ್ಯಾಂಕಿಯಲ್ಲಿ 20 ಅಡಿ ಎತ್ತರದಲ್ಲಿ ಹಾರಾಟ ನಡೆಸಲಿದೆ. ನಿಮ್ಮದೇ ಸ್ವಂತ ಎಂಟ್ರಿ ಕಿಟ್ ಪಡೆಯಲು ಜುಲೈ.23 ಕೊನೆಯ ದಿನ.

ಹಾರುವ ಮೋಜು: ಹಲವಾರು ವರ್ಷಗಳಿಂದ ನಾವು ನಾಯಕಿಯರು ನಾಯಕನ ಪಕ್ಕದಲ್ಲಿ ಸಿನೀಮಯವಾಗಿ ಹಾರುವುದನ್ನು ನೋಡಿದ್ದೇವೆ. ರಜನಿಯ ಪಂಚ್ ನಿಂದ ವಿಲಿನ್ಸ್ ಗಳು, ಕಾರುಗಳು ನೂರಾರು ಅಡಿ ಎತ್ತರಕ್ಕೆ ಹಾರುತ್ತವೆ. ಬಾಲಿವುಡ್ ಜಗತ್ತು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ.

ಆದರೆ ಸಿನಿಮಾ ನಾಯಕ-ನಾಯಕಿಯರು ಮಾತ್ರ ಈ ಮನರಂಜನೆ ಹೊಂದಬೇಕೆ? ಭಾರತದ ಏರೋನ್ಯಾಟಿಕಲ್ ವಂಡರ್ ಈ ವರ್ಷ ತನ್ನ 'ವಾನ್ಸ್'ನ್ನು ಬಿಡುಗಡೆಗೊಳಿಸಿದೆ. ವಿಶ್ವದ ಬೃಹತ್ ಹೋಮ್ ಮೇಡ್, ಮಾನವ ಆಧಾರಿತ ವಿಮಾನ ಹಾರಾಟ ಸ್ಪರ್ಧೆ ರೆಡ್‍ಬುಲ್ ಫ್ಲುಟ್ಯಾಗ್ ಭಾರತಕ್ಕೆ ಕಾಲಿಡಲು ವೇದಿಕೆ ಸಜ್ಜಾಗಿದ್ದು ಇದು ಉದ್ಯಾನ ನಗರಿ ಮತ್ತು ತಾಂತ್ರಿಕ ನಗರಿಗೆ ಕಾಲಿಡುತ್ತಿದೆ.

ಹೆಚ್ಚಿನ ವಿವರ ಗಳಿಗೆ ಸಂಪರ್ಕಿಸಿ:
* ಅರ್ಜಿ ಸಲ್ಲಿಸಲು ಲಿಂಕ್ ಕ್ಲಿಕ್ ಮಾಡಿ
* ರೆಡ್ ಬುಲ್ ವೆಬ್ ತಾಣ:
* ರೆಡ್ ಬುಲ್ ಫೇಸ್ ಬುಕ್ ಪುಟ

ಐರ್ಲೆಂಡ್ ನಲ್ಲಿ ಈ ಹಿಂದೆ ನಡೆದ ರೆಡ್ ಬುಲ್ ಫ್ಲುಟ್ಯಾಗ್ ಹಾರಾಟದ ದಿನದ ಮೋಜಿನ ದೃಶ್ಯಾವಳಿ ವಿಡಿಯೋ ನೋಡಿ:


Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+