For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್‌ 13ನೇ ಆವೃತ್ತಿಗೆ ನೋಂದಣಿ ಆರಂಭ

Registration open for 13th Edition of Bangalore Midnight Marathon

ಬೆಂಗಳೂರು, ಅಕ್ಟೋಬರ್ 25: ಬೆಂಗಳೂರು ಮಿಡ್‌ನೈಟ್‌ ಮ್ಯಾರಥಾನ್ 13ನೇ ಆವೃತ್ತಿಗೆ ನೋಂದಣಿ ಆರಂಭವಾಗಿದೆ. 2019ರ ಫೋನ್‌ ಪೇ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್ ಡಿಸೆಂಬರ್ 7ರಂದು ನಡೆಯಲಿದೆ. ಸಾವಿರಾರು ವೃತ್ತಿ ಪರ ಓಟಗಾರರು, ಅಂತಾರಾಷ್ಟ್ರೀಯ ಕ್ರೀಡಾ ಪಟುಗಳು, ಕ್ರೀಡಾಸಕ್ತರು, ಕಾರ್ಪೋರೇಟ್ ಮತ್ತು ಎನ್‌ಜಿಒಗಳು ಸ್ಪರ್ಧಿಸುವ ನಿರೀಕ್ಷೆಯಿದೆ.

ಸಾಮಾಜಿಕ ಉದ್ಧಾರ, ಜನಜಾಗೃತಿ, ಫಿಟ್ನೆಸ್ ಇತ್ಯಾಧಿ ವಿವಿಧ ಉದ್ದೇಶಗಳನ್ನಿಟ್ಟುಕೊಂಡು ನಡೆಸಲಾಗುತ್ತಿರುವ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಮಿಡ್‌ನೈಟ್‌ ಮ್ಯಾರಥಾನ್ ಕೂಡ ಅಷ್ಟೇ ಜನಪ್ರಿಯವಾಗಿದೆ. ಈ ಬಾರಿಯ ಬೆಂಗಳೂರು ಮಿಡ್‌ನೈಟ್‌ ಮ್ಯಾರಥಾನ್‌ನಲ್ಲಿ ಸುಮಾರು 12,000ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವುದನ್ನು ನಿರೀಕ್ಷಿಸಲಾಗಿದೆ.

ಮಿಡ್‌ನೈಟ್‌ ಮ್ಯಾರಥಾನ್‌ನ ವೈಯಕ್ತಿಕ ಮತ್ತು ರಿಲೇ ಈವೆಂಟ್‌ಗಳ ಆನ್‌ಲೈನ್ ನೋಂದಣಿಗಳು ಈಗಾಗಲೇ ಪ್ರಾರಂಭವಾಗಿವೆ. ಭಾಗವಹಿಸಲಿಚ್ಛಿಸುವವರು www.midnightmarathon.inಗೆ ಲಾಗ್ ಇನ್ ಆಗುವ ಮೂಲಕ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಈ ವರ್ಷದ ಥೀಮ್ 'ರನ್ ಫಾರ್ ಡಿಜಿಟಲ್ ಇಂಡಿಯಾ' ಆಗಿರುತ್ತದೆ.

Registration open for 13th Edition of Bangalore Midnight Marathon

ಸ್ಪರ್ಧಾ ವಿಭಾಗಗಳು
ಡಿಸೆಂಬರ್ 7ರಂದು ನಡೆಯುವ ಪ್ರಮುಖ ಕಾರ್ಯಕ್ರಮಗಳಲ್ಲಿ ಫೋನ್‌ಪೇ ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, ಅಕಮೈ 10ಕೆ ರನ್, ಏರ್‌ಬಸ್ 5ಕೆ ಐಟಿ ಸಿಟಿ ಫನ್ ರನ್, ಕಮ್ಯುನಿಟಿ ರಿಲೇ, ಕಾರ್ಪೊರೇಟ್ ಮತ್ತು ಫಿಟ್‌ನೆಸ್ ಸ್ಟಾರ್ಟ್ಅಪ್ ರಿಲೇ ಸ್ಪರ್ಧೆಗಳು ಸೇರಿವೆ. ಜೊತೆಗೆ ಈ ದಿನ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ.

ಓಟಗಳ ಆರಂಭ
ಎಲ್ಲಾ ರೇಸ್‌ಗಳ ಸಮಯ ಬದಲಾಗಿದೆ. 5ಕೆ ರನ್‌ 5.30 pmಗೆ ಚಾಲನೆ ನೀಡಲಾಗುತ್ತದೆ. 10ಕೆ ರನ್ 7 pmಗೆ, ಫುಲ್ ಮ್ಯಾರಥಾನ್ 9 pmಗೆ, ಹಾಫ್ ಮ್ಯಾರಥಾನ್ 9.10 pmಗೆ ಶುರುವಾಗಲಿದೆ. ಕಾರ್ಪೋರೇಟ್/ ಫಿಟ್ ನೆಸ್ ಸ್ಟಾರ್ಟ್ ಅಪ್ ರಿಲೇ ರಾತ್ರಿ 9.20 pmಗೆ ಆರಂಭಗೊಳ್ಳಲಿದೆ.

ನಡೆಯುವ ಸ್ಥಳ
ಬೆಂಗಳೂರಿನ ವೈಟ್‌ಫೀಲ್ಡ್ ಇಂಡಸ್ಟ್ರಿಯಲ್ ಏರಿಯಾದಲ್ಲಿನ ಕರ್ನಾಟಕ ಟ್ರೇಡ್ ಪ್ರಮೋಷನ್ ಆರ್ಗನೈಸೇಷನ್ (ಕೆಟಿಪಿಒ)ನಲ್ಲಿ ನಡೆಯುತ್ತಿರುವ ಈ ಕ್ರೀಡಾ ಸ್ಪರ್ಧೆಯನ್ನು ರೋಟರಿ ಬೆಂಗಳೂರು ಐಟಿ ಕಾರಿಡಾರ್
(ಆರ್‌ಬಿಐಟಿಸಿ) ಆಯೋಜಿಸಿದೆ. ವಿಜೇತರಿಗೆ ನಗದು ಪುರಸ್ಕಾರವೂ ಲಭಿಸಲಿದೆ.

Story first published: Thursday, October 24, 2019, 20:06 [IST]
Other articles published on Oct 24, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+