ಬಿಸಿಸಿಐ ನೋಡಿದ್ಮೇಲೆ ಧೋನಿ ಸಿನಿಮಾಕ್ಕೆ ಮುಕ್ತಿ
ಬೆಂಗಳೂರು, ಜ.19: ಬಾಲಿವುಡ್ ನಲ್ಲಿ ಕ್ರೀಡಾಪಟುಗಳ ಕುರಿತ ಜೀವನ ಚರಿತ್ರೆ ಚಿತ್ರಗಳು ಕ್ಲಿಕ್ ಆಗಿರುವ ಬೆನ್ನಲ್ಲೇ ವಿವಾದಗಳು ಎದ್ದಿದ್ದು ಎಲ್ಲರಿಗೂ ಗೊತ್ತೇ ಇದೆ. ಭರ್ಜರಿ ಯಶಸ್ಸು ಕಂಡ ಪ್ರಿಯಾಂಕಾ ಛೋಪ್ರಾ ನಟನೆ ಬಾಕ್ಸರ್ ಮೇರಿ ಕೋಮ್ ಚಿತ್ರ ಕೂಡಾ ಇದಕ್ಕೆ ಹೊರತಲ್ಲ. ಈಗ ಎಂಎಸ್ ಧೋನಿ ಚಿತ್ರ ಬಿಡುಗಡೆ ಕೂಡಾ ನಿರ್ಬಂಧಗಳ ನಡುವೆ ಸಾಗುತ್ತಿದೆ.
ಟೀಂ ಇಂಡಿಯಾದ ಸ್ಟೈಲಿಶ್ ನಾಯಕ ಎಂಎಸ್ ಧೋನಿ ಅವರ ಜೀವನ ಕುರಿತಂತೆ ಯಾರಿಗೂ ತಿಳಿಯದ ಕಥೆ ಆಧಾರಿಸಿದ ಚಿತ್ರ ತೆರೆಗೆ ಬರಲಿದ್ದು, ಚಿತ್ರದ ಮೊದಲ ಪೋಸ್ಟರ್ ಕಳೆದ ಸೆಪ್ಟೆಂಬರ್ 2014ರಲ್ಲಿ ಬಹಿರಂಗಗೊಂಡಿತ್ತು, ಈಗ ಚಿತ್ರದ ಬಿಡುಗಡೆಯ ದಿನಾಂಕವನ್ನು ನಾಯಕ ನಟ ಸುಶಾಂತ್ ಸಿಂಗ್ ಟ್ವೀಟ್ ಮಾಡಿ ತಿಳಿಸಿದ್ದಾರೆ. [ಸಿನಿಮಾ ಫಸ್ಟ್ ಪೋಸ್ಟರ್ ನೋಡಿ]

ಧೋನಿ ಕುರಿತ ಈ ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸುತ್ತಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಸಕತ್ ಕಿಕ್ ನೀಡುವ ಚಿತ್ರ ಇದಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಸುಶಾಂತ್ ಅವರು ಧೋನಿ ಅವರ ಲಕ್ಕಿ ನಂಬರ್ 7 ಇರುವ ಜರ್ಸಿಯನ್ನೇ ಧರಿಸಿದ್ದಾರೆ.
ಬಿಸಿಸಿಐ ನಿರ್ಬಂಧ: ಧೋನಿ ಅವರ ವೃತ್ತಿ ಬದುಕಿಗೆ ಹಾನಿಯಾಗದಂತೆ ಚಿತ್ರವನ್ನು ನಿರ್ಮಾಣ ಮಾಡಬೇಕೆಂದು ಬಿಸಿಸಿಐ ತಾಕೀತು ಮಾಡಿದೆ.ಈ ಚಿತ್ರಕ್ಕೆ ಒಪ್ಪಿಗೆ ನೀಡುವುದಕ್ಕೆ ಧೋನಿ ಅವರು ಸುಮಾರು 40 ಕೋಟಿ ರು ಪಡೆದುಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ.ಧೋನಿ ಪತ್ನಿ ಪಾತ್ರ ಯಾರು ಮಾಡುತ್ತಿದ್ದಾರೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ.
ಟೆಸ್ಟ್ ಕ್ರಿಕೆಟ್ ನಿಂದ ಧೋನಿ ಇತ್ತೀಚೆಗೆ ನಿವೃತ್ತಿ ಪಡೆದುಕೊಂಡಿದ್ದರು. ಈಗ ಐಸಿಸಿ ವಿಶ್ವಕಪ್ 2015ನಲ್ಲಿ ಟೀಂ ಇಂಡಿಯಾ ಮುನ್ನಡೆಸುತ್ತಿರುವ ಧೋನಿ ಅವರು ವಿಶ್ವಕಪ್ ನಿವೃತ್ತರಾಗುತ್ತಾರಾ? ಎಂಬ ಪ್ರಶ್ನೆಯೂ ಎದ್ದಿದೆ. ವಿಶ್ವಕಪ್ ನಂತರವಷ್ಟೇ ಈ ಚಿತ್ರದ ಪ್ರಚಾರ ಕಾರ್ಯ ನಡೆಸಬೇಕಾಗುತ್ತದೆ ಜೊತೆಗೆ ಬಿಸಿಸಿಐ ಧೋನಿ ಚಿತ್ರವನ್ನು ನೋಡಿ ಓಕೆ ಎನ್ನದ ಹೊರತು ಚಿತ್ರಮಂದಿರದಲ್ಲಿ ಧೋನಿ ಜರ್ಸಿ ತೊಟ್ಟ ಸುಶಾಂತ್ ನೋಡಲು ಸಾಧ್ಯವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications